ಆಳಂದ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅವಕಾಶ: ಧಿಡೀರನೆ ಬದಲಾದ ಚಿತ್ರಣ- ಕಲ್ಲು ತೂರಾಟದ ನಡುವೆ ಪೂಜೆ ಮಾಡಿ ಹೊರಬಂದ ತಂಡ

| Updated By: ಆಯೇಷಾ ಬಾನು

Updated on: Mar 01, 2022 | 4:10 PM

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಲಾಡ್ಲೇ ಮಶಾಕ್ ದರ್ಗಾವಿದೆ. ಅದೇ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗವಿದೆ. ಸಾಮಾನ್ಯವಾಗಿ ಕೆಲವರು ಈ ಲಿಂಗಕ್ಕೆ ಹೋಗಿ ಪ್ರತಿದಿನ ನಮಸ್ಕಾರ ಮಾಡುವುದು, ಪೂಜೆ ಮಾಡುವುದನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.

ಆಳಂದ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅವಕಾಶ: ಧಿಡೀರನೆ ಬದಲಾದ ಚಿತ್ರಣ- ಕಲ್ಲು ತೂರಾಟದ ನಡುವೆ  ಪೂಜೆ ಮಾಡಿ ಹೊರಬಂದ ತಂಡ
ಬೂದಿ ಮುಚ್ಚಿದ ಕೆಂಡದಂತಾದ ಆಳಂದ
Follow us on

ಕಲಬುರಗಿ: ಇಂದು ಮಹಾಶಿವರಾತ್ರಿ(MahaShivratri). ಎಲ್ಲರು ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಆದ್ರೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತ್ರ ಜನರು ಬೀದಿಗಿಳಿದು ಧರಣಿ, ಪ್ರತಿಭಟನೆ ನಡೆಸಿದ್ದಾರೆ. ಇಡೀ ಪಟ್ಟಣ ಮತ್ತು ತಾಲೂಕು ಪೊಲೀಸರಿಂದ ತುಂಬಿದೆ. ಅನೇಕರು ಬಡಿಗೆ, ಮಚ್ಚು ಪ್ರದರ್ಶಿಸಿದ್ರೆ, ಮತ್ತೊಂದೆಡೆ ಅನೇಕರು ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿದ್ದಾರೆ. ಬೆಳಗ್ಗಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಆಳಂದಲ್ಲಿ ಇನ್ನಷ್ಟು ಜ್ವಾಲೆ ಹೆಚ್ಚಿದೆ. ಸದ್ಯ ದರ್ಗಾದಲ್ಲಿರುವ ಶಿವಲಿಂಗ ಪೂಜೆಗೆ ಆಗ್ರಹಿಸಿ ಬೆಳಗ್ಗೆ ನಡೆಯುತ್ತಿದ್ದ ಧರಣಿಯನ್ನು ಕೈ ಬಿಡಲಾಗಿದ್ದು ಆಳಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ಹಾಕಲಾಗಿದ್ದ ಟೆಂಟ್ ತೆರವುಗೊಳಿಸಲಾಗಿದೆ. ಆದ್ರೆ ದರ್ಗಾ ಮುಂದೆ ಸೇರಿರೋ ನೂರಾರು ಜನರು ಪೂಜೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಲ್ಲು ತೂರಾಟ ಕೂಡ ನಡೆದಿದೆ. 

