ರಜನೀಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಮನೆಗೆಲಸದಾಕೆ ಕದ್ದ ಆಭರಣ, ಹಣ ಅಷ್ಟಿಷ್ಟಲ್ಲ

ರಜನೀಕಾಂತ್ ಪುತ್ರಿ ಐಶ್ವರ್ಯಾ ಮನೆಯಲ್ಲಿ ಕಳ್ಳತನ ಪ್ರಕರಣ ಸಂಬಂಧ ಅವರ ಮನೆಗೆಲಸದಾಕೆ ಹಾಗೂ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದು, ಮನೆಗೆಲಸದಾಕೆಯ ವಿಚಾರಣೆ ವೇಳೆ ಪೊಲೀಸರೇ ಬೆಚ್ಚಿ ಬೀಳುವ ಮಾಹಿತಿ ಬಹಿರಂಗವಾಗಿವೆ.

ರಜನೀಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಮನೆಗೆಲಸದಾಕೆ ಕದ್ದ ಆಭರಣ, ಹಣ ಅಷ್ಟಿಷ್ಟಲ್ಲ
ರಜನೀಕಾಂತ್ ಪುತ್ರಿ ಐಶ್ವರ್ಯಾ
Follow us
ಮಂಜುನಾಥ ಸಿ.
|

Updated on: Mar 30, 2023 | 6:59 PM

ರಜನೀಕಾಂತ್ (Rajinikanth) ಪುತ್ರಿ ಐಶ್ವರ್ಯಾ (Aishwarya Dhanush), ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನ ನಡೆದಿರುವುದಾಗಿ ಕೆಲವು ದಿನಗಳ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಗೆಲಸದಾಕೆ ಈಶ್ವರಿ ಹಾಗೂ ಕಾರು ಚಾಲಕ ವೆಂಕಟ್ ಎಂಬುವರನ್ನು ಬಂಧಿಸಿದ್ದಾರೆ. ಅದರಲ್ಲಿಯೂ ಮನೆಗೆಲಸದಾಕೆ ಈಶ್ವರಿ ಕದ್ದಿರುವ ಆಭರಣಗಳ ಒಟ್ಟು ಮೊತ್ತ ಪೊಲೀಸರನ್ನು ಹಾಗೂ ಸ್ವತಃ ರಜನೀಕಾಂತ್ ಪುತ್ರಿ ಐಶ್ವರ್ಯಾರನ್ನು ಚಕಿತಗೊಳಿಸಿದೆ.

ಇದೇ ತಿಂಗಳ 10 ರಂದು ಐಶ್ವರ್ಯಾ ರಜನೀಕಾಂತ್, ತಮ್ಮ ಮನೆಯಿಂದ ಚಿನ್ನಾಭರಣ ಕಳುವಾಗಿದ್ದು, ತಮ್ಮ ಮನೆಗೆಲಸದವರಾದ ಈಶ್ವರಿ, ಲಕ್ಷ್ಮಿ ಹಾಗೂ ಈಶ್ವರಿಯ ಪತಿ ಉಮಾಪತಿ ಮೇಲೆ ಅನುಮಾನವಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದರು. ಅದರಂತೆ ಈಶ್ವರಿ ಹಾಗೂ ಇತರೆ ಅನುಮಾನಿತರ ಹಿನ್ನೆಲೆ, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ಪೊಲೀಸರಿಗೆ ಕಳ್ಳಿ ಈಶ್ವರಿಯೇ ಎಂಬುದು ಖಚಿತವಾಗಿ ಅವರ ಮನೆಯ ಮೇಲೆ ದಾಳಿ ಮಾಡಿ ಈಶ್ವರಿಯನ್ನು ಬಂಧಿಸಿದ್ದಾರೆ, ಈಶ್ವರಿಗೆ ಸಹಾಯ ಮಾಡುತ್ತಿದ್ದ ಕಾರು ಚಾಲಕ ವೆಂಕಟ್ ಅನ್ನು ಸಹ ಬಂಧಿಸಿದ್ದಾರೆ.

