ದೇಶದಲ್ಲಿ ಕಳೆದ 24 ಗಂಟೆಯಲ್ಲಿ 6,915 ಹೊಸ ಕೊರೊನಾ ಪ್ರಕರಣಗಳು ಪತ್ತೆ, 16,864 ಸೋಂಕಿತರು ಗುಣಮುಖ

ಕೊರೊನಾ 4 ನೇ ಅಲೆ ಜೂನ್​ನಲ್ಲಿ ಅಪ್ಪಳಿಸಲಿದೆ ಎಂದು ಐಐಟಿ ಕಾನ್ಪುರದ ತಜ್ಞರ ತಂಡ ಎಚ್ಚರಿಕೆ ನೀಡಿದೆ. ಜೂನ್​ನಲ್ಲಿ ಕೊರೊನಾ ನಾಲ್ಕನೇ ಅಲೆ ಭಾರತದಲ್ಲಿ ಉತ್ತುಂಗಕ್ಕೆ ಹೋಗಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 6,915 ಹೊಸ ಕೊರೊನಾ ಪ್ರಕರಣಗಳು ಪತ್ತೆ, 16,864 ಸೋಂಕಿತರು ಗುಣಮುಖ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Mar 01, 2022 | 11:02 AM

ದೇಶದಲ್ಲಿ ಕಳೆದ  24 ಗಂಟೆಯಲ್ಲಿ 6,915 ಹೊಸ ಕೊವಿಡ್ 19 (Covid 19) ಕೇಸ್ ಪತ್ತೆಯಾಗಿದ್ದು, ಮಾರಕ ಕೊರೋನಾಕ್ಕೆ ಕಳೆದ 24 ಗಂಟೆಯಲ್ಲಿ 180 ಜನರು ಬಲಿಯಾಗಿದ್ದಾರೆ.  16,864 ಸೋಂಕಿತರು ಗುಣಮುಖರಾಗಿದ್ದು, ಸದ್ಯ ಭಾರತದಲ್ಲಿ 92,472 ಕೊವಿಡ್ ಸಕ್ರಿಯ ಪ್ರಕರಣಗಳಿವೆ. ಈವರೆಗೆ ದೇಶದಲ್ಲಿ ಒಟ್ಟು 1,77,70,25,914 ಡೋಸ್ ಲಸಿಕೆ ನೀಡಲಾಗಿದೆ. ನಿನ್ನೆಗಿಂತ ಕೋವಿಡ್​ ಹೊಸ ಪ್ರಕರಣಗಳ ಸಂಖ್ಯೆ  14 ಪ್ರತಿಶತದಷ್ಟು ಇಳಿಕೆಯಾಗಿದೆ. ಇದೇ ವೇಳೆ ಕೇರಳದಲ್ಲಿ ವಿಧಿಸಲಾಗಿದ್ದ ನಿರ್ಭಂಧಗಳನ್ನು ಸಡಿಲಿಸಲಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ವೇಳೆ ಕೊರೊನಾ 4 ನೇ ಅಲೆ ಜೂನ್​ನಲ್ಲಿ ಅಪ್ಪಳಿಸಲಿದೆ ಎಂದು ಐಐಟಿ ಕಾನ್ಪುರದ ತಜ್ಞರ ತಂಡ ಎಚ್ಚರಿಕೆ ನೀಡಿದೆ. ಜೂನ್​ನಲ್ಲಿ ಕೊರೊನಾ ನಾಲ್ಕನೇ ಅಲೆ ಭಾರತದಲ್ಲಿ ಉತ್ತುಂಗಕ್ಕೆ ಹೋಗಲಿದೆ.  4ನೇ ಅಲೆಯ ತೀವ್ರತೆಯು ಹೊಸ ರೂಪಾಂತರಗಳ ಹೊರಹೊಮ್ಮುವಿಕೆ, ವ್ಯಾಕ್ಸಿನೇಷನ್ ಸ್ಥಿತಿ ಮತ್ತು ಬೂಸ್ಟರ್ ಡೋಸ್‌ಗಳ ಮೇಲೆ ಅವಲಂಬಿತವಾಗಿರುತ್ತದೆ.

4ನೇ ಅಲೆಯಲ್ಲಿ ಹೊಸ ರೂಪಾಂತರಿ ಸೋಂಕು ಹರಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.  ವರದಿಯ ಪ್ರಕಾರ ಭಾರತದಲ್ಲಿ COVID-19ನ ನಾಲ್ಕನೇ ಅಲೆಯು 2020ರ ಜನವರಿ 30ರ ಅನ್ವಯ 936 ದಿನಗಳ ನಂತರ ಆಗಮಿಸುತ್ತದೆ ಎಂದು ಸೂಚಿಸಲಾಗಿತ್ತು. ಆದ್ದರಿಂದ, ಕೊರೊನಾವೈರಸ್ ನಾಲ್ಕನೇ ತರಂಗವು 2022ರ ಜೂನ್ 22ರಿಂದ ಪ್ರಾರಂಭವಾಗುತ್ತದೆ, ಆಗಸ್ಟ್ 23ರ ಹೊತ್ತಿಗೆ ತೀವ್ರವಾಗಿರಲಿದೆ. ಅಕ್ಟೋಬರ್ 24ರಂದು ಕೊನೆಗೊಳ್ಳುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಇದನ್ನೂ ಓದಿ:

Covid 4th Wave: ಜೂನ್ 22ರ ವೇಳೆಗೆ ಕೊರೊನಾ 4ನೇ ಅಲೆ ಅಪ್ಪಳಿಸುವ ಸಾಧ್ಯತೆ; ಆ. 23ಕ್ಕೆ ಉತ್ತುಂಗಕ್ಕೇರುವ ಸಾಧ್ಯತೆ

Published On - 11:00 am, Tue, 1 March 22