ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ ಕಿಂಗ್ಪಿನ್ ರುದ್ರಗೌಡ ಪಾಟೀಲ್ ಕಲಬುರಗಿ ಜಿಲ್ಲಾ ಕೋರ್ಟ್ಗೆ ಶರಣಾಗಿದ್ದಾರೆ. ರುದ್ರಗೌಡ ಪಾಟೀಲ್ ವಿರುದ್ಧ ಅಶೋಕನಗರ ಠಾಣೆಯಲ್ಲಿ ಜ.19ರಂದು ಸಿಐಡಿ PSI ಆನಂದ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಸಿಐಡಿ ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದಾಗ ಪಾಟೀಲ್ ಪರಾರಿ ಆಗಿದ್ದ. ಕಲಬುರಗಿಯ ಅಕ್ಕಮಹಾದೇವಿ ಕಾಲೋನಿ ನಿವಾಸದಿಂದ ಕಾಲ್ಕಿತ್ತಿದ್ದ. ಇಂದು ಕಲಬುರಗಿ ಕೋರ್ಟ್ಗ ರುದ್ರಗೌಡ ಪಾಟೀಲ ಶರಣಾದ್ದಾನೆ. 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕಲಬುರಗಿ 5ನೇ ಜೆಎಂಎಪ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ರುದ್ರುಗೌಡ ಪಾಟೀಲ್ನನ್ನು ಫೆ.6 ರವರೆಗೆ ನ್ಯಾಯಾಂಗ ವಶಕ್ಕೆ ನ್ಯಾಯಾಲಯ ಒಪ್ಪಿಸಿದೆ. ನ್ಯಾಯಮೂರ್ತಿ ದಸ್ತಗೀರಸಾಬ್ ಅಬ್ದುಲ್ ರಜಾಕ್ ಮುಲ್ಲಾ ಆದೇಶಿಸಿದ್ದಾರೆ.
ಇನ್ನು ಇತ್ತೀಚೆಗೆ ಪಿಎಸ್ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರುದ್ರಗೌಡ ಪಾಟೀಲ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಜ.20 ಸಿಐಡಿ ಅಧಿಕಾರಿಗಳು ಆರೋಪಿ ರುದ್ರಗೌಡ ಪಾಟೀಲ್ ಬಂಧಿಸಲು ಬಂದಿದ್ದರು. ಈ ವೇಳೆ ಅಧಿಕಾರಿಗಳನ್ನು ತಳ್ಳಿ ರುದ್ರಗೌಡ ಪರಾರಿಯಾಗಿದ್ದ. ಸದ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ರಿಲೀಸ್ ಮಾಡಲಾಗಿತ್ತು.
ಇದನ್ನೂ ಓದಿ: PSI Scam Case: ಜಾಮೀನು ಪಡೆದು ಜೈಲಿನಿಂದ ಬಂದ ಮಹಾಂತೇಶ್ ಪಾಟೀಲ್ಗೆ ಕಾಂಗ್ರೆಸ್ ನಾಯಕರಿಂದ ಸತ್ಕಾರ
ಪರಾರಿಯಾದ ಬಳಿಕ ರುದ್ರಗೌಡ ಪಾಟೀಲ್ ಬಗ್ಗೆ ಅನೇಕ ಮಾತುಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೆ ಇಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಜನ ಭಯಸಿದ್ರೆ ಅಫಜಲಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೇ ಸ್ಪರ್ದೆ ಮಾಡ್ತೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲಾ, ಇಲ್ಲೇ ಇದ್ದೇನೆ. ಇಡಿ ಅಧಿಕಾರಿಗಳು ಬಂದಾಗ ಅವರ ವಿಚಾರಣೆ ಎದುರಿಸಿದ್ದೇನೆ. ಇಡಿ ಅಧಿಕಾರಿಗಳು ಬಂದು ಹೋದ ಮೇಲೆ ನಾನು ಹೊರಗೆ ಹೋಗಿದ್ದೆ ಎಂದು ಹೇಳಲಾಗಿತ್ತು.
ರುದ್ರಗೌಡ ಪಾಟೀಲ್ ಮತ್ತು ಅವರ ಸಹೋದರ ಮಹಾಂತೇಶ್ ಪಾಟೀಲ್, ಕಾಶಿನಾಥ್ ಚಿಲ್, ಮಂಜುನಾಥ ಮೇಳಕುಂದಿ, ಸೇರಿ ಐವರ ಮನೆ ಮೇಲೆ ಜ. 19 ದಾಳಿ ಮಾಡಿದ್ದು, ತಡರಾತ್ರಿವರೆಗೆ ಶೋಧ ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿದ್ದರು. ಬೆಂಗಳೂರು ಮತ್ತು ಹೈದ್ರಾಬಾದ್ನಿಂದ ಬಂದಿದ್ದ 25 ಇಡಿ ಅಧಿಕಾರಿಗಳ ತಂಡ ಹಣದ ಮೂಲದ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಸಿಐಡಿ ಇಡಿ ಗಮನಕ್ಕೆ ತಂದಿತ್ತು. ಆ ಬೆನ್ನಲೆ ಆರೋಪಿಗಳಿಗೆ ಜಾಮೀನು ಸಿಗುವವರೆಗೂ ಕಾದಿದ್ದ ಇಡಿ ಅಧಿಕಾರಿಗಳ ನಿನ್ನೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.
545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ದಿವ್ಯಾ ಹಾಗರಗಿ ಕೂಡ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದರು. ದಿವ್ಯಾ ಸೇರಿದಂತೆ ಪ್ರಕರಣದ 26 ಆರೋಪಿಗಳಿಗೆ ಜನವರಿ 5ರಂದು ಜಾಮೀನು ಸಿಕ್ಕಿದೆ. ಹಾಗಾಗಿ ಮೇಡಂ ಅಭಿಮಾನಿಗಳಿಗೆ ಅವರು ಯುದ್ಧ ಗೆದ್ದುಬಂದಷ್ಟು ಸಂತೋಷವಾಗಿದ್ದು, ದಿವ್ಯಾ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:17 pm, Mon, 23 January 23