ಮೊಬೈಲ್​ಗಳ ಖಾಸಗಿ ಮಾಹಿತಿಗೆ ಚೀನಾ ಕನ್ನ: ಮಾಲ್​ವೇರ್ ದಾಟಿಸಲು ಲೋನ್ ಆ್ಯಪ್ ಬಳಕೆ, ಸಾಲ ಪಡೆದವರ ಸುಲಿಗೆ

ಆ್ಯಪ್​ ಮೂಲಕ ಮೊಬೈಲ್​ಗಳಿಗೆ ಮಾಲ್​ವೇರ್ ಸೇರುತ್ತಿದ್ದ ದುಷ್ಕರ್ಮಿಗಳು ನಂತರದ ದಿನಗಳಲ್ಲಿ ಬಳಕೆದಾರರ ಮೊಬೈಲ್​ಗಳಲ್ಲಿದ್ದ ಖಾಸಗಿ ಚಿತ್ರಗಳು ಮತ್ತು ಇತರ ದತ್ತಾಂಶಗಳನ್ನು ತಿರುಚಿ, ಬೆದರಿಕೆ ಹಾಕುತ್ತಿದ್ದರು

ಮೊಬೈಲ್​ಗಳ ಖಾಸಗಿ ಮಾಹಿತಿಗೆ ಚೀನಾ ಕನ್ನ: ಮಾಲ್​ವೇರ್ ದಾಟಿಸಲು ಲೋನ್ ಆ್ಯಪ್ ಬಳಕೆ, ಸಾಲ ಪಡೆದವರ ಸುಲಿಗೆ
ಸಾಂದರ್ಭಿಕ ಚಿತ್ರ
Follow us
| Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 04, 2022 | 7:29 AM

ದೆಹಲಿ: ಲೋನ್ ಆ್ಯಪ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ್ಯಪ್​ ಮೂಲಕ ಮೊಬೈಲ್​ಗಳಿಗೆ ಮಾಲ್​ವೇರ್ ಸೇರುತ್ತಿದ್ದ ದುಷ್ಕರ್ಮಿಗಳು ನಂತರದ ದಿನಗಳಲ್ಲಿ ಬಳಕೆದಾರರ ಮೊಬೈಲ್​ಗಳಲ್ಲಿದ್ದ ಖಾಸಗಿ ಚಿತ್ರಗಳು ಮತ್ತು ಇತರ ದತ್ತಾಂಶಗಳನ್ನು ತಿರುಚಿ, ಬೆದರಿಕೆ ಹಾಕುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ದೆಹಲಿ ಪೊಲೀಸರ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟಜಿಕ್ ಆಪರೇಷನ್ಸ್ (Intelligence Fusion and Strategic Operations – IFSO) ಘಟಕವು ಈ ಅಕ್ರಮ ಕೂಟವನ್ನು ಭೇದಿಸಿದೆ. ಮೊಬೈಲ್ ಆ್ಯಪ್ ಮೂಲಕ ಸುಲಭದ ಸಾಲ ಪಡೆಯಿರಿ ಎಂದು ಬಳಕೆದಾರರಿಗೆ ಪುಸಲಾಯಿಸುತ್ತಿದ್ದರು. ಅಪ್ಪಿತಪ್ಪಿ ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡರೆ ಮಾಲ್​ವೇರ್ ಮೂಲಕ ಮೊಬೈಲ್​ಗೆ ಕನ್ನ ಹಾಕುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ಲೇಸ್ಟೋರ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಲು ಲಭ್ಯವಿರುವ ‘ಕ್ಯಾಶ್ ಅಡ್ವಾನ್ಸ್​’ (ಧನಕ್ರೆಡಿಟ್) ಹೆಸರಿನ ಆ್ಯಪ್ ಮೂಲಕ ಬಳಕೆದಾರರಿಗೆ ಸಾಲ ಪಡೆಯಲು ವೇದಿಕೆ ಕಲ್ಪಿಸಿದ್ದರು. ಆದರೆ ವಾಸ್ತವದಲ್ಲಿ ಇದನ್ನೇ ಗಾಳವಾಗಿಸಿಕೊಂಡು ಬಳಕೆದಾರರ ಮಾಹಿತಿ ಕದಿಯುತ್ತಿದ್ದರು. ಸುಲಿಗೆ ಮಾಡಿದ ಹಣವನ್ನು ಚೀನಾ, ಹಾಂಗ್​ಕಾಂಗ್ ಮತ್ತು ದುಬೈಗೆ ಕ್ರಿಪ್ಟೊಕರೆನ್ಸಿ ಮೂಲಕ ವರ್ಗಾವಣೆ ಮಾಡುತ್ತಿದ್ದರು. ಎಂಟು ಆರೋಪಿಗಳನ್ನು ದೆಹಲಿ, ಜೋಧಪುರ, ಗುರುಗ್ರಾಮ ಮತ್ತು ದೇಶದ ಇತರ ಭಾಗಗಳಿಂದ ಬಂಧಿಸಲಾಗಿದೆ.

