AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crisis in Sri Lanka 1ಕೆಜಿ ಅಕ್ಕಿಗೆ ₹220, ಹಾಲಿನ ಪುಡಿಗೆ ₹1900, ಒಂದು ಮೊಟ್ಟೆಗೆ ₹30; ಶ್ರೀಲಂಕಾದಲ್ಲಿ ದಿನಸಿ ಬೆಲೆ ಧುತ್ತನೆ ಏರಿಕೆ

Sri Lanka Economic crisis ಇತ್ತೀಚಿನ ವಾರಗಳಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ, ಆದರೆ ಅಕ್ಕಿ ಮತ್ತು ಗೋಧಿಯಂತಹ ಪ್ರಮುಖ ಪದಾರ್ಥಗಳು ಕ್ರಮವಾಗಿ ಕೆಜಿಗೆ 220 ರೂ ಮತ್ತು ಕೆಜಿಗೆ 190 ರೂ.ಗೆ ಮಾರಾಟವಾಗುತ್ತಿವೆ.

Crisis in Sri Lanka 1ಕೆಜಿ ಅಕ್ಕಿಗೆ ₹220, ಹಾಲಿನ ಪುಡಿಗೆ ₹1900, ಒಂದು ಮೊಟ್ಟೆಗೆ ₹30; ಶ್ರೀಲಂಕಾದಲ್ಲಿ ದಿನಸಿ ಬೆಲೆ ಧುತ್ತನೆ ಏರಿಕೆ
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 03, 2022 | 4:36 PM

ಏರುತ್ತಿರುವ ಹಣದುಬ್ಬರ ಮತ್ತು ದುರ್ಬಲಗೊಂಡಿರುವ ಕರೆನ್ಸಿಯಿಂದಾಗಿ ಶ್ರೀಲಂಕಾದಲ್ಲಿ (SriLanka) ಮೂಲ ಸರಕುಗಳ ಬೆಲೆಗಳನ್ನು ಗಗನಕ್ಕೇರಿದೆ. ಆರ್ಥಿಕ ಬಿಕ್ಕಟ್ಟಿನ (Economic  Crisis)ನಡುವೆಯೇ ದ್ವೀಪ ರಾಷ್ಟ್ರದ ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹೆಚ್ಚಾಗಿ, ಅನೇಕರು ಬರಿಗೈಯಲ್ಲಿ ಮರಳುತ್ತಾರೆ. ಇದಕ್ಕೆ ಕಾರಣಗಳು ಎರಡು. ಅಂಗಡಿಯಲ್ಲಿ ಸಾಮಾಗ್ರಿ ಮುಗಿದಿರುವುದು ಒಂದನೇ ಕಾರಣ ಆಗಿದ್ದರೆ ಜನರಲ್ಲಿ ಅದನ್ನು ಖರೀದಿಸಲು ಹಣವಿಲ್ಲದೇ ಇರುವುದು ಎರಡನೇ ಕಾರಣ. ಇಂಡಿಯಾ ಟುಡೇ ರಾಜಧಾನಿ ಕೊಲಂಬೊದಲ್ಲಿನ (Colombo) ಸೂಪರ್‌ಮಾರ್ಕೆಟ್‌ಗೆ ಭೇಟಿ ನೀಡಿ ಶ್ರೀಲಂಕಾದವರು ತಮ್ಮ ದೈನಂದಿನ ದಿನಸಿಗಾಗಿ ಎಷ್ಟು ಖರ್ಚು ಮಾಡುತ್ತಾರೆ ಎಂಬುದನ್ನು ವರದಿ ಮಾಡಿದೆ. ಇತ್ತೀಚಿನ ವಾರಗಳಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ, ಆದರೆ ಅಕ್ಕಿ ಮತ್ತು ಗೋಧಿಯಂತಹ ಪ್ರಮುಖ ಪದಾರ್ಥಗಳು ಕ್ರಮವಾಗಿ ಕೆಜಿಗೆ 220 ರೂ ಮತ್ತು ಕೆಜಿಗೆ 190 ರೂ.ಗೆ ಮಾರಾಟವಾಗುತ್ತಿವೆ. ಒಂದು ಕೆಜಿ ಸಕ್ಕರೆ ಬೆಲೆ 240 ರೂ. ಆಗಿದ್ದು ತೆಂಗಿನ ಎಣ್ಣೆ ಲೀಟರ್‌ಗೆ 850 ರೂ.ಆಗಿದೆ. ಒಂದು ಮೊಟ್ಟೆಯ ಬೆಲೆ 30 ಹಾಗೂ, 1 ಕೆಜಿ ಹಾಲಿನ ಪುಡಿಯ ಪ್ಯಾಕ್ ಈಗ 1900 ರೂ.ಗೆ ಮಾರಾಟವಾಗುತ್ತದೆ. ಫೆಬ್ರವರಿಯಲ್ಲಿಯೇ ಶ್ರೀಲಂಕಾದ ಚಿಲ್ಲರೆ ಹಣದುಬ್ಬರವು  ಶೇಕಡಾ 17.5 ಕ್ಕೆ ತಲುಪಿದೆ ಮತ್ತು ಆಹಾರ ಹಣದುಬ್ಬರವು ಶೇಕಡಾ 25 ಕ್ಕಿಂತ ಹೆಚ್ಚಿದೆ, ಇದು ಆಹಾರ ಮತ್ತು ಧಾನ್ಯಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಔಷಧಿಗಳು ಮತ್ತು ಹಾಲಿನ ಪುಡಿಯ ದೊಡ್ಡ ಕೊರತೆಯೂ ಇದೆ.

ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದೆ. ರಾಜಧಾನಿ ಸೇರಿದಂತೆ ದೇಶದ ಅನೇಕ ಪಾಕೆಟ್‌ಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತಕ್ಕೆ ರಾಜಪಕ್ಸೆ ಆಡಳಿತವನ್ನು ಪ್ರತಿಭಟನಾಕಾರರು ದೂಷಿಸಿದ್ದಾರೆ.

ಕುಸಿದ ಬೇಡಿಕೆ:  ಶ್ರೀಲಂಕಾಕ್ಕಿರುವ   ವಿಮಾನಗಳ ಸಂಖ್ಯೆ ಕಡಿಮೆ ಮಾಡಿದ ಏರ್ ಇಂಡಿಯಾ ಏರ್ ಇಂಡಿಯಾ ಭಾನುವಾರ ತನ್ನ ಭಾರತ-ಶ್ರೀಲಂಕಾ ನಡುವೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ   ಏಪ್ರಿಲ್ 9 ರಿಂದ ವಾರಕ್ಕೆ 13 ವಿಮಾನಗಳು ಸಂಚರಿಸಲಿದ್ದು  ಈ ಹಿಂದೆ ವಾರಕ್ಕೆ 16 ವಿಮಾನಗಳು ಸಂಚರಿಸುತ್ತಿದ್ದವು. ಬೇಡಿಕೆ  ಕುಸಿದಿರುವುದೇ ವಿಮಾನಗಳ  ಸಂಖ್ಯೆ ಕಡಿಮೆ ಮಾಡಲು ಕಾರಣ ಎಂದು ಹೇಳಲಾಗಿದೆ.

ಶ್ರೀಲಂಕಾ ಪ್ರಸ್ತುತ ಇತಿಹಾಸದಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತದಿಂದ ಸಾರ್ವಜನಿಕರು ವಾರಗಟ್ಟಲೆ ತೊಂದರೆ ಅನುಭವಿಸುತ್ತಿದ್ದಾರೆ.” ಪ್ರಸ್ತುತ ಏರ್ ಇಂಡಿಯಾ ವಾರಕ್ಕೆ 16 ವಿಮಾನಗಳನ್ನು ನಿರ್ವಹಿಸುತ್ತಿದೆ – ದೆಹಲಿಯಿಂದ ದೈನಂದಿನ ವಿಮಾನಗಳು ಮತ್ತು ಚೆನ್ನೈನಿಂದ ವಾರಕ್ಕೆ ಒಂಬತ್ತು ವಿಮಾನಗಳು ಕಾರ್ಯ ನಿರ್ವಹಿಸಲಿವೆ ಎಂದು   ಏರ್ ಇಂಡಿಯಾ ವಕ್ತಾರರು ಪಿಟಿಐಗೆ ತಿಳಿಸಿದರು.

“ಬೇಡಿಕೆ ಕುಸಿದ ಕಾರಣ ಏಪ್ರಿಲ್ 9 ರಿಂದ ದೆಹಲಿಯಿಂದ ನಾಲ್ಕು ವಿಮಾನಗಳು ಜಾರಿಯಲ್ಲಿರುತ್ತವೆ” ಎಂದು ವಕ್ತಾರರು ಹೇಳಿದ್ದಾರೆ. ದೆಹಲಿ-ಕೊಲಂಬೊ ಸೆಕ್ಟರ್‌ನಲ್ಲಿ AI 283 ಈಗ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಏಪ್ರಿಲ್ 8 ರಿಂದ ಮೇ 30 ರವರೆಗೆ ಕಾರ್ಯನಿರ್ವಹಿಸುತ್ತದೆ. AI 284 ರಂದು ಕೊಲಂಬೊ-ದೆಹಲಿ ಸೆಕ್ಟರ್ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಏಪ್ರಿಲ್ 9 ರಿಂದ ಮೇ 31 ರವರೆಗೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: Sri Lanka Economic Crisis ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗೆ ನಿರ್ಬಂಧ; 36 ಗಂಟೆಗಳ ಕರ್ಫ್ಯೂ ವಿಧಿಸಿದ ಸರ್ಕಾರ

Published On - 4:35 pm, Sun, 3 April 22

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