ಉಕ್ರೇನ್ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರುವುದಕ್ಕೆ 5 ಮುಖ್ಯ ಕಾರಣಗಳು ಇಲ್ಲಿವೆ

Russia- Ukraine Crisis : ಭಾರತವು ಉಕ್ರೇನ್ ಮೇಲೆ ರಷ್ಯಾದ ದಾಳಿಯ ವಿರುದ್ಧ ಯಾವುದೇ ಖಂಡನೆಯ ಹೇಳಿಕೆ ನೀಡಿಲ್ಲ. ಹಾಗಾದರೆ, ಉಕ್ರೇನ್ ವಿಷಯದಲ್ಲಿ ಭಾರತ ಏಕೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದೆ? ಎಂಬುದಕ್ಕೆ ಐದು ಮುಖ್ಯ ಕಾರಣಗಳು ಇಲ್ಲಿವೆ...

ಉಕ್ರೇನ್ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರುವುದಕ್ಕೆ 5 ಮುಖ್ಯ ಕಾರಣಗಳು ಇಲ್ಲಿವೆ
ರಷ್ಯಾ ದಾಳಿಯಿಂದ ಉಕ್ರೇನ್​ ಪರಿಸ್ಥಿತಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 01, 2022 | 1:43 PM

ನವದೆಹಲಿ: ಒಂದು ವಾರದಲ್ಲಿ ಎರಡನೇ ಬಾರಿಗೆ ರಷ್ಯಾದ ಉಕ್ರೇನ್ ಆಕ್ರಮಣಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಗೈರು ಹಾಜರಾಗಿದೆ. ಉಕ್ರೇನ್ ವಿರುದ್ಧ ರಷ್ಯಾದ (Russia) ಆಕ್ರಮಣದ ಕುರಿತು ಯುಎನ್ ಜನರಲ್ ಅಸೆಂಬ್ಲಿಯ ಅಪರೂಪದ ವಿಶೇಷ ತುರ್ತು ಅಧಿವೇಶನಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UN Security Council) ನಿರ್ಣಯಕ್ಕೆ ಭಾರತ ಗೈರು ಹಾಜರಾಯಿತು. ಬೆಲಾರಸ್ ಗಡಿಯಲ್ಲಿ ಮಾತುಕತೆ ನಡೆಸುವ ಮಾಸ್ಕೋ ಮತ್ತು ಕೀವ್ ನಿರ್ಧಾರವನ್ನು ಭಾರತ ಸರ್ಕಾರ ಸ್ವಾಗತಿಸಿದೆ. ಶುಕ್ರವಾರ ರಾತ್ರಿ ರಷ್ಯಾ ಆಕ್ರಮಣವನ್ನು ಖಂಡಿಸುವ ಯುಎನ್‌ಎಸ್‌ಸಿ ನಿರ್ಣಯದಿಂದ ಭಾರತ ದೂರ ಉಳಿದಿತ್ತು. ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಮಾತುಕತೆಯೇ ಉತ್ತರ ಎಂದು ಭಾರತ ಸರ್ಕಾರ ಅಭಿಪ್ರಾಯಪಟ್ಟಿತ್ತು. ಇಲ್ಲಿಯವರೆಗೆ, ಭಾರತವು ಉಕ್ರೇನ್ (Ukraine) ಮೇಲೆ ರಷ್ಯಾದ ದಾಳಿಯ ವಿರುದ್ಧ ಯಾವುದೇ ಖಂಡನೆಯ ಹೇಳಿಕೆ ನೀಡಿಲ್ಲ. ಹಾಗಾದರೆ, ಉಕ್ರೇನ್ ವಿಷಯದಲ್ಲಿ ಭಾರತ ಏಕೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದೆ? ಎಂಬುದಕ್ಕೆ ಐದು ಮುಖ್ಯ ಕಾರಣಗಳು ಇಲ್ಲಿವೆ:

1. ಭಾರತಕ್ಕೆ ಉಕ್ರೇನ್ ಬಿಕ್ಕಟ್ಟು ಒಂದು ಸಂದಿಗ್ಧ ಸ್ಥಿತಿಯನ್ನು ತಂದಿಟ್ಟಿದೆ. ಒಂದೆಡೆ ಹಳೆಯ ಸ್ನೇಹಿತ ರಷ್ಯಾ ಮತ್ತೊಂದೆಡೆ ಪಶ್ಚಿಮ ಭಾಗದ ಹೊಸ ಸ್ನೇಹಿತರನ್ನು ಬಿಟ್ಟುಕೊಡಲಾಗದೆ ಭಾರತ ಒತ್ತಡದಲ್ಲಿದೆ.

2. ರಷ್ಯಾ ಭಾರತದ ರಕ್ಷಣಾ ಶಸ್ತ್ರಾಸ್ತ್ರಗಳ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದೆ. ಹಾಗೇ, ಭಾರತಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯನ್ನು ಒದಗಿಸಿದೆ.

3. ರಷ್ಯಾದಲ್ಲಿ ತಯಾರಾದ 272 Su 30 ಫೈಟರ್ ಜೆಟ್‌ಗಳನ್ನು ಭಾರತದಲ್ಲಿ ಬಳಸಲಾಗುತ್ತಿದೆ. ಇದು ಎಂಟು ರಷ್ಯಾ ನಿರ್ಮಿತ ಕಿಲೋ ಕ್ಲಾಸ್ ಜಲಾಂತರ್ಗಾಮಿ ನೌಕೆಗಳು ಮತ್ತು 1,300ಕ್ಕೂ ಹೆಚ್ಚು ರಷ್ಯಾದ ಟಿ-90 ಟ್ಯಾಂಕ್‌ಗಳನ್ನು ಹೊಂದಿದೆ.