ಏನಿದು ವಿವಾದ?
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಲಾಡ್ಲೇ ಮಶಾಕ್ ದರ್ಗಾವಿದೆ. ಅದೇ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗವಿದೆ. ಸಾಮಾನ್ಯವಾಗಿ ಕೆಲವರು ಈ ಲಿಂಗಕ್ಕೆ ಹೋಗಿ ಪ್ರತಿದಿನ ನಮಸ್ಕಾರ ಮಾಡುವುದು, ಪೂಜೆ ಮಾಡುವುದನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಆದ್ರೆ ಕೆಲ ತಿಂಗಳ ಹಿಂದೆ ದರ್ಗಾದಲ್ಲಿರುವ ಲಿಂಗವನ್ನು ಮತ್ತೊಂದು ಕೋಮಿನ ಜನರು ಮಲಮೂತ್ರ ಮಾಡಿ, ಲಿಂಗಕ್ಕೆ ಅಪಮಾನ ಮಾಡಿದ್ದರಂತೆ. ಹೀಗಾಗಿ ಶಿವರಾತ್ರಿ ಅಂಗವಾಗಿ ಇಂದು ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗವನ್ನು ಗಂಗಾ ಜಲದಿಂದ ಶುದ್ಧೀಕರಿಸಿ, ಲಿಂಗಕ್ಕೆ ಪೂಜೆ ಮಾಡುವುದಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದರು. ಅದರಂತೆ ಐದು ದಿನದ ಹಿಂದೆ ಶಿವಮಾಲೆಯನ್ನು ಕೂಡಾ ಧರಿಸಿದ್ದರು. ಶಿವಮಾಲೆ ಧರಿಸಿದ್ದ ನೂರಾರು ಹಿಂದೂಪರ ಕಾರ್ಯಕರ್ತರು, ಇಂದು ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಮಾಡಿ, ವೃತವನ್ನು ಸಂಪನ್ನ ಮಾಡುವುದಾಗಿ ಹೇಳಿದ್ದರು.

ಕಲಬುರಗಿ ನಗರದ ಅನೇಕ ಕಡೆ ನಿಷೇದಾಜ್ಞೆ
ಇಂದಿನ ಕಾರ್ಯಕ್ರಮಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ, ಚೈತ್ರಾ ಕುಂದಾಪುರ ಕೂಡಾ ಬರುವವರಿದ್ದರು. ಆದ್ರೆ ಪಟ್ಟಣದಲ್ಲಿ ಕೋಮ ಸಂಘರ್ಷ ಹೆಚ್ಚಾಗುವ ಆತಂಕದಿಂದ ಜಿಲ್ಲಾಡಳಿತ ಮತ್ತು ಪೊಲೀಸರು ಕೆಲ ಕ್ರಮಗಳನ್ನು ಕೈಗೊಂಡಿದ್ದರು. ಅದರ ಪ್ರಕಾರ, ಜಿಲ್ಲೆಗೆ ಪ್ರಮೋದ್ ಮುತಾಲಿಕ ಮತ್ತು ಚೈತ್ರಾ ಕುಂದಾಪುರ್ಗೆ ನಿರ್ಬಂದ ಹೇರಿದ್ದರು. ಶ್ರೀರಾಮ ಸೇನೆ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗೆ ಆಳಂದಕ್ಕೆ ನಿರ್ಬಂದ ವಿಧಿಸಿದ್ದರು. ಆಳಂದ ತಾಲೂಕು ಮತ್ತು ಕಲಬುರಗಿ ನಗರದ ಅನೇಕ ಕಡೆ ನಿಷೇದಾಜ್ಞೆ ಕೂಡಾ ವಿಧಿಸಲಾಗಿತ್ತು. ಇನ್ನು ಹತ್ತು ಜನರಿಗೆ ಲಿಂಗಕ್ಕೆ ಪೂಜೆಗೆ ಅವಕಾಶವನ್ನು ಜಿಲ್ಲಾಳಿತ ನೀಡಿತ್ತು. ಅದರಂತೆ ಇಂದು ಕೇಂದ್ರ ಸಚಿವ ಭಗವಂತ ಕೂಬಾ, ಶಾಸಕರಾದ ರಾಜಕುಮಾರ್ ಪಾಟೀಲ್, ಬಸವರಾಜ್ ಮತ್ತಿಮೂಡ್ ಸೇರಿದಂತೆ ಹತ್ತು ಜನರಿಗೆ ಅವಕಾಶ ನೀಡಲಾಗಿತ್ತು. ಆದ್ರೆ ನೂರಾರು ಜನರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಳಂದಕ್ಕೆ ಹೊರಟಿದ್ದರಿಂದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅನೇಕರನ್ನು ಕಲಬುರಗಿಯಲ್ಲಿಯೇ ಪೊಲೀಸರು ವಶಕ್ಕೆ ಪಡೆದ್ರು.

