ಹಿಂದೂ ಮಹಾಪಂಚಾಯತ್: ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಹಿಂದೂಗಳಿಗೆ ಕರೆ ನೀಡಿದ ಯತಿ ನರಸಿಂಗಾನಂದ್

ಹಿಂದೂ ಮಹಾಪಂಚಾಯತ್: ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳಲು ಹಿಂದೂಗಳಿಗೆ ಕರೆ ನೀಡಿದ ಯತಿ ನರಸಿಂಗಾನಂದ್
ಹಿಂದೂ ಮಹಾಪಂಚಾಯತ್

ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ನರಸಿಂಗಾನಂದ್, ಭಾರತಕ್ಕೆ ಮುಸ್ಲಿಂ ಪ್ರಧಾನಿ ಸಿಕ್ಕರೆ ಶೇ.40ರಷ್ಟು ಹಿಂದೂಗಳ ಹತ್ಯೆಯಾಗಲಿದೆ. ಇದು ಹಿಂದೂಗಳ ಭವಿಷ್ಯ. ನೀವು ಇದನ್ನು ಬದಲಾಯಿಸಲು ಬಯಸಿದರೆ, ಮನುಷ್ಯರಾಗಿರಿ (ಮರ್ದ್ ಬಾನೋ). ಮನುಷ್ಯನಾಗುವುದು ಅಂದರೆ ಏನು? ಶಸ್ತ್ರಸಜ್ಜಿತರಾಗಿರುವುದು ಎಂದು ಅವರು ಹೇಳಿದರು.

TV9kannada Web Team

| Edited By: Rashmi Kallakatta

Apr 03, 2022 | 5:56 PM

ದೆಹಲಿ: ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ಹರಿದ್ವಾರ ದ್ವೇಷ ಭಾಷಣ (Haridwar hate speech)  ಪ್ರಕರಣದ ಆರೋಪಿ ಯತಿ ನರಸಿಂಗಾನಂದ್ (Yati Narsinghanand) ಅವರು ಭಾನುವಾರ ಹಿಂದೂಗಳಿಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದ್ದಾರೆ. ಭಾರತವು ಮುಸ್ಲಿಂ ಪ್ರಧಾನಿಯನ್ನು ಪಡೆದರೆ, “ನಿಮ್ಮಲ್ಲಿ ಶೇ  50 (ಹಿಂದೂಗಳು) ಮುಂದಿನ 20 ವರ್ಷಗಳಲ್ಲಿ ನಿಮ್ಮ ನಂಬಿಕೆಯನ್ನು ಬದಲಾಯಿಸಿಕೊಳ್ಳುತ್ತೀರಿ ಎಂದು ನರಸಿಂಗಾನಂದ ಹೇಳಿದ್ದಾರೆ. ದೆಹಲಿಯ ಬುರಾರಿ ಮೈದಾನದಲ್ಲಿ ಭಾನುವಾರ ನಡೆದ ‘ಹಿಂದೂ ಮಹಾಪಂಚಾಯತ್’ (Hindu mahapanchayat) ನಡೆದಿದ್ದು ಇದರಲ್ಲಿ ಸುಮಾರು 200 ಜನರು ಭಾಗವಹಿಸಿದ್ದರು.  ಈ ಕಾರ್ಯಕ್ರಮವನ್ನು ಸೇವ್ ಇಂಡಿಯಾ ಫೌಂಡೇಶನ್ ಸಂಸ್ಥಾಪಕ ಪ್ರೀತ್ ಸಿಂಗ್ ಆಯೋಜಿಸಿದ್ದರು. ಕಳೆದ ವರ್ಷ ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳು ಕೂಗಿದ್ದ ಕಾರ್ಯಕ್ರಮದ ಆಯೋಜಕರಲ್ಲಿ ಸಿಂಗ್ ಕೂಡ ಒಬ್ಬರಾಗಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ನರಸಿಂಗಾನಂದ ಕೂಡ ಹರಿದ್ವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿದ್ದಾರೆ. ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ನರಸಿಂಗಾನಂದ್, ಭಾರತಕ್ಕೆ ಮುಸ್ಲಿಂ ಪ್ರಧಾನಿ ಸಿಕ್ಕರೆ ಶೇ.40ರಷ್ಟು ಹಿಂದೂಗಳ ಹತ್ಯೆಯಾಗಲಿದೆ . ಇದು ಹಿಂದೂಗಳ ಭವಿಷ್ಯ. ನೀವು ಇದನ್ನು ಬದಲಾಯಿಸಲು ಬಯಸಿದರೆ, ಗಂಡಸಾಗಿ (ಮರ್ದ್ ಬಾನೋ). ಗಂಡಸಾಗುವುದು ಅಂದರೆ ಏನು? ಶಸ್ತ್ರಸಜ್ಜಿತರಾಗಿರುವುದು ಎಂದು ಅವರು ಹೇಳಿದರು.

