ಕಲಬುರ್ಗಿ: ದೇಶದ ಮುಂಚೂಣಿ ಸೂಫಿ ಸಂತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಝರತ್ ಶೇಖ್ ತಾಜುದ್ದೀನ್ ಜುನೈದಿ (Sheikh Tajuddin Junaidi) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ (ಆಗಸ್ಟ್ 12) ಮುಂಜಾನೆ ಮೃತಪಟ್ಟರು. ತಾಜ್ ಬಾಬಾ ಎಂದೇ ಖ್ಯಾತರಾಗಿದ್ದ ಇವರು, ಅಪಾರ ಅನುಯಾಯಿಗಳನ್ನು ಹೊಂದಿದ್ದರು. ಜುಮಾ ನಮಾಝ್ ಬಳಿಕ ಕಲಬುರ್ಗಿಯ ಜುನೈದೇ ದರ್ಬಾರ್ನಲ್ಲಿ ದಫನ್ ಕಾರ್ಯ ನಡೆಯಲಿದೆ. ಸುನ್ನಿಗಳ ಅಧ್ಯಾತ್ಮಿಕ ಮಾರ್ಗದರ್ಶಕರು ಎಂದೇ ಇವರು ಹೆಸರುವಾಸಿಯಾಗಿದ್ದರು.
ತಾಜುದ್ದೀನ್ ಜುನೈದಿ ನಿಧನಕ್ಕೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ‘ಮುಸ್ಲಿಂ ಸಮುದಾಯದಲ್ಲಿ ಅಧ್ಯಾತ್ಮ, ಶಿಕ್ಷಣ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಶ್ರೀಯುತರು, ಕಲಬುರಗಿಯಲ್ಲಿ ಹುಟ್ಟಿದರೂ, ಕೋಲಾರವನ್ನು ತಮ್ಮ ಸೇವಾನೆಲೆಯನ್ನಾಗಿ ಮಾಡಿಕೊಂಡಿದ್ದರು. ಹಝ್ರತ್ ಶೈಖ್ ತಾಜುದ್ದೀನ್ ಜುನೈದೀ ಅವರು ನಮ್ಮನ್ನಗಲಿರುವುದು ಅಪಾರ ದುಃಖ ಉಂಟು ಮಾಡಿದೆ’ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಶ್ರೀ ಜುನೈದೀ ಅವರು ಹಾಕಿಕೊಟ್ಟ ಸೇವಾಮಾರ್ಗ ಎಲ್ಲರಿಗೂ ಪ್ರೇರಣೆಯಾಗಲಿ ಹಾಗೂ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ದಯಪಾಲಿಸಲಿ ಮತ್ತೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಶಿಷ್ಯಕೋಟಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 2/2
— H D Kumaraswamy (@hd_kumaraswamy) August 12, 2022
‘ಶ್ರೀ ಜುನೈದಿ ಅವರು ಹಾಕಿಕೊಟ್ಟ ಸೇವಾಮಾರ್ಗ ಎಲ್ಲರಿಗೂ ಪ್ರೇರಣೆಯಾಗಲಿ ಹಾಗೂ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ದಯಪಾಲಿಸಲಿ ಮತ್ತೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಶಿಷ್ಯಕೋಟಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಎಚ್ಡಿಕೆ ಹೇಳಿದ್ದಾರೆ.
Published On - 10:40 am, Fri, 12 August 22