ಮಹಾರಾಷ್ಟ್ರದ ನಾಸಿಕ್ ಬಳಿ ಹಳಿತಪ್ಪಿದ ಲೋಕಮಾನ್ಯ ತಿಲಕ್-ಜಯನಗರ ಎಕ್ಸ್‌ಪ್ರೆಸ್ ರೈಲು; ಇಬ್ಬರಿಗೆ ಗಾಯ

ಭಾನುವಾರ ಮಧ್ಯಾಹ್ನ 3:10 ರ ಸುಮಾರಿಗೆ ಸೆಂಟ್ರಲ್ ರೈಲ್ವೇ ಭುಸಾವಲ್ ವಿಭಾಗದ ಲಹವಿತ್ ಮತ್ತು ದೇವ್ಲಾಲಿ ನಡುವೆ ಸಂಭವಿಸಿದ ಅಪಘಾತದಲ್ಲಿ ಹೆಚ್ಚಿನ ಗಾಯಗಳು ವರದಿಯಾಗಿಲ್ಲ ಎಂದು ರೈಲ್ವೆ ಹೇಳಿದೆ

ಮಹಾರಾಷ್ಟ್ರದ ನಾಸಿಕ್ ಬಳಿ ಹಳಿತಪ್ಪಿದ ಲೋಕಮಾನ್ಯ ತಿಲಕ್-ಜಯನಗರ ಎಕ್ಸ್‌ಪ್ರೆಸ್ ರೈಲು; ಇಬ್ಬರಿಗೆ ಗಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 03, 2022 | 7:51 PM

ಭಾನುವಾರ ಮಧ್ಯಾಹ್ನ ಮಹಾರಾಷ್ಟ್ರ(Maharashtra) ನಾಸಿಕ್ (Nashik)ಬಳಿ ಲೋಕಮಾನ್ಯ ತಿಲಕ್-ಜಯನಗರ ಎಕ್ಸ್‌ಪ್ರೆಸ್​ನ (ಪವನ್ ಎಕ್ಸ್‌ಪ್ರೆಸ್) (Lokmanya Tilak-Jaynagar Express) ಹತ್ತು ಬೋಗಿಗಳು ಹಳಿತಪ್ಪಿವೆ ಎಂದು ರೈಲ್ವೆ ತಿಳಿಸಿದೆ. ಮಧ್ಯಾಹ್ನ 3:10 ರ ಸುಮಾರಿಗೆ ಸೆಂಟ್ರಲ್ ರೈಲ್ವೇ ಭುಸಾವಲ್ ವಿಭಾಗದ ಲಹವಿತ್ ಮತ್ತು ದೇವ್ಲಾಲಿ ನಡುವೆ ಸಂಭವಿಸಿದ ಅಪಘಾತದಲ್ಲಿ ಹೆಚ್ಚಿನ ಗಾಯಗಳು ವರದಿಯಾಗಿಲ್ಲ ಎಂದು ರೈಲ್ವೆ ಹೇಳಿದೆ. ಮನ್ಮಾಡ್‌ನಿಂದ ಅಪಘಾತ ಪರಿಹಾರ ರೈಲು, ಭೂಸಾವಲ್‌ನಿಂದ ಅಪಘಾತ ಪರಿಹಾರ ವೈದ್ಯಕೀಯ ಉಪಕರಣಗಳ ರೈಲು ಮತ್ತು ಇಗತ್‌ಪುರಿಯಿಂದ ವೈದ್ಯಕೀಯ ವ್ಯಾನ್ ಅನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ. ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಮತ್ತು ಸಣ್ಣ ಪುಟ್ಟ ಗಾಯ ಮಾತ್ರ ವರದಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ 022-22694040 ಮತ್ತು 022-67455993 ಅನ್ನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಲ್ಲಿ ನೀಡಲಾಗಿದೆ. ನಾಸಿಕ್ ರಸ್ತೆಗೆ 0253-2465816, ಭೂಸಾವಲ್ 02582-220167 ಮತ್ತು ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ರೂಮ್‌ಗಾಗಿ 54173 ನಂಬರ್ ನೀಡಲಾಗಿದೆ. ರೈಲು ಹಳಿ ತಪ್ಪಿರುವುದರಿಂದ 12617 ನಿಜಾಮುದ್ದೀನ್ ಮಂಗಳಾ ಎಕ್ಸ್‌ಪ್ರೆಸ್, 12071 ಜಲ್ನಾ ಜನಶತಾಬ್ದಿ ಎಕ್ಸ್‌ಪ್ರೆಸ್, 12188 ಜಬಲ್‌ಪುರ್ ಗರೀಬ್​​ರಥ್, 11071 ವಾರಣಾಸಿ ಎಕ್ಸ್‌ಪ್ರೆಸ್ ಮತ್ತು 01027 ಎಲ್‌ಟಿಟಿ-ಗೋರಖ್‌ಪುರ ವಿಶೇಷ ರೈಲ್ವೇ ಸೇರಿದಂತೆ ಐದು ರೈಲುಗಳ ಸಮಯ ಮರುಹೊಂದಿಸಲಾಗಿದೆ.

22221 ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ದಿವಾ-ವಸಾಯಿ ಮಾರ್ಗದ ಮೂಲಕ ತಿರುಗಿಸಲಾಗಿದೆ ಎಂದು ಅದು ಹೇಳಿದೆ.

ನಾಸಿಕ್ ಬಳಿ ರೈಲು ಹಳಿತಪ್ಪಿದ ಪರಿಣಾಮ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಭಾನುವಾರ ತಿಳಿಸಿದೆ.

“ನಾಸಿಕ್‌ನಲ್ಲಿ ರೈಲು ಹಳಿತಪ್ಪಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಗೊಂಡ ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಮತ್ತು ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ” ಎಂದು ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂದೂ ಮಹಾಪಂಚಾಯತ್: ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಹಿಂದೂಗಳಿಗೆ ಕರೆ ನೀಡಿದ ಯತಿ ನರಸಿಂಗಾನಂದ್

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​
ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್​ಆರ್​ಟಿಸಿ ಬಂದ್​