ಇತ್ತ ಅನೇಕರ ಜೊತೆ ಕೇಂದ್ರ ಸಚಿವ ಭಗವಂತ ಖುಬಾ ಮತ್ತು ಶಾಸಕರು, ದರ್ಗಾದಲ್ಲಿರುವ ಲಿಂಗಕ್ಕೆ ಪೂಜೆ ಸಲ್ಲಿಸಲು ಹೊರಟಿದ್ದರು. ಆದ್ರೆ ದರ್ಗಾದ ಬಳಿ ಸೇರಿದ ನೂರಾರು ಜನರು ಕೈಯಲ್ಲಿ ಬಡಿಗೆ, ಮಚ್ಚುಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ರು. ನೂರಾರು ಮಹಿಳೆಯರು ಕೂಡಾ ಸೇರಿಕೊಂಡರು. ಒಂದೆಡೆ ಹಿಂದೂಪರ ಕಾರ್ಯಕರ್ತರು ಮತ್ತೊಂದಡೆ ಮುಸ್ಲಿಂ ಜನರು ಏಕಕಾಲಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ನಮಗೆ ಪೂಜೆಗೆ ಜಿಲ್ಲಾಢಳಿತ ಅವಕಾಶ ನೀಡಿದೆ. ಆದ್ರೆ ಪೂಜೆಗೆ ಹೊರಟಿದ್ದ ನಮಗೆ ಅವಕಾಶ ಸಿಗ್ತಿಲ್ಲಾ. ಮತ್ತೊಂದು ಧರ್ಮಿಯರು ಕೈಯಲ್ಲಿ ಬಡಿಗೆ, ಮಚ್ಚು ಹಿಡಿದು ನಿಂತಿದ್ದಾರೆ. ಅವರೆಲ್ಲ ಸ್ಥಳೀಯರಲ್ಲ, ಬೇರೆಡೆಯಿಂದ ಬಂದು ಇಲ್ಲಿ ಶಾಂತಿ ಕದಡುತ್ತಿದ್ದಾರೆ. ನಮಗೆ ಪೂಜೆಗೆ ಅವಕಾಶ ಸಿಗೋವರಗೆ ನಾವು ಇಲ್ಲಿಂದ ಕದಲಲ್ಲಾ ಅಂತ ಶಾಸಕ ತೇಲ್ಕೂರ್ ಮತ್ತು ಹಿಂದೂಪರ ಕಾರ್ಯಕರ್ತರು ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಧರಣಿ ನಡೆಸಿದ್ರು. ರಸ್ತೆಯಲ್ಲಿಯೇ ಕೂತು, ಭಜನೆ ಮಾಡಿದ್ರು. ಹೀಗಾಗಿ ಆಳಂದ ಬೂದಿ ಮುಚ್ಚಿದ ಕೆಂಡದಂತಿತ್ತು. ಇಡೀ ಪಟ್ಟಣದಾದ್ಯಂತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಜಿಲ್ಲಾಡಳಿತ ಮತ್ತು ಪೊಲೀಸರು 10 ಜನರಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

