PSI Recruitment Scam: ಜೈಲಿನಿಂದ ಹೊರಬಂದ ಬೆನ್ನಲ್ಲೇ ಜಾಮೀನು ಷರತ್ತು ಉಲ್ಲಂಘನೆ: ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಭೇಟಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 20, 2022 | 4:39 PM

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.

PSI Recruitment Scam: ಜೈಲಿನಿಂದ ಹೊರಬಂದ ಬೆನ್ನಲ್ಲೇ ಜಾಮೀನು ಷರತ್ತು ಉಲ್ಲಂಘನೆ: ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಭೇಟಿ
PSI Recruitment Scam (ಪ್ರಾತಿನಿಧಿಕ ಚಿತ್ರ)
Follow us on

ಕಲಬುರಗಿ: 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣಕ್ಕೆ (PSI Recruitment Scam) ಸಂಬಂಧಿಸಿದಂತೆ ಜಿಲ್ಲೆಯ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. 2 ದಿನಗಳ ಹಿಂದೆ ಷರತ್ತುಬದ್ಧ ಜಾಮೀನಿನ ಮೇಲೆ ರುದ್ರಗೌಡ ಪಾಟೀಲ್ ಹೊರಬಂದಿದ್ದರು. ಜೈಲಿನಿಂದ ಹೊರಬಂದ ಬೆನ್ನಲ್ಲೇ ಜಾಮೀನು ಷರತ್ತು ಉಲ್ಲಂಘನೆ ಮಾಡಲಾಗಿದೆ. ಹಾಗಾಗಿ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಪೊಲೀಸರು ಭೇಟಿ ನೀಡಿದ್ದಾರೆ. ಜೊತೆಗೆ ರುದ್ರಗೌಡ ಪಾಟೀಲ್​ ಕುಟುಂಬಸ್ಥರಿಗೆ ನೋಟಿಸ್ ಜಾರಿಮಾಡಿದ್ದಾರೆ. ಕೋರ್ಟ್ ನಿಗದಿತ ವಿಳಾಸದ ಮನೆಯಲ್ಲಿರಬೇಕೆಂದು ಷರತ್ತು ವಿಧಿಸಿತ್ತು. ಕೋರ್ಟ್, ತನಿಖಾಧಿಕಾರಿಗೆ ನೀಡಿರುವ ಮೊಬೈಲ್​ ನಂಬರ್​ನಲ್ಲಿ ಲಭ್ಯವಾಗಿದೆ. ಜಾಮೀನಿನ ಮೇಲೆ ಹೊರಬಂದ ನಂತರ ಸಾಕ್ಷ್ಯನಾಶ ಮಾಡಬಾರದು. ಮೊಬೈಲ್ ನಂಬರ್, ವಿಳಾಸ ಬದಲಿಸಿದರೆ ಗಮನಕ್ಕೆ ತರಬೇಕು ಎಂದು ಕಲಬುರಗಿ ಹೈಕೋರ್ಟ್ ರುದ್ರಗೌಡ ಪಾಟೀಲ್​ಗೆ ಷರತ್ತು ವಿಧಿಸಿತ್ತು.

ಆದರೆ ತನಿಖಾಧಿಕಾರಿ ನೀಡಿದ್ದ ವಿಳಾಸಕ್ಕೆ ತೆರಳಿದ್ದಾಗ ಲಾಕ್ ಆಗಿತ್ತು. ರುದ್ರಗೌಡ ಪಾಟೀಲ್ ನೀಡಿದ್ದ ಮೊಬೈಲ್​ ನಂಬರ್ ಸ್ವಿಚ್​ ಆಫ್​ ಆಗಿತ್ತು. ನಿನ್ನೆ ಸಂಜೆ 4ಕ್ಕೆ ವಿಚಾರಣೆಗೆ ಹಾಜರಾಗಲು ತನಿಖಾಧಿಕಾರಿ ಸೂಚಿಸಿದ್ದು, ಆದರೆ ರುದ್ರಗೌಡ ಪಾಟೀಲ್ ವಿಚಾರಣೆಗೆ ಗೈರಾಗಿದ್ದರು. ಹಾಗಾಗಿ ಇಂದು ಅಕ್ಕಮಹಾದೇವಿ ಕಾಲೋನಿ ನಿವಾಸಕ್ಕೆ ಸಿಐಡಿ ಭೇಟಿ ನೀಡಿದ್ದರು.