ಆ್ಯಪ್ ಮೂಲಕ ಸಾಲ ಪಡೆದಿದ್ದ ನನ್ನ ಚಿತ್ರವನ್ನು ತಿರುಚಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೆಹಲಿ ಮೂಲದ ಮಹಿಳೆಯೊಬ್ಬರು ದೂರು ಸಲ್ಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕ್ಯಾಶ್ ಅಡ್ವಾನ್ಸ್ ಆ್ಯಪ್ ಮೂಲಕ ಮಹಿಳೆ ಸಾಲ ಪಡೆದುಕೊಂಡಿದ್ದರು. ಕೆಲ ದಿನಗಳಲ್ಲಿಯೇ ಸಂಪೂರ್ಣ ಸಾಲದ ಮೊತ್ತವನ್ನು ಚುಕ್ತ ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಹಣ ಕೊಡುವಂತೆ ಕೆಲವರು ಫೋನ್ ಮಾಡಿ ಬೆದರಿಕೆ ಹಾಕಲು ಆರಂಭಿಸಿದರು. ಕೆಲವರಂತೂ ಅಶ್ಲೀಲವಾಗಿ ಮಾತನಾಡುತ್ತಿದ್ದರಲ್ಲದೆ, ಮಹಿಳೆಯ ಚಿತ್ರಗಳನ್ನು ಅಶ್ಲೀಲವಾಗಿ ತಿರುಚಿ ಕಳುಹಿಸಿ ಬೆದರಿಸುತ್ತಿದ್ದರು.

ತಮಗೆ ಬೆದರಿಕೆ ಹಾಕಲು ಬಳಸುತ್ತಿದ್ದ ಸಂಖ್ಯೆಯ ಪೈಕಿ ಒಂದರ ವಾಟ್ಸ್ಯಾಪ್ ಪ್ರೊಫೈಲ್​ಗೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಚಿತ್ರ ಬಳಸಲಾಗಿತ್ತು ಎಂದು ಮಹಿಳೆ ಆರೋಪ ಮಾಡಿದ್ದರು. ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳುವಾಗ ಅದರೊಂದಿಗೆ ಮಾಲ್​ವೇರ್ ಸಹ ಬಳಕೆದಾರರ ಮೊಬೈಲ್​ಗೆ ಇಣುಕುತ್ತಿತ್ತು. ಇದರ ಮೂಲಕ ಬಳಕೆದಾರರ ಖಾಸಗಿ ಮಾಹಿತಿ, ಕಾಂಟ್ಯಾಕ್ಟ್​ನಲ್ಲಿರುವವರ ವಿವರಗಳು ಹಾಗೂ ಫೋಟೊಗಳನ್ನೂ ಇವರು ಸಂಗ್ರಹಿಸಿಕೊಳ್ಳುತ್ತಿದ್ದರು. ನಂತರ ಈ ವಿವರಗಳನ್ನು ಬೇರೊಬ್ಬರಿಗೆ ಮಾರಿ, ಸುಲಿಗೆಗೆ ಕುಮ್ಮಕ್ಕು ಕೊಡುತ್ತಿದ್ದರು.

ಮಹಿಳೆ ನೀಡಿದ ದೂರಿನ ವಿವರದ ಅನ್ವಯ ತನಿಖೆ ನಡೆಸಿದ ಪೊಲೀಸರು ಅಕ್ರಮ ವಹಿವಾಟಿನ ಮಾಹಿತಿ ಕಲೆ ಹಾಕಿದರು. ಹಣವನ್ನು ಬಾಲಾಜಿ ಟೆಕ್ನಾಲಜಿ ಹೆಸರಿನ ಬೈಕ್ ರಿಪೇರಿ ಗ್ಯಾರೇಜ್ ಹೆಸರಿನಲ್ಲಿರುವ ಕರೆಂಟ್ ಅಕೌಂಟ್​ಗೆ ವರ್ಗಾಯಿಸಿಕೊಂಡಿದ್ದ ಮಾಹಿತಿ ಲಭ್ಯವಾಗಿತ್ತು. ಇದೇ ಅಕೌಂಟ್ ಬಳಸಿ ಕೇವಲ 15 ದಿನಗಳಲ್ಲಿ ₹ 8.45 ಕೋಟಿ ಮೊತ್ತವನ್ನು ಇತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂಥ ಇನ್ನೂ 25 ಖಾತೆಗಳಗನ್ನು ಪೊಲೀಸರು ಗುರುತಿಸಿದ್ದು, ಎಲ್ಲ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈವರೆಗೆ ಸುಮಾರು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಕೃಷ್ಣ ಎಂಬಾತ ಈ ಎಲ್ಲ ಕುಕೃತ್ಯಗಳ ಹಿಂದಿದ್ದ ಸಂಚುಕೋರನಾಗಿದ್ದು, ಅಕ್ರಮವಾಗಿ ಸಂಗ್ರಹಿಸಿದ ಮಾಹಿತಿಯನ್ನು ಚೀನಾ ಪ್ರಜೆಯೊಬ್ಬರಿಗೆ ರವಾನಿಸಿದ್ದ. ಸುಲಿಗೆ ಹಣವನ್ನೂ ಕ್ರಿಪ್ಟೊಕರೆನ್ಸಿ ಮೂಲಕ ಚೀನಾಕ್ಕೆ ರವಾನಿಸಲಾಗಿದೆ. ಈ ವ್ಯವಹಾರಕ್ಕೆ ಬಳಕೆಯಾಗುತ್ತಿದ್ದ ಚೀನೀಯರ ಕ್ರಿಪ್ಟೊ ಕರೆನ್ಸಿ ಅಕೌಂಟ್​ಗಳನ್ನೂ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕೇತರ ಹಣಕಾಸು ಸಂಸ್ಥೆ (Non Banking Financial Company – NBFC) ಎಂದು ನಕಲು ಒಪ್ಪಂದದ ಪ್ರತಿ ಮತ್ತು ಪ್ರೈವೆಸಿ ಪಾಲಿಸಿಯನ್ನು ಆ್ಯಪ್​ನಲ್ಲಿ ಬಳಸಿದ್ದರು. ಮೋಸ ಹೋಗಿರುವವರ ಸಂಖ್ಯೆ ಇನ್ನೂ ದೊಡ್ಡದಿರಬಹುದು. ನಾವು ಹುಡುಕಾಟ ಮುಂದುವರಿಸಿದ್ದೇವೆ. ವಿವಿಧ ಬ್ಯಾಂಕ್​ಖಾತೆಗಳನ್ನು ನಿರ್ಬಂಧಿಸಿ ₹ 11 ಲಕ್ಷ ಮುಟ್ಟುಗೋಲು ಹಾಕಿಕೊಂಡಿದ್ದೇವೆ. ₹ 4 ಲಕ್ಷ ನಗದು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ಲೋನ್ ಆ್ಯಪ್​ಗಳ ಕಾರ್ಯವೈಖರಿ ಪರಿಶೀಲಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕೇಂದ್ರ ಸರ್ಕಾರ ಸೂಚನೆ

ಇದನ್ನೂ ಓದಿ: ಸಾಲಕ್ಕಾಗಿ ಲೋನ್ ಆ್ಯಪ್​ಗಳ ಮೊರೆ ಹೋಗುವ ಮುನ್ನ ಎಚ್ಚರ! ಇದರ ಹಿಂದಿದೆ ದೊಡ್ಡ ಜಾಲ

ತಾಜಾ ಸುದ್ದಿ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