PSI Scam: ಕದ್ದು ರೆಕಾರ್ಡ್​ ಮಾಡಿದ ಸಿಐಡಿ ವಿಚಾರಣೆ ಆಡಿಯೊಗಳು ವೈರಲ್; ಆರೋಪಿ ರುದ್ರಗೌಡ ಷಡ್ಯಂತ್ರ

| Updated By: ವಿವೇಕ ಬಿರಾದಾರ

Updated on: Jan 25, 2023 | 9:04 AM

545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಬೆಂಬಲಿಗರಿಂದ ಮತ್ತೆ 3 ಆಡಿಯೋ ಬಿಡುಗಡೆ ಮಾಡಲಾಗಿದೆ.

PSI Scam: ಕದ್ದು ರೆಕಾರ್ಡ್​ ಮಾಡಿದ ಸಿಐಡಿ ವಿಚಾರಣೆ ಆಡಿಯೊಗಳು ವೈರಲ್; ಆರೋಪಿ ರುದ್ರಗೌಡ ಷಡ್ಯಂತ್ರ
ರುದ್ರಗೌಡ ಪಾಟೀಲ್​
Follow us on

ಕಲಬುರಗಿ: 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ (PSI recruitment Scam) ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ (Rudragouda Patil) ಬೆಂಬಲಿಗರಿಂದ ಮತ್ತೆ 3 ಆಡಿಯೋ ಬಿಡುಗಡೆ ಮಾಡಲಾಗಿದೆ. ರುದ್ರಗೌಡ ಪಾಟೀಲ್ ಸಿಐಡಿ (CID) ಕಸ್ಟಡಿಯಲ್ಲಿರುವಾಗ ಸಿಐಡಿ ತನಿಖೆ ವೇಳೆ ಕದ್ದು ಡಿವೈಸ್ ಬಳಸಿ ಸಿಐಡಿ ಅಧಿಕಾರಿಗಳ ಹಣ ರಿಕವರಿ ಪ್ರಶ್ನೆಗಳನ್ನೆ ರೇಕಾಡ್೯ ಮಾಡಿದ್ದಾನೆ. ಇದೀಗ ಈ ಆಡಿಯೋಗಳನ್ನು ರುದ್ರಗೌಡ ಬಿಡುಗಡೆ ಮಾಡುತ್ತಿದ್ದಾನೆ.

ಅಷ್ಟಕ್ಕೂ ರುದ್ರಗೌಡ ರೆಕಾರ್ಡ್​ ಮಾಡಿದ್ದು ಹೇಗೆ?

ರುದ್ರಗೌಡ ಸಿಐಡಿ ಕಸ್ಟಡಿಯಲ್ಲಿರುವಾಗ, ವಿಚಾರಣೆ ವೇಳೆ ಪದೇ ಪದೇ ಬಾತ್ ರೂಮ್ ನೆಪ ಹೇಳಿ ಸಿಐಡಿ ಕಚೇರಿಯ ಹೊರ ಹೋಗುತ್ತಿದ್ದನು. ಈ ವೇಳೆ ಸ್ನೇಹಿತರಿಂದ‌ ಡಿವೈಸ್ ತರಿಸಿಕೊಂಡು ಗೌಪ್ಯವಾಗಿ ರೆಕಾರ್ಡ್​ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಕಲಬುರಗಿ ಜಿಲ್ಲಾ ಕೋರ್ಟ್​ಗೆ ಶರಣು

ಹಣಕ್ಕೆ ಆಮಿಷ

ಸದ್ಯ ರುದ್ರಗೌಡ ಪಾಟೀಲ್ ಈ ಆಡಿಯೋ ಇಟ್ಟುಕೊಂಡು ಸಿಐಡಿ ಅಧಿಕಾರಿಗಳಿಗೆ ಹಣಕ್ಕೆ ಆಮಿಷ​​ಇಟ್ಟಿದ್ದಾನೆ. ಈ ಕುರಿತಾಗಿ ಸಿಐಡಿ ಡಿವೈಎಸ್ಪಿ ಶಂಕರಗೌಡ ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ರುದ್ರಗೌಡ ಪಾಟೀಲ್ ಈ ಹಿಂದೆ ಕೂಡ ಹಣ ನೀಡಿ ಅನೇಕ ಪ್ರಕರಣದಲ್ಲಿ ಖುಲಾಸೆಯಾಗಿದ್ದನು. ಈ ಬಗ್ಗೆ ಅಧಿಕಾರಿಗಳು ಮೊದಲೇ ಮಾಹಿತಿ ಪಡೆದಿದ್ದರು. ಹಣದ ಆಮಿಷಕ್ಕೆ ಬಗ್ಗದೇ ಇದ್ದಾಗ ಇದೀಗ ಆಡಿಯೋ, ವಿಡಿಯೋ ಬಿಡುಗಡೆ ಮಾಡುತ್ತಿದ್ದಾನೆ. ಇನ್ನು ರುದ್ರಗೌಡ ಪಾಟೀಲ್ ತಮ್ಮನ್ನು ಕುಗ್ಗಿಸಲು ತಂತ್ರ ಮಾಡುತ್ತಿದ್ದಾನೆ ಸಿಐಡಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: ಜನ ಬಯಸಿದರೆ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವೆ – PSI ಅಕ್ರಮ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಘೋಷಣೆ, ಕ್ಷೇತ್ರವೂ ಪ್ರಕಟ!

ಸಿಐಡಿ ಡಿವೈಎಸ್​ಪಿ ಶಂಕರಗೌಡ ಜತೆ ಮಾತಾಡಿದ್ದಾರೆ ಎನ್ನುವ ಆಡಿಯೋ ರಿಲೀಸ್​

ಸಿಐಡಿ ತನಿಖಾಧಿಕಾರಿ ಶಂಕರೇಗೌಡ ಜತೆ ರುದ್ರಗೌಡ ಹಣದ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ನಿನ್ನೆಯೂ (ಜ.24) ಆರೋಪಿ ರುದ್ರಗೌಡ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದರು. ಆಡಿಯೋದಲ್ಲಿ ರುದ್ರಗೌಡ ಚಾರ್ಜ್ ಸೀಟ್ ಬೇಗನೆ ಸಲ್ಲಿಸಲು ಹಣದ ಆಪರ್ ನೀಡಿದ್ದಾನೆ ಎಂದು ಆರೋಪವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