ಪಿಎಸ್​ಐ ಹಗರಣ: ಆರ್‌.ಡಿ. ಪಾಟೀಲ್ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

| Updated By: ಆಯೇಷಾ ಬಾನು

Updated on: Dec 09, 2023 | 9:17 AM

ರಾಜ್ಯದೆಲ್ಲೆಡೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನ ವೀಲಿನಗೊಳಿಸಿ ಒಂದೇ ಕಡೆ ವಿಚಾರಣೆ ನಡೆಸಲು ಆರ್‌.ಡಿ. ಪಾಟೀಲ್ ಮನವಿ ಮಾಡಿದ್ದರು. ಅಲ್ಲಿವರೆಗೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ಪಡೆದಿದ್ದರು. ಇದೀಗ ಆರ್‌.ಡಿ. ಪಾಟೀಲ್‌ಗೆ ನೀಡಲಾಗಿದ್ದ ತಡೆಯಾಜ್ಞೆಯನ್ನ ಹೈಕೋರ್ಟ್ ತೆರವುಗೊಳಿಸಿದೆ.

ಪಿಎಸ್​ಐ ಹಗರಣ: ಆರ್‌.ಡಿ. ಪಾಟೀಲ್ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು
ಆರ್‌ಡಿ ಪಾಟೀಲ್
Follow us on

ಕಲಬುರಗಿ, ಡಿ.09: ಪಿಎಸ್‌ಐ (PSI Scam) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಆಗಿರುವ ಆರ್.ಡಿ. ಪಾಟೀಲ್​ಗೆ ಮತ್ತೊಂದು ಸಂಕಷ್ಟ ಶುರು‌ವಾಗಿದೆ. ಕಲಬುರಗಿ ಹೈಕೋರ್ಟ್ ಪೀಠ ಕಿಂಗ್‌ಪಿನ್ ಆರ್‌.ಡಿ. ಪಾಟೀಲ್ (RD Patil) ವಿರುದ್ಧ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ರಾಜ್ಯದೆಲ್ಲೆಡೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನ ವೀಲಿನಗೊಳಿಸಿ ಒಂದೇ ಕಡೆ ವಿಚಾರಣೆ ನಡೆಸಲು ಆರ್‌.ಡಿ. ಪಾಟೀಲ್ ಮನವಿ ಮಾಡಿದ್ದರು. ಅಲ್ಲಿವರೆಗೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ಪಡೆದಿದ್ದರು. ಇದೀಗ ಆರ್‌.ಡಿ. ಪಾಟೀಲ್‌ಗೆ ನೀಡಲಾಗಿದ್ದ ತಡೆಯಾಜ್ಞೆಯನ್ನ ಹೈಕೋರ್ಟ್ ತೆರವುಗೊಳಿಸಿದೆ.

ಎಲ್ಲಾ ಎಫ್‌ಐಆರ್‌ಗಳಿಗೆ ದಾಖಲಾದ ಪ್ರಕರಣಗಳನ್ನ ಒಂದೇ ಕಡೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಕಿಂಗ್‌ಪಿನ್ ಆರ್‌.ಡಿ. ಪಾಟೀಲ್ ಮೇಲ್ಮನವಿಗೆ ಹೈಕೋರ್ಟ್ ಪೀಠ ಪ್ರತಿಕ್ರಿಯೆ ನೀಡಿದೆ. ಸದ್ಯ ತಡೆಯಾಜ್ಞೆ ತೆರವು ಹಿನ್ನಲೆ ಪಿಎಸ್​ಐ ಕೇಸ್ ನಲ್ಲೂ ವಿಚಾರಣೆ ಸಾಧ್ಯತೆ ಇದೆ. ಈಗಾಗಲೇ ಆರ್.ಡಿ.ಪಾಟೀಲ್ ಕೆಇಎ ಪರೀಕ್ಷಾ ಅಕ್ರಮದ ವಿಚಾರಣೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಎಸಗಿ ಪಾರಾರಿಯಾಗಿದ್ದ ಆರೋಪಿ ದುಬೈನಲ್ಲಿ ಸೆರೆ: ಪೊಲೀಸರ ಕಾರ್ಯಾಚರಣೆಯೇ ರೋಚಕ

ಕಲಬುರಗಿ, ಬೆಂಗಳೂರು, ಧಾರವಾಡ ಮತ್ತು ತುಮಕೂರಿನ ವಿವಿಧ ಠಾಣೆಗಳಲ್ಲಿ ವಿವಿಧ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ದಾಖಲಾಗಿರುವ 11 ಎಫ್‍ಐಆರ್ ಹಾಗೂ ಆರೋಪ ಪಟ್ಟಿ ಒಟ್ಟಾಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಪ್ರಕಟಿಸಿದೆ.

ಆರ್.ಡಿ.ಪಾಟೀಲ್ ವಿರುದ್ಧದ ಎಫ್‍ಐಆರ್ ಗಳಿಗೆ ತಡೆಯಾಜ್ಞೆ ವಿಧಿಸಿ ಹೈಕೋರ್ಟ್ 2023ರ ಎ.17ರಂದು ಮಾಡಿದ್ದ ಮಧ್ಯಂತರ ಆದೇಶವು ತೆರವಾಗಿದೆ. ಕಲಬುರಗಿ ನಗರದ ಅಶೋಕ್ ನಗರ ಠಾಣೆಯಲ್ಲಿ ಐದು, ಸ್ಟೇಷನ್ ಬಜಾರ್ ಠಾಣೆಯಲ್ಲಿ ಎರಡು, ಚೌಕ್ ಠಾಣೆಯಲ್ಲಿ ಒಂದು ಹಾಗೂ ಧಾರವಾಡದ ಸಬ್ ಅರ್ಬನ್, ತುಮಕೂರಿನ ಕ್ಯಾತಸಂದ್ರ ಹಾಗೂ ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಗಳಲ್ಲಿ ದಾಖಲಾಗಿರುವ ತಲಾ ಒಂದೊಂದು ಎಫ್‍ಐಆರ್ ಮತ್ತು ಆರೋಪ ಪಟ್ಟಿಯನ್ನು ಒಟ್ಟಾಗಿಸಬೇಕು ಎಂದು ಆರ್.ಡಿ ಪಾಟೀಲ್ ಮನವಿ ಮಾಡಿದ್ದರು. ಇದೀಗ ಆರ್‌.ಡಿ. ಪಾಟೀಲ್‌ಗೆ ನೀಡಲಾಗಿದ್ದ ತಡೆಯಾಜ್ಞೆಯನ್ನ ಹೈಕೋರ್ಟ್ ತೆರವುಗೊಳಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