ಸದ್ಯ ಆಳಂದ ಪಟ್ಟಣದಲ್ಲಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಮಾತನಾಡಿದ್ದು, ಮಸೀದಿಯಲ್ಲಿ ಆತಂಕವಾದಿಗಳ ರೂಪದಲ್ಲಿ ಕೆಲವರು ಸೇರಿದ್ದರು. ಜಿಲ್ಲಾಡಳಿತ ಸುಸುತ್ರವಾಗಿ ಪೂಜೆ ಮಾಡಲು ಅವಕಾಶ ನೀಡೋದಾಗಿ ಹೇಳಿದ್ದಾರೆ. ರಾಘವ ಚೈತನ್ಯ ಲಿಂಗಕ್ಕೆ ಪೂಜೆಗೆ ಅವಕಾಶ ನೀಡೋದಾಗಿ ಹೇಳಿದ್ದಾರೆ. ದರ್ಗಾದಲ್ಲಿದ್ದವರ ಬಳಿ ಮಾರಕಾಸ್ತ್ರಗಳನ್ನು ಜಪ್ತಿ ಮಾಡುತ್ತಿದ್ದಾರೆ. ನಮಗೆ ಪೂಜೆಗೆ ಅವಕಾಶ ಕಲ್ಪಿಸುತ್ತಿರೋ ಹಿನ್ನೆಲೆ ಧರಣಿ ಕೈಬಿಡುತ್ತಿದ್ದೇವೆ. ಆಳಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಪರ ಕಾರ್ಯಕರ್ತರು ಮನೆಗೆ ತೆರಳುತ್ತಿದ್ದಾರೆ. 10 ಮಂದಿ ಮಾತ್ರ ಪೂಜೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಧಿಡೀರನೆ ಬದಲಾದ ಚಿತ್ರಣ- ಕಲ್ಲು ತೂರಾಟ ಆರಂಭ
ಇನ್ನು ದರ್ಗಾ ಮುಂದೆ ನೂರಾರು ಜನರು ಸೇರಿದ್ದು ಪೊಲೀಸರು ಸೇರಿದಂತೆ ಅನೇಕರ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲೆಸೆದಿದ್ದರಿಂದ ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಕಾರಿನ ಗಾಜು ಪುಡಿ ಪುಡಿ ಆಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ದರ್ಗಾದಲ್ಲಿರೋ ಲಿಂಗಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ ವೇಳೆ ಪೂಜೆಗೆ ಹೋಗುತ್ತಿದ್ದವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಹಿಂದೂ ಸಂಘಟನೆಗಳು ಧರಣಿ ನಡೆಸುತ್ತಿದ್ದು ಯಾವುದೇ ಕಾರಣಕ್ಕೂ ದರ್ಗಾ ಪ್ರವೇಶಿಸಲು ಬಿಡಲ್ಲವೆಂದು ಪಟ್ಟು. 2 ಸಮುದಾಯದವರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಅಶ್ರುವಾಯ ಪ್ರಯೋಗಿಸಿದ್ದಾರೆ.

ಕಲ್ಲು ತೂರಾಟದ ನಡುವೆ ಪೂಜೆ ಮಾಡಿ ಹೊರಬಂದ ತಂಡ
ದರ್ಗದ ಆಚೆ ಹಿಂದೂ ಸಂಘಟನೆ ಹಾಗೂ ಮುಸ್ಲಿಂರ ನಡುವೆ ಗಲಾಟೆ ನಡೆಯುತ್ತಿದ್ದು ಮತ್ತೊಂದೆಡೆ ದರ್ಗಾದಲ್ಲಿರೋ ರಾಘವ ಚೈತನ್ಯ ಲಿಂಗಕ್ಕೆ ಬಿಜೆಪಿ ಮುಖಂಡರು ಪೂಜೆ ಮಾಡಿದ್ದಾರೆ. ಕಲ್ಲು ತೂರಾಟದ ನಡುವೆ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ರಾಜಕುಮಾರ ಪಾಟೀಲ್, ಬಸವರಾಜ್ ಮತ್ತಿಮೂಡು, ಕಡಗಂಚಿ ಮಠದ ಸ್ವಾಮೀಜಿ ಸೇರಿ ಹತ್ತು ಜನರ ತಂಡ ಪೂಜೆ ಮಾಡಿ ಹೊರಬಂದಿದ್ದಾರೆ.

ಇದನ್ನೂ ಓದಿ: Ipl 2022: ತಂಡದಿಂದ ಜೇಸನ್ ರಾಯ್ ಔಟ್: ಗುಜರಾತ್ ಟೈಟನ್ಸ್​ಗಿದೆ ಹಲವು ಆಯ್ಕೆ

Big Breaking: ರಷ್ಯಾ ದಾಳಿಗೆ ಉಕ್ರೇನ್​​ನಲ್ಲಿದ್ದ ಕರ್ನಾಟಕದ ವಿದ್ಯಾರ್ಥಿ ದುರ್ಮರಣ; ಖಚಿತ ಪಡಿಸಿದ ವಿದೇಶಾಂಗ ಇಲಾಖೆ

Published On - 3:41 pm, Tue, 1 March 22