4. ಅಮೆರಿಕದ ಒತ್ತಡದ ನಡುವೆಯೂ ಭಾರತ ಎಸ್-400 ಏರ್ ಡಿಫೆನ್ಸ್​ ಸಿಸ್ಟಂ ಖರೀದಿಸಲು ನಿರ್ಧರಿಸಿದೆ. ಇದು ರಷ್ಯಾದ ಅತ್ಯಾಧುನಿಕ ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಕ್ಷಿಪಣಿ ವ್ಯವಸ್ಥೆಯಾಗಿದೆ. ಈ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಭಾರತವು 2018 ರಲ್ಲಿ ರಷ್ಯಾದೊಂದಿಗೆ 5 ಬಿಲಿಯನ್ ರೂ. ಒಪ್ಪಂದಕ್ಕೆ ಸಹಿ ಹಾಕಿತ್ತು.

ಉಕ್ರೇನ್ ಮೇಲೆ ರಷ್ಯಾ ದಂಡೆತ್ತಿ ಹೋಗಿರುವುದನ್ನು ವಿಶ್ವದ ಬಹುತೇಕ ದೇಶಗಳು ಖಂಡಿಸಿವೆ. ಐರೋಪ್ಯ ಒಕ್ಕೂಟದ ಸದಸ್ಯತ್ವಕ್ಕೆ ಬೆಂಬಲಿಸುವುದು, ಶಸ್ತ್ರಾಸ್ತ್ರ ಹಾಗೂ ಹಣಕಾಸು ನೆರವು ಒದಗಿಸುವುದೂ ಸೇರಿದಂತೆ ಹಲವು ರೀತಿಯಲ್ಲಿ ಹತ್ತಾರು ದೇಶಗಳು ಉಕ್ರೇನ್ ಸಹಾಯಕ್ಕೆ ಮುಂದಾಗಿವೆ. ಭಾರತವೂ ಉಕ್ರೇನ್​ಗೆ ಮಾನವೀಯತೆಯ ದೃಷ್ಟಿಯಿಂದ ವೈದ್ಯಕೀಯ ಉಪಕರಣಗಳಿಗೆ ಕಳಿಸಿಕೊಡುವುದಾಗಿ ಘೋಷಿಸಿದೆ. ಆದರೆ ಸ್ಪಷ್ಟವಾಗಿ ಮತ್ತು ಕಟುವಾಗಿ ರಷ್ಯಾ ನಡೆಯನ್ನು ಖಂಡಿಸಲು ಭಾರತ ಸರ್ಕಾರಕ್ಕೆ ಆಗುತ್ತಿಲ್ಲ. ‘ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸದವರು ನಮ್ಮ ವಿರೋಧಿಗಳಿದ್ದಂತೆ’ ಎಂದು ಅಮೆರಿಕ ಘೋಷಿಸಿರುವುದು ಹಲವು ದೇಶಗಳನ್ನು ಅಸಹಾಯಕತೆಗೆ ಸಿಲುಕಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಎಲ್ಲಾ ವಿಷಯಗಳಲ್ಲಿಯೂ ಭಾರತದ ಬೆಂಬಲಕ್ಕೆ ನಿಂತಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಇನ್ನೊಂದೆಡೆ ರಷ್ಯಾದ ವಿರುದ್ಧ ದೃಢವಾದ ಪ್ರತಿಕ್ರಿಯೆ ನೀಡಲು ಭಾರತದ ಮೇಲೆ ಅಮೆರಿಕ ಹೆಚ್ಚಿನ ಒತ್ತಡವನ್ನು ಹೇರುತ್ತಿದೆ. ಅಮೆರಿಕ ರಕ್ಷಣೆ, ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ಭಾರತದ ಪ್ರಮುಖ ಪಾಲುದಾರನಾಗಿರುವುದರಿಂದ ಅಮೆರಿಕದ ಒತ್ತಡ ಮತ್ತು ರಷ್ಯಾದ ಗೆಳೆತನದ ನಡುವೆ ಭಾರತ ಸಿಲುಕಿಕೊಂಡಿದೆ.

ಚೀನಾದೊಂದಿಗಿನ ಉದ್ವಿಗ್ನತೆ ವಿಚಾರದಲ್ಲಿ ಅಮೆರಿಕ ಭಾರತಕ್ಕೆ ಬಲವಾದ ಬೆಂಬಲವನ್ನು ನೀಡಿತ್ತು. ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ಕೂಡ ಭಾರತದ ಪ್ರಮುಖ ಸ್ನೇಹಿತ ರಾಷ್ಟ್ರವಾಗಿದೆ. ಭಾರತವು ಅಮೆರಿಕ ಮತ್ತು ಯುರೋಪ್‌ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಮತ್ತು ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಅನಿವಾಸಿ ಭಾರತೀಯರು ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಯುದ್ಧನೆಲ ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರಕ್ಕೆ ಏರ್​ಫೋರ್ಸ್ ಬಲ; ಕಾರ್ಯಾಚರಣೆ ಸಾಥ್​ ನೀಡುವಂತೆ ಪ್ರಧಾನಿ ಮೋದಿ ಸೂಚನೆ

ಉಕ್ರೇನ್​ ಮೇಲೆ ರಷ್ಯಾ ಆಕ್ರಮಣ; ಯುದ್ಧ ಪರಿಸ್ಥಿತಿ ತನಿಖೆ ಶೀಘ್ರವೇ ಪ್ರಾರಂಭಿಸುತ್ತೇವೆ ಎಂದ ಅಂತಾರಾಷ್ಟ್ರೀಯ ಕ್ರಿಮಿನಲ್​ ಕೋರ್ಟ್​