AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಯನ್ ಖಾನ್​ ಕೇಸ್​​ನ ಪ್ರಮುಖ ಸಾಕ್ಷಿ ಪ್ರಭಾಕರ್ ಸೇಲ್ ಸಾವಿನ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಗೃಹ ಸಚಿವರಿಂದ ಆದೇಶ !

ಪ್ರಭಾಕರ್ ಸೇಲ್ ಸಾವಿನ ಬಗ್ಗೆ ಕುಟುಂಬ ಯಾವುದೇ ರೀತಿಯ ಅನುಮಾನವನ್ನೂ ವ್ಯಕ್ತಪಡಿಸಿಲ್ಲ ಎಂದು ವಕೀಲರಾದ ತುಷಾರ್​ ಖಂಡಾರೆ ತಿಳಿಸಿದ್ದಾರೆ.  ಹಾಗಿದ್ದಾಗ್ಯೂ ತನಿಖೆ ಪ್ರಾರಂಭವಾಗಲಿದೆ.

ಆರ್ಯನ್ ಖಾನ್​ ಕೇಸ್​​ನ ಪ್ರಮುಖ ಸಾಕ್ಷಿ ಪ್ರಭಾಕರ್ ಸೇಲ್ ಸಾವಿನ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಗೃಹ ಸಚಿವರಿಂದ ಆದೇಶ !
ಪ್ರಭಾಕರ್ ಸೇಲ್​
TV9 Web
| Updated By: Lakshmi Hegde|

Updated on:Apr 03, 2022 | 3:56 PM

Share

ಆರ್ಯನ್ ಖಾನ್ ಡ್ರಗ್ಸ್​ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೇಲ್​  ಮುಹುಲ್​ ಏರಿಯಾದಲ್ಲಿರುವ ಚೆಂಬೂರ್​​ನಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು. ಅವರ ನಿಧನವೀಗ ಬಹುವಾಗಿ ಚರ್ಚೆಯಾಗುತ್ತಿದೆ. ಇದು ಸಹಜವಾದ ಸಾವಲ್ಲ ಎಂಬ ಮಾತುಗಳೂ ಕೇಳಿಬರುತ್ತಿದೆ.  ಇದರ ಬೆನ್ನಲ್ಲೇ ಪ್ರಭಾಕರ್ ಸೇಲ್​ ನಿಧನದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್​ ವಾಲ್ಸೆ ಪಾಟೀಲ್ ಆದೇಶಿಸಿದ್ದಾರೆ. ಹೀಗಾಗಿ ಪ್ರಭಾಕರ್ ಸೇಲ್​ ಸಾವಿನ ತನಿಖೆ ಡಿಜಿಪಿ ನೇತೃತ್ವದ ತಂಡದಿಂದ ನಡೆಯಲಿದೆ. ಇನ್ನು ಪ್ರಭಾಕರ್ ಸೇಲ್ ಸಾವಿನ ಬಗ್ಗೆ ಕುಟುಂಬ ಯಾವುದೇ ರೀತಿಯ ಅನುಮಾನವನ್ನೂ ವ್ಯಕ್ತಪಡಿಸಿಲ್ಲ ಎಂದು ವಕೀಲರಾದ ತುಷಾರ್​ ಖಂಡಾರೆ ತಿಳಿಸಿದ್ದಾರೆ.  

ಆರ್ಯನ್​ ಖಾನ್​ ಸಿಕ್ಕಿಬಿದ್ದ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಭಾಕರ್​ ಅವರನ್ನೂ ಎನ್​ಸಿಬಿ ಅಧಿಕಾರಿಗಳು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದರು.  ಇವರೊಬ್ಬ ಸ್ವತಂತ್ರ ಸಾಕ್ಷಿಯಾಗಿದ್ದಿದ್ದು, ಇನ್ನೊಬ್ಬ ಸಾಕ್ಷಿದಾರ ಕಿರಣ್​ ಗೋಸಾವಿ ಮತ್ತು ಈ ಪ್ರಕರಣ ಬೇಧಿಸುವಲ್ಲಿ ಪ್ರಮುಖ ರೂವಾರಿಯಾಗಿದ್ದ  ಸಮೀರ್ ವಾಂಖೆಡೆ (ಆಗ ಎನ್​ಸಿಬಿಯ ಅಧಿಕಾರಿಯಾಗಿದ್ದರು) ವಿರುದ್ಧವೂ ಆರೋಪ ಮಾಡಿದ್ದರು. ಎನ್​ಸಿಬಿ ಅಧಿಕಾರಿಗಳು ಸುಮಾರು 10 ಖಾಲಿ ಪೇಪರ್​ಗಳಿಗೆ ನನ್ನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಸುಮಾರು 25 ಕೋಟಿ ರೂಪಾಯಿ ವಸೂಲಿ ಮಾಡಿದ ಬಗ್ಗೆ ನಡೆದ ದೂರವಾಣಿ ಸಂಭಾಷಣೆಯನ್ನೂ ನಾನು ಕೇಳಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲ, ಕಿರಣ್​ ಗೋಸಾವಿಗೆ ತಾನು ಬಾಡಿಗಾರ್ಡ್ ಆಗಿದ್ದೆ, ಆದರೆ ಅವರ ಬಳಿ ಕೆಲಸ ಮಾಡುತ್ತಿದ್ದ ಇನ್ನಿತರರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಪ್ರಭಾಕರ್ ಹೇಳಿಕೊಂಡಿದ್ದರು.

ಕಿರಣ್​ ಗೋಸಾವಿ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರು. ಆದರೆ ನಂತರ ಇವರ ವರುದ್ಧವೇ ಹಣ ಪಡೆದ ಆರೋಪ ಕೇಳಿಬಂದಿತ್ತು. ಮುಂಬೈ ಐಷಾರಾಮಿ ಹಡಗಿನ ಮೇಲೆ ದಾಳಿಯಾಗುತ್ತಿದ್ದಂತೆ ಕಿರಣ್​ ಗೋಸಾವಿ 50 ಲಕ್ಷ ರೂಪಾಯಿ ಪಡೆದಿದ್ದಾಗಿ ಇದೇ ಪ್ರಭಾಕರ್ ಸೇಲ್​ ಆರೋಪ ಮಾಡಿದ್ದರು. ಹೀಗಾಗಿ ಎನ್​ಸಿಬಿ ಪ್ರಭಾಕರ್​ ಅವರನ್ನು ಒಂದು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿಕೊಂಡಿತ್ತು. ಅಂದರೆ ಈ ಪ್ರಕರಣದಲ್ಲಿ ಪ್ರಭಾಕರ್​ ಸೇಲ್​ ತಮ್ಮ ಪರವಾಗಿ ನಿಲ್ಲುತ್ತಾರೆ ಎಂದು ಭಾವಿಸಿದ್ದ ಎನ್​ಸಿಬಿಗೆ ಇವರು ಉಲ್ಟಾ ಹೊಡೆದಿದ್ದರು. ಎನ್​ಸಿಬಿ ವಿರುದ್ಧವೇ ಆರೋಪವನ್ನು ಮಾಡಿದ್ದರು.

ಇದನ್ನೂ ಓದಿ: ಲಷ್ಕರ್​ ಇ ತೊಯ್ಬಾ ಉಗ್ರರಿಗೆ ನೆರವು ನೀಡುತ್ತಿದ್ದ ನಾಲ್ವರನ್ನು ಬಂಧಿಸಿದ ಬಂಡಿಪೋರಾ ಪೊಲೀಸರು !

Published On - 3:54 pm, Sun, 3 April 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!