ಇದನ್ನೂ ಓದಿ: PSI Scam Case: ಜಾಮೀನು ಪಡೆದು ಜೈಲಿನಿಂದ ಬಂದ ಮಹಾಂತೇಶ್ ಪಾಟೀಲ್​ಗೆ ಕಾಂಗ್ರೆಸ್ ನಾಯಕರಿಂದ ಸತ್ಕಾರ
 

ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಕಿಂಗ್ ಪಿನ್​​ ರುದ್ರಗೌಡ ಪಾಟೀಲ್ ಮತ್ತು ಮಹಾಂತೇಶ್ ಪಾಟೀಲ್​ಗೆ ಕಲಬುರಗಿ ಹೈಕೋರ್ಟ್​ ಪೀಠದಿಂದ ಜಾಮೀನು ಮಂಜೂರು ಮಾಡಲಾಗಿದೆ. ಜಿಲ್ಲೆಯ ಚೌಕ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್​ನಲ್ಲಿ ಜಾಮೀನು ನೀಡಲಾಗಿದೆ. ಪ್ರಕರಣದಲ್ಲಿ ಕಿಂಗ್ ಪಿನ್ ರುದ್ರಗೌಡ ಪಾಟೀಲ್​ನ್ನು ಈ ಹಿಂದೆ ಅರೆಸ್ಟ್ ಮಾಡಲಾಗಿತ್ತು. ಸಹಚರರಿಬ್ಬರಿಗ ರುದ್ರಗೌಡ ಜೊತೆ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದ. ಬಂಧಿತ ಆರೋಪಿಗಳು ಬ್ಲೂಟೂತ್ಗಳನ್ನು ಸರಬರಾಜು ಮಾಡುತ್ತಿದ್ದರು. ಜೊತೆಗೆ, ರುದ್ರಗೌಡ ಪಾಟೀಲ್ ಜೊತೆ ಸೇರಿ ಅಭ್ಯರ್ಥಿಗಳ ಜೊತೆ ಡೀಲ್ ಮಾಡುತ್ತಿದ್ದರು. ಅಕ್ರಮವಾಗಿ ಪರೀಕ್ಷೆ ಬರೆಯಲು ಸಿದ್ದರಿದ್ದವರನ್ನು ಹುಡುಕಿ ರುದ್ರಗೌಡ ಪಾಟೀಲ್​ಗೆ ಭೇಟಿ ಮಾಡಿಸುತ್ತಿದ್ದರು.

ಇದನ್ನೂ ಓದಿ: PSI Recruitment Scam: ಅಮೃತ್ ಪಾಲ್ ವಿರುದ್ಧ ಪ್ರಾಸಿಕ್ಯೂಷನ್​ಗೆ ಸರ್ಕಾರ ಅನುಮತಿ

ಎಸ್​ಐ ಹಗರಣದ ಪ್ರಮುಖ ಆರೋಪಿಗೆ ಜಾಮೀನು

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿಗೆ ಹಾಗೂ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಅಭ್ಯರ್ಥಿಗೆ ನ್ಯಾಯಾಲಯವು ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ. ಪಿಎಸ್​ಐ ಹಗರಣದ ಎ1 ಜಾಗೃತ್ ಹಾಗೂ ಮಹಿಳಾ ಕೋಟಾದಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿದ್ದ ರಚನಾಗೆ ಜಾಮೀನು ಸಿಕ್ಕಿದೆ. ಆರೋಪಿಗಳ ಪರ ವಕೀಲ ಶ್ಯಾಮ್​ಸುಂದರ್​ ಅವರು ವಾದ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:38 pm, Tue, 20 December 22