Ipl 2022: ತಂಡದಿಂದ ಜೇಸನ್ ರಾಯ್ ಔಟ್: ಗುಜರಾತ್ ಟೈಟನ್ಸ್ಗಿದೆ ಹಲವು ಆಯ್ಕೆ
Jason roy replacement: ಇದಾಗ್ಯೂ ಗುಜರಾತ್ ಟೈಟನ್ಸ್ ಮುಂದೆ ಇನ್ನೂ ಅನೇಕ ಆಯ್ಕೆಗಳಿವೆ. ಏಕೆಂದರೆ ಉತ್ತಮ ಫಾರ್ಮ್ನಲ್ಲಿರುವ ಕೆಲ ಆಟಗಾರರು ಈ ಬಾರಿ ಅನ್ಸೋಲ್ಡ್ ಆಗಿದ್ದರು. ಹೀಗಾಗಿ ಇವರಲ್ಲಿ ಒಬ್ಬರನ್ನು ಗುಜರಾತ್ ತಂಡವು ಬದಲಿ ಆಟಗಾರನಾಗಿ ಆಯ್ಕೆ ಮಾಡಬಹುದು. ಅವರೆಂದರೆ...
ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಸನ್ ರಾಯ್ ಬಯೋ ಬಬಲ್‌ನ ಕಾರಣದಿಂದ ಐಪಿಎಲ್ ಸೀಸನ್ 15 ನಿಂದ ಹಿಂದೆ ಸರಿದಿದ್ದಾರೆ. ಈ ಬಾರಿ ಗುಜರಾತ್ ಟೈಟನ್ಸ್ ತಂಡವು ಜೇಸನ್ ರಾಯ್ ಅವರನ್ನು 2 ಕೋಟಿಗೆ ಖರೀದಿಸಿತ್ತು. ಇದೀಗ ಟೂರ್ನಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ರಾಯ್ ತಂಡದಿಂದ ಹೊರಗುಳಿದಿದ್ದಾರೆ. ಇದು ಗುಜರಾತ್ ಟೈಟನ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಏಕೆಂದರೆ ಯುವ ಶುಭ್ಮನ್ ಗಿಲ್ ಅವರೊಂದಿಗೆ ಆರಂಭಿಕನಾಗಿ ಕಣಕ್ಕಿಳಿಸಲು ಸ್ಪೆಷಲಿಸ್ಟ್ ಓಪನರ್ ರಾಯ್ ಅವರನ್ನು ಆಯ್ಕೆ ಮಾಡಿದ್ದರು. ಅಷ್ಟೇ ಅಲ್ಲದೆ ರಾಯ್ ಇತ್ತೀಚೆಗೆ PSL ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಅತ್ಯುತ್ತಮವಾಗಿ ಆಡಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ IPL ನಿಂದ ಹಿಂದೆ ಸರಿದಿದ್ದಾರೆ. ಇದಾಗ್ಯೂ ಗುಜರಾತ್ ಟೈಟನ್ಸ್ ಮುಂದೆ ಇನ್ನೂ ಅನೇಕ ಆಯ್ಕೆಗಳಿವೆ. ಏಕೆಂದರೆ ಉತ್ತಮ ಫಾರ್ಮ್ನಲ್ಲಿರುವ ಕೆಲ ಆಟಗಾರರು ಈ ಬಾರಿ ಅನ್ಸೋಲ್ಡ್ ಆಗಿದ್ದರು. ಹೀಗಾಗಿ ಇವರಲ್ಲಿ ಒಬ್ಬರನ್ನು ಗುಜರಾತ್ ತಂಡವು ಬದಲಿ ಆಟಗಾರನಾಗಿ ಆಯ್ಕೆ ಮಾಡಬಹುದು. ಅವರೆಂದರೆ…
ರಹಮಾನುಲ್ಲಾ ಗುರ್ಬಾಜ್: ಅಫ್ಘಾನಿಸ್ತಾನದ 20 ರ ಹರೆಯದ ಆರಂಭಿಕ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ ಅವರ ಖರೀದಿಗೆ ಗುಜರಾತ್ ಟೈಟನ್ಸ್ ಮುಂದಾಗಬಹುದು. ಏಕೆಂದರೆ ಗುರ್ಬಾಜ್ ಬಲಗೈ ಬ್ಯಾಟ್ಸ್‌ಮನ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ. ಹಾಗೆಯೇ ಸ್ಫೋಟಕ ಓಪನಿಂಗ್‌ಗೆ ಹೆಸರುವಾಸಿಯಾಗಿರುವ ಆಟಗಾರ. ಗುರ್ಬಾಜ್ ಇದುವರೆಗೆ 67 T20 ಪಂದ್ಯಗಳಲ್ಲಿ 1617 ರನ್ ಗಳಿಸಿದ್ದಾರೆ. ಈ ವೇಳೆ ಅವರ ಸ್ಟ್ರೈಕ್ ರೇಟ್ 150 ಕ್ಕಿಂತ ಹೆಚ್ಚಿರುವುದು ವಿಶೇಷ.
