ಕಲಬುರಗಿ: ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್​ ಅಕ್ರಮ ಸಾಗಾಟ, ಮೂವರು ಅರೆಸ್ಟ್

| Updated By: ಆಯೇಷಾ ಬಾನು

Updated on: Feb 06, 2023 | 7:08 AM

ಅಕ್ರಮ ದಂಧೆಕೋರರು ಶಾಲೆ ಸಿಬ್ಬಂದಿ ಬಳಿ 100-150 ರೂಪಾಯಿ ಕೊಟ್ಟು ಹಾಲಿನ ಪ್ಯಾಕೆಟ್​ಗಳನ್ನ ಕಾಳಸಂತೆಯಲ್ಲಿ ​ ಖರೀದಿಸ್ತಾರೆ. ಇದೇ ಹಾಲಿನ ಪೌಡರ್ ​​ಬೇರೆ ಬೇರೆ ಪ್ಯಾಕೆಟ್​​​​ ಮಾಡಿ ಬ್ರ್ಯಾಂಡ್​ ಹೆಸರಲ್ಲಿ ಹೆಚ್ಚಿನ ರೇಟ್​​ಗೆ ಸೇಲ್ ಮಾಡೋ ದೊಡ್ಡ ಜಾಲ ಇದೆಯಂತೆ.

ಕಲಬುರಗಿ: ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್​ ಅಕ್ರಮ ಸಾಗಾಟ, ಮೂವರು ಅರೆಸ್ಟ್
ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್​ ಅಕ್ರಮ ಸಾಗಾಟ
Follow us on

ಕಲಬುರಗಿ: ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗ್ಬೇಕು. ಯಾರೂ ಅಪೌಷ್ಟಿಕತೆಯಿಂದ ಬಳಲ್ಬಾರ್ದು ಅಂತಾ ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪ್ಯಾಕೇಟ್(Shira Bhagya Milk Powder)  ನೀಡ್ತಿದೆ. ನೂರಾರು ಕೋಟಿ ರೂಪಾಯಿ ಕೂಡ ಖರ್ಚು ಮಾಡಲಾಗ್ತಿದೆ. ಆದ್ರೆ, ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಹೊಟ್ಟೆ ಸೇರಬೇಕಿದ್ದ ಹಾಲಿನ ಪೌಡರ್ ಖತರ್ನಾಕ್ ಖದೀಮರ ಕೈ ಸೇರ್ತಿವೆ. ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ಕ್ಷೀರಭಾಗ್ಯದಡಿ ಸರಬರಾಜು ಆಗೋ ಹಾಲಿನ್ ಪೌಡರ್ ಪ್ಯಾಕೆಟ್​​ ಕಾಳಸಂತೆಯಲ್ಲಿ ಮಾರೋ ಖದೀಮರಿಗೆ ಪೊಲೀಸರು ಖೆಡ್ಡಾ ತೋಡಿದ್ದಾರೆ.

ಕಲಬುರಗಿಯಲ್ಲಿ ಖತರ್ನಾಕ್ ಖದೀಮರು ಹಾಲಿನ ಪ್ಯಾಕೇಟ್​ಗಳು ಹಾಗೂ ಪೌಡರ್​ನ್ನು ಪ್ಯಾಕೇಟ್​​ನಿಂದ ಬೇರ್ಪಡಿಸಿ ಚೀಲಕ್ಕೆ ತುಂಬಿದ್ರು. ಗೂಡ್ಸ್ ವಾಹನಕ್ಕೆ ತುಂಬಿ ಕಿರಾತಕರು ಸಾಗಿಸ್ತಿದ್ರು. ಉಪಳಾಂವ್ ಕ್ರಾಸ್​​ನ ಬಳಿ ಸಾಗುತ್ತಿದ್ದ ಗೂಡ್ಸ್ ವಾಹನವನ್ನ ಸಬ್ ಅರ್ಬನ್ ಠಾಣೆ ಪೊಲೀಸರು ಮತ್ತು ಮಧ್ಯಾಹ್ನ ಉಪಹಾರ ಯೋಜನೆ ಅಧಿಕಾರಿಗಳು ತಡೆದು ನಿಲ್ಲಿಸಿದ್ರು. ತಪಾಸಣೆ ವೇಳೆ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡೋ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ 6 ಕಿಂಟಾಲ್ ಮಿಲ್ಕ್ ಪೌಡರ್​ ಪ್ಯಾಕೇಟ್​ ಪತ್ತೆಯಾಗಿವೆ. ಆರೋಪಿಗಳಾದ ಅನೀಲ್, ಅವುಗಳನ್ನು ಖರೀದಿಸುತ್ತಿದ್ದ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಮೋಯಿದ್ದೀನ್ ಮತ್ತು ಗೂಡ್ಸ್ ಚಾಲಕ ಇಮ್ರಾನುದ್ದೀನ್ ಅನ್ನೋರನ್ನ ಪೊಲೀಸ್ರು ಬಂಧಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಮೇಲೆ ಫೈರಿಂಗ್‌

