ಕಲಬುರಗಿ, ನ.11: ಕೆಇಎ (KEA) ನಡೆಸಿದ ಎಫ್ಡಿಎ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಬಂಧನದಲ್ಲಿರುವ ಕಿಂಗ್ಪಿನ್ ಆರ್ಡಿ ಪಾಟೀಲ್ (R.D.Patil), ಮಾಧ್ಯಮಗಳ ವಿರುದ್ದ ನಾಲಿಗೆ ಹರಿಬಿಟ್ಟಿದ್ದಾನೆ. ಎರಡನೇ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದರೂ ಈತನ ಧಿಮಾಕು, ದರ್ಪ ಕಡಿಮೆಯಾಗಿಲ್ಲ.
ಸ್ಥಳ ಮಹಜರು ನಡೆಸುವ ನಿಟ್ಟಿನಲ್ಲಿ ಇಂದು ಪೊಲೀಸರು ಆರ್ಡಿ ಪಾಟೀಲ್ನನ್ನು ಕೊರೆದೊಯ್ಯುತ್ತಿದ್ದರು. ಈ ವೇಳೆ ಮಾಧ್ಯಮದವರನ್ನು ಕಂಡು ಆಕ್ರೋಶಗೊಂಡ ಆರ್ಡಿ ಪಾಟೀಲ್, ಸುಮ್ಮನೆ ಬೊಗಳೊದಲ್ಲ, ದಾಖಲೆ ಕೊಡ್ರೋ, ಯೂಸ್ ಲೆಸ್ ಎಂದು ನಾಲಿಗೆ ಹರಿಬಿಟ್ಟು ಧಿಮಾಕು ತೋರಿಸಿದ್ದಾನೆ.
ಇದನ್ನೂ ಓದಿ: KEA ಪರೀಕ್ಷೆಯಲ್ಲಿ ಅಕ್ರಮ ಕೇಸ್: ಆರ್ಡಿ ಪಾಟೀಲ್ ಮತ್ತೊಂದು ಸ್ಫೋಟಕ ವಿಡಿಯೋ ಬಹಿರಂಗ
ಪೊಲೀಸರ ಕೈಗೆ ಲಾಕ್ ಆದರೂ ಆರ್ಡಿ ಪಾಟೀಲ್ ಧಿಮಾಕು ಕಮ್ಮಿ ಆಗಿಲ್ಲ. ಈ ಹಿಂದೆ ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಿಐಡಿ ತನಿಖೆ ನಡೆಯುತ್ತಿದ್ದಾಗಲೂ ಮಾಧ್ಯಮಗಳ ವಿರುದ್ಧ ದರ್ಪ ತೋರಿದ್ದ. ಕಂಬಿ ಎಣಿಸಿದ್ದರೂ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್ಡಿ ಪಾಟೀಲ್ ದರ್ಪ, ಧಿಮಾಕು ಕಡಿಮೆಯಾಗಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