ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ

| Updated By: sandhya thejappa

Updated on: Apr 04, 2022 | 9:21 AM

ರಾಜ್ಯದಲ್ಲಿ ಕೂಡಾ ಮಸೀದಿಯಲ್ಲಿನ ಧ್ವನಿವರ್ಧಕ ಗಳನ್ನು ಬಂದ್ ಮಾಡಬೇಕು. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಜೊತೆಗೆ ಪರಿಸರ ಮಾಲನ್ಯ ಕೂಡಾ ಆಗುತ್ತಿದೆ. ರಂಜಾನ್ ಸಮಯದಲ್ಲಿ ಸೈರನ್ ಬಳಸೋದರಿಂದ ಕೂಡಾ ಜನರಿಗೆ ಕಿರಿಕಿರಿ ಆಗುತ್ತಿದೆ.

ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: ಮಸೀದಿ (Masjid) ಮೇಲಿನ ಧ್ವನಿವರ್ಧಕಗಳಿಂದ (Mike) ಶಬ್ದ ಮಾಲಿನ್ಯವಾಗುತ್ತಿದೆ. ಹೆಚ್ಚು ಶಬ್ದವಿಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೇಳಿಕೆ ನೀಡಿದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ರಾಜ್ಠಾಕ್ರೆ ಹೇಳಿಕೆಗೆ ಸಿದ್ದಲಿಂಗ ಸ್ವಾಮೀಜಿ ಬೆಂಬಲ ನೀಡಿದ್ದು, ಮಸೀದಿ ಮೇಲಿನ ಧ್ವನಿವರ್ಧಕ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕೂಡಾ ಮಸೀದಿಯಲ್ಲಿನ ಧ್ವನಿವರ್ಧಕ ಗಳನ್ನು ಬಂದ್ ಮಾಡಬೇಕು. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಜೊತೆಗೆ ಪರಿಸರ ಮಾಲನ್ಯ ಕೂಡಾ ಆಗುತ್ತಿದೆ. ರಂಜಾನ್ ಸಮಯದಲ್ಲಿ ಸೈರನ್ ಬಳಸೋದರಿಂದ ಕೂಡಾ ಜನರಿಗೆ ಕಿರಿಕಿರಿ ಆಗುತ್ತಿದೆ. ರಾಜ್ಯದಲ್ಲಿ ಮಸೀದಿಯಲ್ಲಿನ ಧ್ವನಿವರ್ಧಕ ನಿಷೇಧ ಮಾಡುವಂತೆ ಮನವಿ ಮಾಡಿದ್ದೆವು. ಆದರೆ ಇಲ್ಲಿವರಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದ್ರು ಕೂಡಲೇ ಮಸೀದಿಯಲ್ಲಿನ ಧ್ವನಿವರ್ಧಕಗಳನ್ನು ನಿಷೇಧಿಸಬೇಕು ಅಂತ ಕಲಬುರಗಿಯಲ್ಲಿ ಸಿದ್ದಲಿಂಗ ಸ್ವಾಮೀಜಿ ಒತ್ತಾಯಿಸಿದ್ದಾರೆ.

ರಾಜ್ ಠಾಕ್ರೆ ಎಚ್ಚರಿಕೆ:
ಮಸೀದಿಗಳಲ್ಲಿ ಹಾಕುವ ಧ್ವನಿ ವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್​ ಠಾಕ್ರೆಯವರು, ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಹೇಳಿದ್ದರು. ಶಿವಾಜಿ ಪಾರ್ಕ್​​ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ್ದ ಅವರು, ನಾನು ಪ್ರಾರ್ಥನೆಗಳನ್ನು ವಿರೋಧಿಸುವುದಿಲ್ಲ ಅಥವಾ ಯಾವುದೇ ಧರ್ಮದ ವಿರೋಧಿಯೂ ಅಲ್ಲ. ಆದರೆ ಮಸೀದಿಗಳಲ್ಲಿನ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಅಷ್ಟೆಲ್ಲ ದೊಡ್ಡದಾಗಿ ಯಾಕೆ ಇರಬೇಕು? ಮಸೀದಿಗಳಲ್ಲಿ ಧ್ವನಿ ವರ್ಧಕಗಳನ್ನು ತೆಗೆಯದೆ ಇದ್ದರೆ, ನಾವು ಮಸೀದಿಯ ಹೊರಗೆ ಧ್ವನಿ ವರ್ಧಕ ಹಾಕಿ ಹನುಮಾನ್ ಚಾಲೀಸ್​ ಶ್ಲೋಕ ಹಾಕಬೇಕಾಗುತ್ತದೆ ಎಂದು ರಾಜ್ ಠಾಕ್ರೆ ತಿಳಿಸಿದ್ದರು.

ಇದನ್ನೂ ಓದಿ

ಜಗಳವಾಡುವುದರಿಂದ ಮಕ್ಕಳ ಮೇಲಾಗುವ ಪರಿಣಾಮ ಏನು ಗೊತ್ತಾ..! ಇಲ್ಲಿದೆ ಮಾಹಿತಿ

ಮೊಬೈಲ್​ಗಳ ಖಾಸಗಿ ಮಾಹಿತಿಗೆ ಚೀನಾ ಕನ್ನ: ಮಾಲ್​ವೇರ್ ದಾಟಿಸಲು ಲೋನ್ ಆ್ಯಪ್ ಬಳಕೆ, ಸಾಲ ಪಡೆದವರ ಸುಲಿಗೆ

Published On - 9:20 am, Mon, 4 April 22