ಆಳಂದ: ಕಾಲೇಜಿನಲ್ಲಿ ಏರ್ ಗನ್ ತೋರಿಸಿ ಸಿನಿಮಾ ಶೈಲಿಯಲ್ಲಿ ಬೆದರಿಕೆ ಹಾಕಿದ ಪುಂಡ ಯುವಕರು, ಅರೆಸ್ಟ್

ಕಾಲೇಜು ಕೋಣೆಗೆ ನುಗ್ಗಿ ಏರ್ ಗನ್ ತೋರಿಸಿ ಗುಂಡಾಗಿರಿ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಳಂದ ಪಟ್ಟಣದಲ್ಲಿ ಕೆಲ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದರು. ಗಲಾಟೆ ಮಾಡಿದವರು ಡಾ.ರಾಮ್ ಮನೋಹರ ಲೋಹಿಯಾ ಕಾಲೇಜು ವಿದ್ಯಾರ್ಥಿಗಳು ಅಂತಾ ತಿಳಿದು ಕಾಲೇಜಿಗೆ ಬಂದ ಪುಂಡರು ಈ ಅವಾಂತರ ಮಾಡಿದ್ದಾರೆ.

ಆಳಂದ: ಕಾಲೇಜಿನಲ್ಲಿ ಏರ್ ಗನ್ ತೋರಿಸಿ ಸಿನಿಮಾ ಶೈಲಿಯಲ್ಲಿ ಬೆದರಿಕೆ ಹಾಕಿದ ಪುಂಡ ಯುವಕರು, ಅರೆಸ್ಟ್
ಆಳಂದ: ಕಾಲೇಜಿನಲ್ಲಿ ಏರ್ ಗನ್ ತೋರಿಸಿ ಸಿನಿಮಾ ಶೈಲಿಯಲ್ಲಿ ಬೆದರಿಕೆ ಹಾಕಿದ ಪುಂಡ ಯುವಕರು, ಅರೆಸ್ಟ್
Updated By: ಸಾಧು ಶ್ರೀನಾಥ್​

Updated on: Oct 29, 2021 | 10:52 AM

ಕಲಬುರಗಿ: ಅಮೆರಿಕ ಸೇರಿದಂತೆ ಇತರೆ ಕೆಲ ಮುಂದುವರಿದ ದೇಶಗಳಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅಥವಾ ಹೊರಗಿನ ದುಷ್ಕರ್ಮಿಗಳು ಕಾಲೇಜು ಕ್ಯಾಂಪಸ್​​ಗಳಿಗೆ ನುಗ್ಗಿ ಅಟ್ಟಹಾಸ ಮೆರೆಯುತ್ತಾ, ಯದ್ವಾತದ್ವಾ ಗುಂಡಿನ ಮಳೆಗೆರೆದು ಮಾರಣಹೋಮ ನಡೆಸುವುದು ಆಗಾಗ ಕೇಳುತ್ತಿರುತ್ತೇವೆ. ಆದರೆ ಇಲ್ಲೇ ನಮ್ಮ ಮಧ್ಯೆಯೇ ಇಂತಹ ಘಟನೆ ನಡೆಯಿತೆಂದರೆ ಜನ ಬೆಚ್ಚಿಬೀಳುವುದರ ಜೊತೆಗೆ ಆಶ್ಚರ್ಯಚಕಿತರೂ ಆಗಬೇಕಾದೀತು. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಕಾಲೇಜಿನಲ್ಲೂ ಇದೇ ಮಾದರಿಯ ಘಟನೆ ನಡೆದಿದೆ. ಇಲ್ಲಿನ ಡಾ. ರಾಮಮನೋಹರ ಲೋಹಿಯಾ ಕಾಲೇಜಿನಲ್ಲಿ ಏರ್ ಗನ್ ತೋರಿಸಿ ಸಿನಿಮಾ ಶೈಲಿಯಲ್ಲಿ ಬೆದರಿಕೆ ಹಾಕಲಾಗಿದೆ.

ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಕೋಣೆಗೆ ನುಗ್ಗಿ, ಏರ್​​ ಗನ್ ತೋರಿಸಿ ಭೀತಿ ಹುಟ್ಟಿಸಿದ್ದ ಮೂವರನ್ನು ಬಂಧಿಸಲಾಗಿದೆ. ಆಳಂದ ಪಟ್ಟಣದ ಅಮೀರ್ ಸೊಹೇಲ್, ಬಶೀರ್​ ಅಹ್ಮದ್ ಮತ್ತು ಅಮೇನ್ ಪಟೇಲ್ ಎಂಬ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜು ಕೋಣೆಗೆ ನುಗ್ಗಿ ಏರ್ ಗನ್ ತೋರಿಸಿ ಗುಂಡಾಗಿರಿ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಳಂದ ಪಟ್ಟಣದಲ್ಲಿ ಕೆಲ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿದ್ದರು. ಗಲಾಟೆ ಮಾಡಿದವರು ಡಾ.ರಾಮ್ ಮನೋಹರ ಲೋಹಿಯಾ ಕಾಲೇಜು ವಿದ್ಯಾರ್ಥಿಗಳು ಅಂತಾ ತಿಳಿದು ಕಾಲೇಜಿಗೆ ಬಂದ ಪುಂಡರು ಈ ಅವಾಂತರ ಮಾಡಿದ್ದಾರೆ. ಕಳೆದ ಬುಧವಾರ ಈ ಘಟನೆ ನಡೆದಿದೆ.

(three miscreants flashes airgun in Aland college arrested by kalaburagi aland police)