ನಿಂತಿದ್ದ ಕಂಟೇನರ್‌ಗೆ ಕಾರು ಡಿಕ್ಕಿ: ಸಿಂದಗಿ ಸಿಪಿಐ ಹಾಗೂ ಪತ್ನಿ ದುರ್ಮರಣ!

TV9kannada Web Team

TV9kannada Web Team | Edited By: Ramesh B Jawalagera

Updated on: Dec 07, 2022 | 7:34 PM

Accident In Kalaburagi District: ಕಂಟೇನರ್​ಗೆ ಕಾರು ಡಿಕ್ಕಿಯಾಗಿ ವಿಜಯಪುರದ ಸಿಂದಗಿ ಸಿಪಿಐ ಹಾಗೂ ಪತ್ನಿ ದುರ್ಮರಣ ಹೊಂದಿದ್ದಾರೆ.

ನಿಂತಿದ್ದ ಕಂಟೇನರ್‌ಗೆ ಕಾರು ಡಿಕ್ಕಿ: ಸಿಂದಗಿ ಸಿಪಿಐ ಹಾಗೂ ಪತ್ನಿ ದುರ್ಮರಣ!
ಸಿಂದಗಿ ಸಿಪಿಐ ಹಾಗೂ ಪತ್ನಿ ದುರ್ಮರಣ

ಕಲಬುರಗಿ: ರಸ್ತೆಬದಿ ನಿಂತಿದ್ದ ಕಂಟೇನರ್​ಗೆ (container) ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ದಂಪತಿ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ (Kalaburagi District)ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ. ಇಂದು(ಡಿಸೆಂಬರ್ 07) ನೆಲೋಗಿ ಕ್ರಾಸ್‍ನಲ್ಲಿ ನಿಂತಿದ್ದ ಕಂಟೇನರ್​ ಹಿಂಬದಿಗೆ​ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ಸಿಪಿಐ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.

ವಿಜಯಪುರ ಸಿಪಿಐ ರವಿ ಉಕ್ಕುಂದ ಹಾಗೂ ಪತ್ನಿ ಮಧು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಂದಗಿಯಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ನಿಂತಿದ್ದ ಕಂಟೇನರ್​ಗೆ ಕಾರು ಡಿಕ್ಕಿ ಹೊಡೆದಿದೆ. ಹಿಂಬದಿಗೆ ಹೋಗಿ ಗುದ್ದಿದ್ದರಿಂದ ಕಾರಿನ ಅರ್ಧ ಭಾಗ ಕಂಟೇನರ್​ ಒಳ ಹೊಕ್ಕಿದೆ.

ಘಟನೆಯಲ್ಲಿ ದಂಪತಿ ದುರ್ಮರಣ ಹೊಂದಿದ್ದು, ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಇನ್ನು ಈ ಬಗ್ಗೆ ನಲೋಗಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ಮೃತ ದಂಪತಿಗೆ ಕೊಪ್ಪಳದಲ್ಲಿ ಶ್ರದ್ಧಾಂಜಲಿ ರಸ್ತೆ ಅಪಘಾತದಲ್ಲಿ ಸಿಂದಗಿ ಸಿಪಿಐ ರವಿ ಉಕ್ಕುಂದ ಹಾಗೂ ಪತ್ನಿ ಮೃತ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಮೃತ ದಂಪತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ನಗರದ ಬಸ್ ನಿಲ್ದಾಣದಿಂದ ಅಶೋಕ ವೃತ್ತದವರೆಗೆ ಸಾರ್ವಜನಿಕರು ಹಾಗೂ ಪೊಲೀಸರು ಮೆಣದ ಬತ್ತಿ ಹಿಡಿದು ಮೆರವಣಿಗೆ ಮಾಡುವ ಮೂಲಕ ಸಂತಾಪ ಸೂಚಿಸಿದರು. ಈ ವೇಳೆ ಅಮರ್ ಹೇ,ಅಮರ್ ಹೇ ರವಿ ಉಕ್ಕುಂದ ಅಮರ್ ಹೇ ಎಂದರು.

ಈ‌ ಮೊದಲು ರವಿ ಉಕ್ಕುಂದ ಕೊಪ್ಪಳದಲ್ಲಿ ಕಾರ್ಯನಿರ್ವಹಿಸಿದ್ದರು. 6 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ರವಿ ಉಕ್ಕುಂದ, ಜನಸ್ನೇಹಿ ಅಧಿಕಾರಿಯಾಗಿ ಹೆಸರು ಮಾಡಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada