ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು, ಹತ್ಯೆಗಿಂತಲೂ 5 ಪಟ್ಟು ಅಧಿಕ; ಬಿಹಾರ ಇದಕ್ಕೆ ಅಪವಾದ

ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು, ಹತ್ಯೆಗಿಂತಲೂ 5 ಪಟ್ಟು ಅಧಿಕ; ಬಿಹಾರ ಇದಕ್ಕೆ ಅಪವಾದ
ಸಾಂಕೇತಿಕ ಚಿತ್ರ

ಆತ್ಮಹತ್ಯೆ ಎಂಬುದು ಹತ್ಯೆಯಷ್ಟೇ ಮಹಾಪಾಪ. ಆದರೆ ಭಾರತವೂ ಸೇರಿ, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ಆತ್ಮಹತ್ಯೆ ಪ್ರಮಾಣ ಜಾಸ್ತಿಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

TV9kannada Web Team

| Edited By: Lakshmi Hegde

Apr 04, 2022 | 8:34 AM

ದೇಶದಲ್ಲಿ ಹತ್ಯೆ ಪ್ರಕರಣಗಳನ್ನು ತಡೆಯಲು ಸರ್ಕಾರಗಳು ತುಂಬ ಕ್ರಮ ಕೈಗೊಳ್ಳುತ್ತಿವೆ. ಈ ಹತ್ಯೆ ಆರೋಪಿಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯನ್ನೂ ವಿಧಿಸಲಾಗುತ್ತಿದೆ. ಆದರೆ ಈಗೊಂದು ಹೊಸ ಸರ್ವೇ ಪ್ರಕಾರ ದೇಶದಲ್ಲಿ ಹತ್ಯೆಗೊಳಗಾಗಿ ಸಾಯುವವರಿಗಿಂತ, ಆತ್ಮಹತ್ಯೆ ಮಾಡಿಕೊಂಡು ಸಾಯುವವರ ಸಂಖ್ಯೆಯೇ ಹೆಚ್ಚು ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು, ಹತ್ಯೆಗಿಂತಲೂ ಐದು ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಇಲ್ಲಿ ಪ್ರತಿರಾಜ್ಯಗಳಲ್ಲೂ ಕೊಲೆ ರೇಟ್​ಗಿಂತ, ಆತ್ಮಹತ್ಯೆ ರೇಟ್​ ಹೆಚ್ಚು. ಕೇರಳದಲ್ಲಿ ಈ ಅನುಪಾತ 27:1 ಇದೆ. ಇಡೀ ದೇಶದಲ್ಲಿ ಬಿಹಾರದಲ್ಲಿ ಮಾತ್ರ ಕೊಲೆ ಪ್ರಕರಣಗಳ ಸಂಖ್ಯೆ ಹೆಚ್ಚು. ಇಲ್ಲಿ ಆತ್ಮಹತ್ಯೆಗಿಂತಲೂ ಹತ್ಯೆ ಪ್ರಮಾಣ 4 ಪಟ್ಟು ಅಧಿಕ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಬರೀ ಭಾರತದಲ್ಲಿ ಅಷ್ಟೆ ಅಲ್ಲ, ಜಾಗತಿಕವಾಗಿಯೂ ಹತ್ಯೆಗಿಂತಲೂ, ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು. ಲ್ಯಾಟಿನ್​ ಅಮೆರಿಕಾ ಇದಕ್ಕೆ ಅಪವಾದ. ಇಲ್ಲಿ ಕೊಲೆಯೇ ಜಾಸ್ತಿ. 

ಆತ್ಮಹತ್ಯೆ ಎಂಬುದು ಹತ್ಯೆಯಷ್ಟೇ ಮಹಾಪಾಪ. ಆದರೆ ಭಾರತವೂ ಸೇರಿ, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ಆತ್ಮಹತ್ಯೆ ಪ್ರಮಾಣ ಜಾಸ್ತಿಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಜನರು ಇಂಥ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲಿ ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ಸಮಸ್ಯೆಯಾದಾಗ, ಖಿನ್ನತೆಗೆ ಒಳಗಾಗಿದ್ದಾಗ, ಅನಾರೋಗ್ಯದಿಂದ ಬಳಲುತ್ತ ಬೇಸತ್ತಿದ್ದವರು, ಕೌಟುಂಬಿಕ ಸಮಸ್ಯೆಯಿಂದ ಕಂಗೆಟ್ಟು..ಹೀಗೆ ಅನೇಕ ಕಾರಣಗಳಿಗೆ  ಜೀವ ತೆಗೆದುಕೊಳ್ಳುವವರು ಇದ್ದಾರೆ. ಅದರಲ್ಲೂ ಒಂದು ಸಮೀಕ್ಷೆಯ ಪ್ರಕಾರ, ಯುವವಯಸ್ಸಿನ ಜನರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನೇಣು ಬಿಗಿದುಕೊಳ್ಳುವುದು, ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಳ್ಳುವವರು, ರೈಲಿಗೆ ತಲೆ ಕೊಡುವವರು, ವಿಷ ಸೇವನೆ ಹೀಗೆ ನಾನಾ ಮಾರ್ಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಆತ್ಮಹತ್ಯೆ ತಡೆಗಾಗಿ ಕೂಡ ಒಂದಷ್ಟು ಕಠಿಣ ನಿಯಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ‘ನನ್ನಮ್ಮ ಸೂಪರ್​ ಸ್ಟಾರ್​’ ವಿನ್ನರ್​ ವಂಶಿಕಾ-ಯಶಸ್ವಿನಿ; ಟ್ರೋಫಿ ಜೊತೆ ಸಿಕ್ಕಿರುವ ಬಹುಮಾನದ ಹಣ ಎಷ್ಟು?

Follow us on

Related Stories

Most Read Stories

Click on your DTH Provider to Add TV9 Kannada