Pakistan ಪಾಕಿಸ್ತಾನದ ಸಂಸತ್ ವಿಸರ್ಜಿಸಿದ ಅಧ್ಯಕ್ಷ; 90 ದಿನಗಳ ಒಳಗೆ ಚುನಾವಣೆ ನಡೆಸಲು ಸೂಚನೆ
"ಸಂವಿಧಾನದ 224 ನೇ ವಿಧಿಯ ಅಡಿಯಲ್ಲಿ ಪ್ರಧಾನಿ ತಮ್ಮ ಕರ್ತವ್ಯಗಳನ್ನು ಮುಂದುವರಿಸುತ್ತಾರೆ. ಕ್ಯಾಬಿನೆಟ್ ಅನ್ನು ವಿಸರ್ಜಿಸಲಾಗಿದೆ" ಎಂದು ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ(National Assembly) ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ನಂತರ ದೇಶವನ್ನುದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಭಾನುವಾರ ಹೊಸ ಚುನಾವಣೆಗೆ ಕರೆ ನೀಡಿದ್ದಾರೆ. ಸಂಸತ್ ವಿಸರ್ಜಿಸುವಂತೆ ಅಧ್ಯಕ್ಷರಿಗೆ ಕೇಳಿದ್ದೇನೆ ಎಂದ ಖಾನ್ ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆಗಳು ನಡೆಯಬೇಕು. ಚುನಾವಣೆಗೆ ಸಿದ್ಧರಾಗುವಂತೆ ನಾನು ಪಾಕಿಸ್ತಾನದ ಜನರಿಗೆ ಕರೆ ನೀಡುತ್ತೇನೆ ಎಂದಿದ್ದಾರೆ. ಖಾನ್ ದೇಶವನ್ನುದ್ದೇಶಿಸಿ ಮಾತನಾಡಿದ ಬೆನ್ನಲ್ಲೇ ಪಾಕ್ ಅಧ್ಯಕ್ಷ ಆರಿಫ್ ಅಲ್ವಿ (Arif Alvi ) ಸಂಸತ್ ವಿಸರ್ಜಿಸಿದ್ದು, 90 ದಿನಗಳ ಒಳಗೆ ಚುನಾವಣೆ ನಡೆಸಲು ಸೂಚನೆ ನೀಡಿದ್ದಾರೆ. 90 ದಿನಗಳಲ್ಲಿ ಹೊಸ ಚುನಾವಣೆ ನಡೆಯಲಿದೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಫರೂಖ್ ಹಬೀಬ್ ಟ್ವೀಟ್ ಮಾಡಿದ್ದಾರೆ. ಸಂಸತ್ತಿನಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾದ ನಂತರ ಹೊಸ ಚುನಾವಣೆಗೆ ಮತ್ತು ಸಂಸತ್ ವಿಸರ್ಜಿಸುವಂತೆ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದರು. ಪ್ರಧಾನಿ ಇಮ್ರಾನ್ ಖಾನ್ ಅವರ ಸಲಹೆಯ ಮೇರೆಗೆ ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಅವರು ಸಂಸತ್ ವಿಸರ್ಜಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
‘ಸರ್ಪ್ರೈಸ್, 3 ವಿಕೆಟ್ಸ್’: ಅವಿಶ್ವಾಸ ನಿರ್ಣಯ ವಜಾ ನಂತರ ಇಮ್ರಾನ್ ಖಾನ್ ಪಕ್ಷದ ಟ್ವೀಟ್ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ನಂತರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ‘ಸರ್ಪ್ರೈಸ್ , 3 ವಿಕೆಟ್ಸ್’ ಎಂದು ಟ್ವೀಟ್ ಮಾಡಿದೆ.
وَتُعِزُ مَن تَشَاء وَتُذِلُ مَن تَشَاء
#بیرونی_سازش_ناکام pic.twitter.com/7a1W5r2NS0
— PTI (@PTIofficial) April 3, 2022
ಜನರಿಗೆ ಯಾರು ಬೇಕು ಎಂಬುದನ್ನು ಅವರೇ ನಿರ್ಧರಿಸಲಿ: ಇಮ್ರಾನ್ ಖಾನ್ ರಾಷ್ಟ್ರವನ್ನು ಅಭಿನಂದಿಸಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್, ಡೆಪ್ಯೂಟಿ ಸ್ಪೀಕರ್ ಖಾಸಿಮ್ ಸೂರಿ ಅವರು “ಆಡಳಿತ ಬದಲಾವಣೆಯ ಪ್ರಯತ್ನವನ್ನು ತಿರಸ್ಕರಿಸಿದ್ದಾರೆ ಮತ್ತು ಅಂತರರಾಷ್ಟ್ರೀಯ ಪಿತೂರಿಯನ್ನು ನಿಲ್ಲಿಸಿದ್ದಾರೆ” ಎಂದು ಹೇಳಿದರು.