ಹಾಲಿನ ಪೌಡರ್​​ನ್ನು ಕದ್ದು ಬೀದರ್​ನ ಹುಮ್ನಾಬಾದ್​​ಗೆ ಸಾಗಿಸ್ತಿದ್ರಂತೆ. ಅಲ್ಲದೇ ಹೊರ ರಾಜ್ಯಕ್ಕೆ ಸೇಲ್ ಮಾಡ್ತಿದ್ರು ಅನ್ನೋದನ್ನ ಆರೋಪಿಗಳು ಸತ್ಯ ಕಕ್ಕಿದ್ದಾರೆ. ಹಲವೆಡೆ ಶಾಲೆಯ ಹೆಡ್​ಮಾಸ್ಟರ್​ಗಳು, ಶಿಕ್ಷಕರು ಮತ್ತು ಅಂಗನವಾಡಿ ಶಿಕ್ಷಕಿಯರು, ಸಿಬ್ಬಂದಿ ಹಾಲಿನ ಪೌಡರ್ ಪ್ಯಾಕೆಟ್​ಗಳನ್ನ ಹಣಕ್ಕೆ ಸೇಲ್ ಮಾಡ್ತಿರೋ ಆರೋಪ ಕೇಳಿ ಬಂದಿದೆ. ಕೆಎಂಎಫ್​ನ 1 ಕೆಜಿಯ 1 ಹಾಲಿನ ಪ್ಯಾಕೇಟ್​​ಗೆ ಸರ್ಕಾರ 275 ರೂಪಾಯಿ ನೀಡುತ್ತೆ. ಆದ್ರೆ, ಅಕ್ರಮ ದಂಧೆಕೋರರು ಶಾಲೆ ಸಿಬ್ಬಂದಿ ಬಳಿ 100-150 ರೂಪಾಯಿ ಕೊಟ್ಟು ಹಾಲಿನ ಪ್ಯಾಕೆಟ್​ಗಳನ್ನ ಕಾಳಸಂತೆಯಲ್ಲಿ ​ ಖರೀದಿಸ್ತಾರೆ. ಇದೇ ಹಾಲಿನ ಪೌಡರ್ ​​ಬೇರೆ ಬೇರೆ ಪ್ಯಾಕೆಟ್​​​​ ಮಾಡಿ ಬ್ರ್ಯಾಂಡ್​ ಹೆಸರಲ್ಲಿ ಹೆಚ್ಚಿನ ರೇಟ್​​ಗೆ ಸೇಲ್ ಮಾಡೋ ದೊಡ್ಡ ಜಾಲ ಇದೆಯಂತೆ.

ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಕ್ಷೀರಭಾಗ್ಯ ಮಾಡಿದೆ. ಮಧ್ಯಾಹ್ನದ ಬಿಸಿಯೂಟ ಸೇರಿ ಏನೇನೋ ಯೋಜನೆ ಜಾರಿಗೆ ತಂದಿದೆ. ಆದ್ರೆ, ಇದನ್ನೇ ಬಂಡವಾಳ ಮಾಡ್ಕೊಂಡು ಖತರ್ನಾಕ್ ಕ್ರಿಮಿಗಳು ಹಾಲಿನ ಪ್ಯಾಕೇಟ್​ಗಳನ್ನ ಹಣಕ್ಕೆ ಸೇಲ್ ಮಾಡ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:03 am, Mon, 6 February 23