ರಷ್ಯಾ ದಾಳಿಗೆ ಚೂರು ಚೂರಾದ ಉಕ್ರೇನ್ ಜನರ ಜೀವನ: ಇಲ್ಲಿದೆ ಯುದ್ಧನಾಡಿನ ಫೋಟೋಗಳು
ಸತತ 6ನೇ ದಿನ ರಷ್ಯಾ ಉಕ್ರೇನ್ ಯುದ್ಧ ಮುಂದುವರೆದಿದೆ ಮಕ್ಕಳು ಸೇರಿದಂತೆ 350 ಕ್ಕೂ ಹೆಚ್ಚು ನಾಗರಿಕರು ಪ್ರಾಣಕಳೆದುಕೊಂಡಿದ್ದಾರೆ. ಜನರ ಜೀವನ ಬೀದಿಗೆ ಬಂದು ಛಿದ್ರ ಛಿದ್ರವಾಗಿದೆ. ಇಲ್ಲಿದೆ ನೋಡಿ ಯುದ್ಧ ನಾಡಿನ ಮನಮಿಡಿಯುವ ಪೋಟೋಗಳು
Updated on:Mar 01, 2022 | 12:44 PM

ರಷ್ಯಾ ಉಕ್ರೇನ್ ನಡುವಿನ ಮಿಲಿಟರಿ ಕಾರ್ಯಾಚರಣೆಯ ನಡೆಸುವ ವೇಳೆ ಬುಡಾಪೆಸ್ಟ್‌ನ ನ್ಯುಗಾಟಿ ನಿಲ್ದಾಣದಲ್ಲಿ ಸಾರಿಗೆಗಾಗಿ ಕಾಯುತ್ತಿರುವಾಗ ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ನಿರಾಶ್ರಿತರ ಮಗು ಸನ್ನೆ ಮಾಡಿ, ಪ್ರೀತಿಯನ್ನು ವ್ಯಕ್ತಪಡಿಸಿದ್ದು ಹೀಗೆ

ಬಾಂಬ್ ದಾಳಿಯಿಂದ ಹಾನಿಗೊಳಗಾದ ಕಟ್ಟಡದ ಎದುರು ನಿರಾಶ್ರಿತರಂತೆ ಕುಳಿತುರುವ ಬಾಲಕ

ಉಕ್ರೇನ್ನ ಉಜ್ಹೋರೋಡ್‌ನಲ್ಲಿ ನಗರವನ್ನು ರಕ್ಷಿಸಲು ಮೊಲೊಟೊವ್ ಕಾಕ್‌ಟೇಲ್‌ಗಳನ್ನು ತಯಾರಿಸುತ್ತಿರುವಾಗ ಕಂಡು ಬಂದ ದೃಶ್ಯ.

ತಂದೆಯನ್ನು ಸೈನ್ಯಕ್ಕೆ ಕಳುಹಿಸಿ, ದೇಶ ತೊರೆದು ಹೋಗುತ್ತಿರುವಾಗ ಕಣ್ಣೀರಿಟ್ಟ ಮಗು

ದೇಶವನ್ನು ರಕ್ಷಿಸುವಂತೆ ಧರ್ಮದ ಸಂಕೇತವನ್ನು ಹಿಡಿದು ನಿಂತು ಬೇಡಿಕೊಳ್ಳುತ್ತಿರುವ ಮಹಿಳೆ

ಬಾಂಬ್ ದಾಳಿಯಿಂದ ಬೆಂಕಿ ಹತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ

ಕೀವ್ ನಗರದಲ್ಲಿ ಕ್ಷಿಪಣಿ ದಾಳಿಯಾದ ವೇಳೆ ಬೆಂಕಿ ಕಾಣಿಸಿಕೊಂಡ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಹೀಗೆ

ರಷ್ಯಾ ದಾಳಿಯಿಂದ ಹಾನಿಗೊಳಗಾದ ಕಿಟಕಿಯಿಂದ ಇಣುಕಿ ನೋಡುತ್ತಿರುವ ವ್ಯಕ್ತಿ
Published On - 12:38 pm, Tue, 1 March 22



