ಈಶ್ವರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಸಂಗತಿಗಳು ಹೊರಗೆ ಬಂದಿವೆ. ಸತತ ನಾಲ್ಕು ವರ್ಷಗಳಿಂದಲೂ ಐಶ್ವರ್ಯಾರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದರಂತೆ ಈಶ್ವರಿ. ಹಲವು ವರ್ಷಗಳಿಂದ ಅವರ ಮನೆಯಲ್ಲಿ ಕೆಲಸ ಮಾಡಿದ್ದ ಕಾರಣ ಈಶ್ವರಿಗೆ ಹಣ ಎಲ್ಲಿದೆ, ಆಭರಣ ಎಲ್ಲಿದೆ, ಲಾಕರ್​ ಕೀ ಎಲ್ಲಿವೆ, ಮನೆಯಲ್ಲಿ ಕ್ಯಾಮೆರಾಗಳು ಎಲ್ಲೆಲ್ಲಿ ಇವೆ ಎಂಬೆಲ್ಲ ಮಾಹಿತಿ ತಿಳಿದಿತ್ತು. ಹಾಗಾಗಿ ಆಭರಣಗಳಿದ್ದ ಲಾಕರ್ ಅನ್ನು ತೆಗೆದು ಆಗಾಗ್ಗೆ ಚಿನ್ನಾಭರಣ ಕಳ್ಳತನ ಮಾಡಿ, ಮತ್ತೆ ಲಾಕರ್ ಮುಚ್ಚಿ ಕೀ ಅನ್ನು ಅದರ ಜಾಗಕ್ಕೆ ಇಟ್ಟುಬಿಡುತ್ತಿದ್ದರು. ಹಾಗಾಗಿ ಯಾರಿಗೂ ಅನುಮಾನವೇ ಬಂದಿರಲಿಲ್ಲ.

ಹೀಗೆ ಆಗೊಮ್ಮೆ-ಈಗೊಮ್ಮೆ ಕಳ್ಳತನ ಮಾಡುತ್ತ ಆಭರಣಗಳನ್ನು ಮಾರಿ ಬಂದ ಹಣದಿಂದ ಈಶ್ವರಿ ಸುಮಾರು ಒಂದು ಕೋಟಿ ಮೌಲ್ಯದ ಮನೆಯನ್ನು ಚೆನ್ನೈನ ಕೋಳಿಗನಲ್ಲೂರಿನಲ್ಲಿ ಖರೀದಿಸಿದ್ದರು. ಪೊಲೀಸರು ಈಶ್ವರಿಯ ಮನೆಯ ಮೇಲೆ ದಾಳಿ ಮಾಡಿದಾಗಲೂ ಅವರಿಗೆ ಸುಮಾರು 800 ಗ್ರಾಂ ಚಿನ್ನ, 30 ಗ್ರಾಂ ವಜ್ರ, ನಾಲ್ಕು ಕೆಜಿ ಬೆಳ್ಳಿ ಆಭರಣಗಳು ದೊರೆತಿವೆ. ಇವುಗಳ ಒಟ್ಟು ಮೌಲ್ಯ ಸುಮಾರು 4 ಕೋಟಿಗೂ ಹೆಚ್ಚೆಂದು ಪೊಲೀಸರು ಅಂದಾಜಿಸಿದ್ದಾರೆ. ಚಿನ್ನಾಭರಣಗಳ ಹೊರತಾಗಿ ಇನ್ನೂ ಕೆಲವು ವಸ್ತುಗಳನ್ನು, ನಗದು ಹಣವನ್ನು ಸಹ ಈಶ್ವರಿ ಹಾಗೂ ವೆಂಕಟ್ ಒಟ್ಟು ಸೇರಿ ಕದ್ದಿದ್ದಾರೆ ಎಂದಿದ್ದಾರೆ ಪೊಲೀಸರು.