ಭವಿಷ್ಯದ ಬಗ್ಗೆ ಜಾಗರೂಕರಾಗಿರುವ ಜನರಿಂದ ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದ ಪ್ರಧಾನಿ ನಾನು ಹೇಳುವುದಿಷ್ಟೇ, “ಗಬ್ರಾನಾ ನಹೀ ಹೈ (ಚಿಂತಿಸಬೇಡಿ). ದೇವರು ಪಾಕಿಸ್ತಾನವನ್ನು ನೋಡುತ್ತಿದ್ದಾನೆ ಎಂದಿದ್ದಾರೆ.
ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಾನ್, ಅಸೆಂಬ್ಲಿಗಳನ್ನು ವಿಸರ್ಜಿಸುವಂತೆ ಅಲ್ವಿ ಅವರನ್ನು ಕೇಳಿದ್ದೇನೆ ಮತ್ತು ಹೊಸ ಚುನಾವಣೆಗೆ ಕರೆ ನೀಡಿದ್ದೇನೆ ಎಂದು ಹೇಳಿದರು. “ಪಾಕಿಸ್ತಾನದ ಜನರಿಗೆ ಚುನಾವಣೆಗೆ ತಯಾರಿ ನಡೆಸುವಂತೆ ನಾನು ಕರೆ ನೀಡುತ್ತೇನೆ” ಎಂದು ಖಾನ್ ಹೇಳಿದರು.
— Dr. Shahbaz GiLL (@SHABAZGIL) April 3, 2022
ಪಾಕ್ ಸಚಿವ ಸಂಪುಟ ವಿಸರ್ಜನೆ, ಅಧಿಕಾರದಲ್ಲಿ ಮುಂದುವರೆಯಲ್ಲಿದ್ದಾರೆ ಇಮ್ರಾನ್ ಖಾನ್ “ಸಂವಿಧಾನದ 224 ನೇ ವಿಧಿಯ ಅಡಿಯಲ್ಲಿ ಪ್ರಧಾನಿ ತಮ್ಮ ಕರ್ತವ್ಯಗಳನ್ನು ಮುಂದುವರಿಸುತ್ತಾರೆ. ಕ್ಯಾಬಿನೆಟ್ ಅನ್ನು ವಿಸರ್ಜಿಸಲಾಗಿದೆ” ಎಂದು ಪಾಕಿಸ್ತಾನದ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
آئین کے آرٹیکل 224 کے تحت وزیر اعظم اپنی ذمہ داریاں جاری رکھیں گے کابینہ تحلیل کر دی گئ ہے
— Ch Fawad Hussain (@fawadchaudhry) April 3, 2022
ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿದೆ: ವಿಪಕ್ಷ ನಾಯಕ
ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಹಾಲಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ, “ಸರ್ಕಾರವು ಸಂವಿಧಾನವನ್ನು ಉಲ್ಲಂಘಿಸಿದೆ. ಅವಿಶ್ವಾಸ ನಿರ್ಣಯದ ಮೇಲೆ ಮತದಾನಕ್ಕೆ ಅವಕಾಶ ನೀಡಲಿಲ್ಲ. ಸಂಯುಕ್ತ ಪ್ರತಿಪಕ್ಷವು ಸಂಸತ್ತನ್ನು ಬಿಡುತ್ತಿಲ್ಲ. ನಮ್ಮ ವಕೀಲರು ಸುಪ್ರೀಂಕೋರ್ಟ್‌ಗೆ ಹೋಗುತ್ತಿದ್ದಾರೆ. ಪಾಕಿಸ್ತಾನದ ಸಂವಿಧಾನವನ್ನು ರಕ್ಷಿಸಲು, ಎತ್ತಿಹಿಡಿಯಲು, ರಕ್ಷಿಸಲು ಮತ್ತು ಜಾರಿಗೊಳಿಸಲು ಎಲ್ಲಾ ಸಂಸ್ಥೆಗಳಿಗೆ ನಾವು ಕರೆ ನೀಡುತ್ತಿದ್ದೇವೆ. ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಮತ್ತು ಇಂದು ಪ್ರಕರಣದ ವಿಚಾರಣೆ ಮಾಡುವಂತೆ ಕೇಳಲಿದ್ದೇವೆ ಎಂದಿದ್ದಾರೆ.
Published On - 2:01 pm, Sun, 3 April 22