ಅಷ್ಟೇ ಅಲ್ಲದೆ ಮಕ್ಕಳನ್ನು ಹುಟ್ಟಿಸಿ, ಅವರನ್ನು ಹೋರಾಡುವುದಕ್ಕೆ ಯೋಗ್ಯರನ್ನಾಗಿ ಮಾಡಿ ಎಂದು ಯತಿ ನರಸಿಂಗಾನಂದ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸುರೇಶ್ ಚವ್ಹಾಂಕೆ ಅವರು ಸಮಾನ ಹಕ್ಕುಗಳನ್ನು  ನಾನು ವಿರೋಧಿಸುತ್ತೇನೆ.  ಪಾಕಿಸ್ತಾನದಲ್ಲಿ “ಹಿಂದೂಗಳು” ಹೊಂದಿರುವ ಹಕ್ಕುಗಳಷ್ಟೇ  ಹಕ್ಕನ್ನು  ಭಾರತದಲ್ಲಿನ “ಮುಸ್ಲಿಮರು” ಪಡೆಯಬೇಕು  ಎಂದು ಹೇಳಿದ್ದಾರೆ .

ಕಾರ್ಯಕ್ರಮ ನಡೆಸಲು ಆಯೋಜಕರು ಅನುಮತಿ ಪಡೆದಿರಲಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರೀತ್ ಸಿಂಗ್ ಅವರ ಟ್ವಿಟರ್ ಖಾತೆಯ ಪ್ರಕಾರ, ಈ ಕಾರ್ಯಕ್ರಮವನ್ನು ಆಯೋಜಿಸಲು ಈ ವರ್ಷದ ಜನವರಿ 4ರಂದು ನಿರ್ಧರಿಸಲಾಗಿತ್ತು.

ಈ ನಡುವೆ ಕಾರ್ಯಕ್ರಮವನ್ನು ವರದಿ ಮಾಡಲು ಹೋದ ಕೆಲವು ಪತ್ರಕರ್ತರಿಗೆ ಸಭಿಕರು ಥಳಿಸಿದ್ದಾರೆ ಎಂದು ಆರೋಪಿಸಿದರು. ಅವರಲ್ಲಿ ಕೆಲವರು ತಮ್ಮನ್ನು ದೆಹಲಿ ಪೊಲೀಸರು ಸ್ಥಳದಿಂದ ಬಂಧಿಸಿ ಮುಖರ್ಜಿ ನಗರ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ಆರೋಪಿಸಿದರು.

ಆದರೆ ದೆಹಲಿ ಪೊಲೀಸರು ಆರೋಪವನ್ನು ನಿರಾಕರಿಸಿದ್ದಾರೆ. “ಕೆಲವು ವರದಿಗಾರರು, ಸ್ವಇಚ್ಛೆಯಿಂದ ಅವರ ಉಪಸ್ಥಿತಿಯಿಂದ ಉದ್ರೇಕಗೊಳ್ಳುತ್ತಿದ್ದ ಪ್ರಕ್ಷುಬ್ಧ ಗುಂಪಿನಿಂದ ತಪ್ಪಿಸಿಕೊಳ್ಳಲು ಸ್ಥಳದಲ್ಲಿ ನಿಲ್ಲಿಸಲಾದ ಪಿಸಿಆರ್ ವ್ಯಾನ್‌ನಲ್ಲಿ ಕುಳಿತು ಭದ್ರತಾ ಕಾರಣಗಳಿಗಾಗಿ ಪೊಲೀಸ್ ಠಾಣೆಗೆ ಹೋಗಲು ನಿರ್ಧರಿಸಿದರು. ಯಾರನ್ನೂ ಬಂಧಿಸಲಾಗಿಲ್ಲ. ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ವಾಯುವ್ಯ ಡಿಸಿಪಿ ಉಷಾ ರಂಗಾಣಿ ತಿಳಿಸಿದ್ದಾರೆ.

ಇದನ್ನೂ ಓದಿ:Crisis in Sri Lanka 1ಕೆಜಿ ಅಕ್ಕಿಗೆ ₹220, ಹಾಲಿನ ಪುಡಿಗೆ ₹1900, ಒಂದು ಮೊಟ್ಟೆಗೆ ₹30; ಶ್ರೀಲಂಕಾದಲ್ಲಿ ದಿನಸಿ ಬೆಲೆ ಧುತ್ತನೆ ಏರಿಕೆ

Follow us on

Related Stories

Most Read Stories

Click on your DTH Provider to Add TV9 Kannada