Big Breaking: ರಷ್ಯಾ ದಾಳಿಗೆ ಉಕ್ರೇನ್ನಲ್ಲಿದ್ದ ಕರ್ನಾಟಕದ ವಿದ್ಯಾರ್ಥಿ ದುರ್ಮರಣ; ಖಚಿತ ಪಡಿಸಿದ ವಿದೇಶಾಂಗ ಇಲಾಖೆ
ಕಾರ್ಖೀವ್ನ ಕಾಲಮಾನದ ಪ್ರಕಾರ ಮುಂಜಾನೆ 7ಗಂಟೆ ಹೊತ್ತಿಗೆ ನವೀನ್ ಇನ್ನೂ ಹಲವರ ಜತೆ ತಿಂಡಿ ಪಡೆಯಲು ಹೊರಗೆ ನಿಂತಿದ್ದ ಸಮಯದಲ್ಲೇ ರಷ್ಯಾ ಸೇನೆ ರಾಕೆಟ್ ದಾಳಿ ನಡೆಸಿದೆ.
ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್ ಎಂಬುವರು ಮೃತಪಟ್ಟಿದ್ದಾರೆ (Karnataka Student Killed In Ukraine . ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ. ನವೀನ್ ಹಾವೇರಿಯವರಾಗಿದ್ದು, 4ವರ್ಷಗಳಿಂದ ಉಕ್ರೇನ್ನಲ್ಲಿ ನೆಲೆಸಿದ್ದರು. ಬೆಳಗ್ಗೆ 11.30ಕ್ಕೆ (ಭಾರತೀಯ ಕಾಲಮಾನ) ಕೊನೇ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದರು. ಅವರೀಗ ಮೃತಪಟ್ಟಿದ್ದು ದೃಢಪಟ್ಟಿದೆ. ಉಕ್ರೇನ್ನಲ್ಲಿ ರಷ್ಯಾ ನಡೆಸಿದ ದಾಳಿಗೆ ಭಾರತದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದನ್ನು ತಿಳಿಸಲು ವಿಷಾದಿಸುತ್ತೇವೆ. ವಿದ್ಯಾರ್ಥಿಯ ಕುಟುಂಬಕ್ಕೆ ನಮ್ಮ ಸಾಂತ್ವನಗಳು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರವಿಂದ್ ಬಾಗ್ಚಿ ಟ್ವೀಟ್ ಮಾಡಿದ್ದರು.
With profound sorrow we confirm that an Indian student lost his life in shelling in Kharkiv this morning. The Ministry is in touch with his family.
We convey our deepest condolences to the family.
— Arindam Bagchi (@MEAIndia) March 1, 2022
ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ಕಾರ್ಖೀವ್ನ ಕಾಲಮಾನದ ಪ್ರಕಾರ ಮುಂಜಾನೆ 7ಗಂಟೆ ಹೊತ್ತಿಗೆ ನವೀನ್ ಇನ್ನೂ ಹಲವರ ಜತೆ ತಿಂಡಿ ಪಡೆಯಲು ಹೊರಗೆ ನಿಂತಿದ್ದು. ಕಾರ್ಖೀವ್ನ ಗವರ್ನರ್ ಹೌಸ್ ಸಮೀಪವೇ ಇವರೆಲ್ಲ ಇದ್ದು, ಸುಮಾರು 8ಗಂಟೆ ಹೊತ್ತಿಗೆ ಅಲ್ಲಿ ರಷ್ಯಾ ಸೇನೆ ರಾಕೆಟ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದಾರೆ. ಕಾರ್ಖೀವ್ನ ಶವಾಗಾರದಲ್ಲಿ ಮೃತದೇಹವಿದೆ ಎಂದು ತಿಳಿಸಿದೆ. ಹಾಗೇ, ನವೀನ್ ಕುಟುಂಬದೊಂದಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಂಪರ್ಕದಲ್ಲಿದೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಭಾರತದ ವಿದ್ಯಾರ್ಥಿ ಮೃತಪಟ್ಟ ಸುದ್ದಿ ಕೇಳುತ್ತಿದ್ದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ಇದು ಭೀಕರ ದುರಂತ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಹಾಗೇ ಉಕ್ರೇನ್ನಲ್ಲಿರುವ ಉಳಿದ ವಿದ್ಯಾರ್ಥಿಗಳು ಸುರಕ್ಷಿತರಾಗಿರಲಿ. ಅಲ್ಲಿರುವವರನ್ನೆಲ್ಲ ವಾಪಸ್ ಕರೆಸಲು ಏನೆಲ್ಲ ಸಾಧ್ಯವೋ ಅದನ್ನು ಕೂಡಲೇ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರುವುದಕ್ಕೆ 5 ಮುಖ್ಯ ಕಾರಣಗಳು ಇಲ್ಲಿವೆ
Published On - 3:09 pm, Tue, 1 March 22