ಬೆನ್ ಮೆಕ್‌ಡರ್ಮಾಟ್: ಗುಜರಾತ್ ಟೈಟನ್ಸ್ ಮತ್ತೊಬ್ಬ ಆರಂಭಿಕ-ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ನನ್ನು ಖರೀದಿಸುವ ಆಯ್ಕೆಯನ್ನು ಹೊಂದಿದೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಬೆನ್ ಮೆಕ್‌ಡರ್ಮಾಟ್ 13 ಪಂದ್ಯಗಳಲ್ಲಿ 577 ರನ್ ಗಳಿಸಿದ್ದರು. ಈ ವೇಳೆ ಮೆಕ್‌ಡರ್ಮಾಟ್ 2 ಶತಕಗಳನ್ನು ಬಾರಿಸಿದ್ದರು. ಹೀಗಾಗಿ ಬೆನ್ ಅವರ ಖರೀದಿಗೂ ಟೈಟನ್ಸ್ ಫ್ರಾಂಚೈಸಿ ಆಸಕ್ತಿ ತೋರಲಿದೆ.
ಮಾರ್ಟಿನ್ ಗಪ್ಟಿಲ್: ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಅವರನ್ನು ಬದಲಿ ಆಟಗಾರನಾಗಿ ಗುಜರಾತ್ ಟೈಟನ್ಸ್ ತಂಡ ಖರೀದಿಸಬಹುದು. ಮಾರ್ಟಿನ್ ಗಪ್ಟಿಲ್ 108 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3299 ರನ್ ಗಳಿಸಿದ್ದಾರೆ. ಹಾಗೆಯೇ ಐಪಿಎಲ್‌ನಲ್ಲಿ ಆಡಿದ ಅನುಭವವೂ ಕೂಡ ಹೊಂದಿದ್ದಾರೆ.
ಡೇವಿಡ್ ಮಲಾನ್: ದೀರ್ಘಕಾಲದವರೆಗೆ ಟಿ20 ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದ ಡೇವಿಡ್ ಮಲಾನ್ ಅವರ ಖರೀದಿಗೂ ಗುಜರಾತ್ ಟೈಟನ್ಸ್ ಮುಂದಾಗಬಹುದು. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಮಲಾನ್ ಈ ಬಾರಿ ಹರಜಾಗಿಲ್ಲ. ಇತ್ತ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಬಲಗೈ ಬ್ಯಾಟ್ಸ್‌ಮನ್ ಆಗಿರುವ ಕಾರಣ, ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಅವರನ್ನು ಟೈಟನ್ಸ್ ಫ್ರಾಂಚೈಸಿ ಖರೀದಿಸಿದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?
(Jason roy replacement openers gujarat titans could but ipl 2022)