ಕಾಶ್ಮೀರಿ ಪಂಡಿತರು ವಾಪಸ್ ಬಂದರೆ ಅವರನ್ನು ಯಾರೂ ಸ್ಥಳಾಂತರ ಮಾಡುವುದಿಲ್ಲ: ಮೋಹನ್ ಭಾಗವತ್
Mohan Bhagwat “ಕಳೆದ ಮೂರ್ನಾಲ್ಕು ದಶಕಗಳಿಂದ ಕಾಶ್ಮೀರಿ ಪಂಡಿತರು ನಮ್ಮ ಸ್ವಂತ ದೇಶದಲ್ಲಿ ತಮ್ಮ ಮನೆಯಿಂದ ಸ್ಥಳಾಂತರಗೊಳ್ಳುವ ಭಾರವನ್ನು ಹೊತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರು ಸೋಲನ್ನು ಒಪ್ಪಿಕೊಳ್ಳಬಾರದು ಮತ್ತು ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗಿದೆ ”ಎಂದು ಅವರು ಹೇಳಿದರು.
ದೆಹಲಿ: 1990 ರ ದಶಕದಲ್ಲಿ ತಮ್ಮ ಮನೆಗಳಿಂದ ವಲಸೆ ಹೋದ ಕಾಶ್ಮೀರಿ ಪಂಡಿತರು (Kashmiri Pandits) ಕಾಶ್ಮೀರ ಕಣಿವೆಗೆ ಮರಳಿ ಬಂದರೆ ಯಾರೂ ಅವರನ್ನು ಸ್ಥಳಾಂತರಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಭಾನುವಾರ ಹೇಳಿರುವುದಾಗಿ ಎಂದು ಎಎನ್‌ಐ ವರದಿ ಮಾಡಿದೆ. “ಕಾಶ್ಮೀರಿ ಪಂಡಿತರು ತಮ್ಮ ಮನೆಗೆ ಹಿಂದಿರುಗುವ ದಿನ ಬಹಳ ಹತ್ತಿರದಲ್ಲಿದೆ ಎಂಬ ಭಾವನೆ ನನ್ನಲ್ಲಿದೆ ಮತ್ತು ಆ ದಿನ ಶೀಘ್ರದಲ್ಲೇ ಬರಲಿ ಎಂದು ನಾನು ಬಯಸುತ್ತೇನೆ” ಎಂದು ನವ್ರೆಹ್ ಆಚರಣೆಯ ಕೊನೆಯ ದಿನದಂದು (ಭಾನುವಾರ) ಕಾಶ್ಮೀರಿ ಹಿಂದೂ ಸಮುದಾಯ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಭಾಗವತ್ ಹೇಳಿದರು. ಭದ್ರತೆ ಮತ್ತು ಜೀವನೋಪಾಯದ ಭರವಸೆಯೊಂದಿಗೆ ಕಾಶ್ಮೀರಿ ಪಂಡಿತರು ಹಿಂತಿರುಗುತ್ತಾರೆ ಎಂದು ಭಾಗವತ್ ಹೇಳಿದರು. ‘ನಾವು ಉಗ್ರವಾದದ ಕಾರಣದಿಂದ (ಕಾಶ್ಮೀರ) ತೊರೆದಿದ್ದೇವೆ. ಆದರೆ ಈಗ ಹಿಂತಿರುಗಿದಾಗ ನಾವು ಹಿಂದೂಗಳು ಮತ್ತು ಭಾರತದ ಭಕ್ತರಾಗಿ ನಮ್ಮ ಭದ್ರತೆ ಮತ್ತು ಜೀವನೋಪಾಯದ ಭರವಸೆಯೊಂದಿಗೆ ಹಿಂತಿರುಗುತ್ತೇವೆ’. ಯಾರೂ ನಮ್ಮನ್ನು ಸ್ಥಳಾಂತರಿಸಲು ಧೈರ್ಯ ಮಾಡದ ರೀತಿಯಲ್ಲಿ ನಾವು ಬದುಕುತ್ತೇವೆ ಎಂದು ಸಮುದಾಯವು ಸಂಕಲ್ಪ ಮಾಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿರುವುದಾಗಿ ಎಎನ್ಐ ಉಲ್ಲೇಖಿಸಿದೆ.
“ಕಳೆದ ಮೂರ್ನಾಲ್ಕು ದಶಕಗಳಿಂದ ಕಾಶ್ಮೀರಿ ಪಂಡಿತರು ನಮ್ಮ ಸ್ವಂತ ದೇಶದಲ್ಲಿ ತಮ್ಮ ಮನೆಯಿಂದ ಸ್ಥಳಾಂತರಗೊಳ್ಳುವ ಭಾರವನ್ನು ಹೊತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರು ಸೋಲನ್ನು ಒಪ್ಪಿಕೊಳ್ಳಬಾರದು ಮತ್ತು ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗಿದೆ ”ಎಂದು ಅವರು ಹೇಳಿದರು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ವಲಸೆಯ ದುರದೃಷ್ಟಕರ ವಾಸ್ತವವನ್ನು ಪ್ರದರ್ಶಿಸಿದೆ ಎಂದು ಪ್ರತಿಪಾದಿಸಿದ ಭಾಗವತ್, “ಕೆಲವರು ಪರವಾಗಿದ್ದಾರೆ ಆದರೆ ಕೆಲವರು ಅದನ್ನು ವಿರೋಧಿಸುತ್ತಾರೆ. ಕಾಶ್ಮೀರಿ ಪಂಡಿತರ ಭೀಕರ ದುರಂತದ ದುರದೃಷ್ಟಕರ ನೈಜತೆಯನ್ನು ಚಲನಚಿತ್ರಗಳು ಪ್ರದರ್ಶಿಸಿವೆ, ಅದು ನಮ್ಮೆಲ್ಲರನ್ನು ಬೆಚ್ಚಿಬೀಳಿಸಿದೆ.
ಕಾಶ್ಮೀರಿ ಪಂಡಿತರ ಸಮಸ್ಯೆಯನ್ನು ಸಾರ್ವಜನಿಕ ಜಾಗೃತಿಯ ಮೂಲಕ ಪರಿಹರಿಸಲಾಗುವುದು ಮತ್ತು 370 ನೇ ವಿಧಿಯಂತಹ ಅಡೆತಡೆಗಳನ್ನು ತೆಗೆದುಹಾಕಬೇಕು ಎಂದು ನಾನು ಮೊದಲು ಹೇಳಿದ್ದೆ. 2011 ರ ನಂತರ, ಈ 11 ವರ್ಷಗಳಲ್ಲಿ, ನಮ್ಮ ಸಾಮೂಹಿಕ ಪ್ರಯತ್ನದಿಂದಾಗಿ 370 ನೇ ವಿಧಿ ತೆಗೆದುಹಾಕಲಾಯಿತು ಎಂದು ಭಾಗವತ್ ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಪಂಚಾಯತ್: ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಹಿಂದೂಗಳಿಗೆ ಕರೆ ನೀಡಿದ ಯತಿ ನರಸಿಂಗಾನಂದ್