ಕಲಬುರಗಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 1 ಕೋಟಿ ರೂ. ನಗದು ಹಣ ಜಪ್ತಿ

ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನಲೆ ರಾಜ್ಯಾದ್ಯಂತ ಚೆಕ್‌ಪೋಸ್ಟ್‌‌ಗಳನ್ನ ನಿರ್ಮಿಸಲಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮಧ್ಯೆ, ಹಣ, ಬೆಳ್ಳಿಯನ್ನ ವಶಕ್ಕೆ ಪಡೆಯಲಾಗಿದೆ.

ಕಲಬುರಗಿಯಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಬರೋಬ್ಬರಿ 1 ಕೋಟಿ ರೂ. ನಗದು ಹಣ ಜಪ್ತಿ
ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ವಶಕ್ಕೆ

Updated on: Mar 31, 2023 | 10:16 AM

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನಲೆ ರಾಜ್ಯಾದ್ಯಂತ ಚೆಕ್‌ಪೋಸ್ಟ್‌‌ಗಳನ್ನ ನಿರ್ಮಿಸಲಾಗಿದ್ದು, ಬೀಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ಅದರಂತೆ ಇದೀಗ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಬೆಳ್ಳಿ, ಮಧ್ಯವನ್ನ ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಫರಹತಾಬಾದ್ ಚೆಕ್‌ಪೋಸ್ಟ್‌‌ನಲ್ಲಿ ಯಾವುದೇ ದಾಖಲೆಯಿಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದ ರವಿ ಎನ್ನುವ ವ್ಯಕ್ತಿಯ ಕಾರು ತಪಾಸಣೆ ಮಾಡಿದಾಗ ಬರೊಬ್ಬರಿ 1 ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

ಇದೀಗ ಪೊಲೀಸರು ಮತ್ತು ಅಧಿಕಾರಿಗಳು ಹಣದ ಮೂಲದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಪೊಲೀಸ್​ ಬಲೆಗೆ ಬಿದ್ದ ರವಿ, ತಾನು ಹತ್ತಿ ಮಿಲ್ ಮಾಲೀಕನಿದ್ದೇನೆ. ಕಾರ್ಮಿಕರ ವೇತನ ನೀಡಲು ಹಣ ತಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಈ ಬಗ್ಗೆ ಇನ್ನು ಕೂಡ ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ: ರಜನೀಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಮನೆಗೆಲಸದಾಕೆ ಕದ್ದ ಆಭರಣ, ಹಣ ಅಷ್ಟಿಷ್ಟಲ್ಲ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಕೆಜಿ ಬೆಳ್ಳಿ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ತಡರಾತ್ರಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಕೆಜಿ ಬೆಳ್ಳಿಯನ್ನ ಹಲಸೂರು ಪೊಲೀಸರು ವಶಕ್ಕೆ
ಪಡೆದಿದ್ದಾರೆ. ಇಂದ್ರಕುಮಾರ್ ಹಾಗೂ ಮತ್ತೋರ್ವ ಇಬ್ಬರು ಸೇರಿ ಬೆಳ್ಳಿ ಸರ, ಉಂಗುರ, ಕಾಲು ಚೈನ್ ಸಾಗಿಸುತ್ತಿದ್ದ ವೇಳೆ ಚೆಕ್​ಪೋಸ್ಟ್​ನಲ್ಲಿ ಪರಿಶೀಲನೆ ನಡೆಸಿದ ವೇಳೆ ಅಕ್ರಮ ಬೆಳ್ಳಿ ಒಡವೆಗಳು ಸಿಕ್ಕಿವೆ. ಇಬ್ಬರನ್ನು ಇದೀಗ ವಶಕ್ಕೆ ಪಡೆದು ಹಲಸೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಜಿಲ್ಲೆಯ ವಿವಿಧೆಡೆ ಅಕ್ರಮ‌ ಮದ್ಯ ಸಾಗಾಟ ಮಾಡುತ್ತಿದ್ದಾಗ ದಾಳಿ

ಗದಗ: ಜಿಲ್ಲೆಯ ವಿವಿಧೆಡೆ ಅಕ್ರಮ‌ ಮದ್ಯ ಸಾಗಾಟ ಮಾಡುತ್ತಿದ್ದಾಗ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ 40, 500 ರೂ. ಮೌಲ್ಯದ ವಿಸ್ಕಿ, ಬಿಯರ್ ಸೇರಿ ವಿವಿಧ ಮಧ್ಯವನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಜಿಲ್ಲೆಯ ಬೆಳಧಡಿ ಗ್ರಾಮದ ಅಂಬೇಡ್ಕರ್ ಸರ್ಕಲ್, ನಗರದ ಕಳಸಾಪೂರ ರಸ್ತೆಯಲ್ಲಿ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಹೊಳೆಯ ಇಟಗಿ ರಸ್ತೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಅಬಕಾರಿ ಡಿ.ಸಿ ವೈ ಭರತೇಶ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