ಲಷ್ಕರ್​ ಇ ತೊಯ್ಬಾ ಉಗ್ರರಿಗೆ ನೆರವು ನೀಡುತ್ತಿದ್ದ ನಾಲ್ವರನ್ನು ಬಂಧಿಸಿದ ಬಂಡಿಪೋರಾ ಪೊಲೀಸರು !

ಅಜೀಜ್ ಭಟ್​ ಪಾಕಿಸ್ತಾನಿ ಮೂಲದ ಉಗ್ರ ಉಮರ್​ ಲಾಲಾ ಮತ್ತು ಕಾಶ್ಮೀರದ ಹಾಜಿನ್​ನ ಭಯೋತ್ಪಾದಕನಾಗಿದ್ದ ಮೃತ ಸಲೀಂ ಪರ್ರೆಯೊಟ್ಟಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದವನಾಗಿದ್ದ.

ಲಷ್ಕರ್​ ಇ ತೊಯ್ಬಾ ಉಗ್ರರಿಗೆ ನೆರವು ನೀಡುತ್ತಿದ್ದ ನಾಲ್ವರನ್ನು ಬಂಧಿಸಿದ ಬಂಡಿಪೋರಾ ಪೊಲೀಸರು !
ಸಾಂದರ್ಭಿಕ ಚಿತ್ರ
Follow us
| Updated By: Lakshmi Hegde

Updated on: Apr 03, 2022 | 3:46 PM

ಜಮ್ಮು-ಕಾಶ್ಮೀರದಾದ್ಯಂತ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ. ಇಂದು ಬಂಡಿಪೋರಾ ಪೊಲೀಸರು ಎರಡು ಭಯೋತ್ಪಾದನಾ ಚಟುವಟಿಕೆ ಘಟಕಗಳ ಮೇಲೆ ದಾಳಿ ನಡೆಸಿದ್ದು, ಲಷ್ಕರ್​ ಇ ತೊಯಬಾ ಸಂಘಟನೆಗೆ ನೆರವು ನೀಡುತ್ತಿದ್ದ ನಾಲ್ವರನ್ನ ಬಂಧಿಸಿದ್ದಾರೆ. ಬಂಧಿತರು ಜಿಲ್ಲೆಯಲ್ಲಿನ ಲಷ್ಕರ್​ ಇ ತೊಯಬಾ ಸಂಘಟನೆಗೆ ಸಾಗಣೆಗೆ, ಸಂಚಾರಕ್ಕೆ ಸಹಾಯ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಬಂಡಿಪೋರಾದ ಅಷ್ಟಾಂಗೋ ಎಂಬ ಪ್ರದೇಶದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹಾಗೇ ಇನ್ನೊಬ್ಬಾತನನ್ನು ರಾಖ್​​ ಹಾಜಿನ್​ ಎಂಬಲ್ಲಿ ಅರೆಸ್ಟ್ ಮಾಡಲಾಗಿದೆ. ಇರ್ಫಾನ್ ಅಹ್ಮದ್​ ಭಟ್​, ಸಜದ್​ ಅಹ್ಮದ್​ ಮಿರ್​, ಇರ್ಫಾನ್​ ಅಹ್ಮದ್ ಜಾನ್​ ಎಂಬುವರು ಅಷ್ಟಾಂಗೋದಲ್ಲಿ ಬಂಧಿತರಾದವರಾಗಿದ್ದು, ಇರ್ಫಾನ್ ಅಜೀಜ್ ಭಟ್​ ರಾಖ್​​ ಹಾಜಿನ್​​ನಲ್ಲಿ ಅರೆಸ್ಟ್ ಆಗಿದ್ದಾನೆ. ಈತನಿಂದ ಚೈನೀಸ್ ಗ್ರನೇಡ್ ವಶಪಡಿಸಿಕೊಳ್ಳಲಾಗಿದೆ. 

ಇದರಲ್ಲಿ ಅಜೀಜ್ ಭಟ್​ ಪಾಕಿಸ್ತಾನಿ ಮೂಲದ ಉಗ್ರ ಉಮರ್​ ಲಾಲಾ ಮತ್ತು ಕಾಶ್ಮೀರದ ಹಾಜಿನ್​ನ ಭಯೋತ್ಪಾದಕನಾಗಿದ್ದ ಮೃತ ಸಲೀಂ ಪರ್ರೆಯೊಟ್ಟಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದವನಾಗಿದ್ದ. ಈಗಂತೂ ಪಾಕಿಸ್ತಾನದಲ್ಲಿರುವ ತನ್ನ ಸಹಚರರೊಂದಿಗೆ ಸೇರಿಕೊಂಡು  ಹಾಜಿನ್​ನಲ್ಲಿ ಹಲವು ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ.  ಸದ್ಯ ಇವರನ್ನೆಲ್ಲ ಬಂಡಿಪೋರಾ ಮತ್ತು ಹಾಜಿನ್​ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮೂರು ಮದುವೆಯಾಗಿದ್ದವನ ಅಸ್ತಿಪಂಜರ ದಟ್ಟಾರಣ್ಯದ ಬಾವಿಯಲ್ಲಿ ಸಿಕ್ತು; ಕೊಲೆ ಮಾಡಿದ್ಯಾರು?-ಆರೋಪಿಗಳಿಗಾಗಿ ಹುಡುಕಾಟ