ಈಶ್ವರಿ ಎಷ್ಟು ಚಿನ್ನ ಹಾಗೂ ಇತರೆ ಆಭರಣಗಳನ್ನು ಐಶ್ವರ್ಯಾ ಮನೆಯಿಂದ ಕದ್ದಿದ್ದರು ಎಂಬುದನ್ನು ಪತ್ತೆ ಹಚ್ಚಲು ಇನ್ನಷ್ಟು ದಿನಗಳು ಬೇಕಾಗಬಹುದು ಎಂದು ಪೊಲೀಸರು ಹೇಳಿದ್ದು, ಐಶ್ವರ್ಯಾ ಅವರು ಯಾವ ಯಾವ ಸಮಯದಲ್ಲಿ ಯಾವ ಯಾವ ಚಿನ್ನಾಭರಣ ಖರೀದಿ ಮಾಡಿದ್ದಾರೆಂಬುದು ಅವರಿಗೂ ನೆನಪಿಲ್ಲದಿರುವುದು ಸಮಸ್ಯೆ ಆಗಿದೆ. ಇದೀಗ ಐಶ್ವರ್ಯಾ ಹಾಗೂ ಧನುಶ್ ಅವರ ನಾಲ್ಕು ವರ್ಷಗಳ ಐಟಿ ದಾಖಲೆ, ಅವರ ಹೆಸರಿನಲ್ಲಿರುವ ಲಾಕರ್​ಗಳು, ಅವರ ಹಾಗೂ ಅವರ ಸಹೋದರಿಯ ಮದುವೆಯಲ್ಲಿ ತೆಗೆದ ಚಿತ್ರಗಳು, ಅದರಲ್ಲಿ ಐಶ್ವರ್ಯಾ ಧರಿಸಿದ್ದ ಆಭರಣಗಳು ಇನ್ನಿತರೆ ಚಿತ್ರಗಳನ್ನು ಗಮನಿಸಿ ಅವುಗಳ ಆಧಾರದಲ್ಲಿ ಎಷ್ಟು ಚಿನ್ನಾಭರಣ ಕಳುವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಶಿವಣ್ಣನಂತೆ ನಟಿಸಲು ಆಗುವುದೇ ಇಲ್ಲ, ಅವರು ಕನ್ನಡದ ರಜನೀಕಾಂತ್: ತಮಿಳು ನಟನಿಂದ ಹೊಗಳಿಕೆಯ ಸುರಿಮಳೆ

ತನಿಖೆ ವೇಳೆ, ತಾನು ಕಳ್ಳತನ ಮಾಡಿದ್ದಕ್ಕೆ ಕಾರಣ ನೀಡಿರುವ ಈಶ್ವರಿ, ಐಶ್ವರ್ಯಾ ಸರಿಯಾಗಿ ನನಗೆ ಸಂಬಳ ಕೊಡುತ್ತಿರಲಿಲ್ಲ ಅದಕ್ಕೆ ಕಳ್ಳತನ ಮಾಡಿದೆ ಎಂದಿದ್ದಾಳೆ. ಹಲವು ವರ್ಷಗಳಿಂದ ಮನೆಯಲ್ಲಿ ದುಡಿಯುತ್ತಿದ್ದರು ನನಗೆ ಕೇವಲ 30,000 ಸಂಬಳವನ್ನಷ್ಟೆ ಕೊಡುತ್ತಿದ್ದರು ಅದಕ್ಕಾಗಿಯೇ ನಾನು ವೆಂಕಟ್ ಸಹಾಯ ಪಡೆದು ಕಳ್ಳತನ ಮಾಡಿದೆ ಆರಂಭದಲ್ಲಿ ಸಣ್ಣ ವಸ್ತುಗಳನ್ನು ಕದ್ದೆ, ಅದು ಅವರ ಗಮನಕ್ಕೆ ಬರಲಿಲ್ಲ, ಹಾಗೆಯೇ ಕದಿಯುತ್ತಾ ಹೋದೆ, ದೊಡ್ಡ ದೊಡ್ಡ ಆಭರಣಗಳನ್ನು ಕದಿಯಲು ಆರಂಭಿಸಿದೆ ಎಂದಿದ್ದಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