ಮಳೆ ನೀರು ತುಂಬಿದ್ದ ಗುಂಡಿಗೆ ಬಿದ್ದು ಕಲಬುರಗಿಯಲ್ಲಿ ಇಬ್ಬರು ಬಾಲಕರ ಸಾವು

| Updated By: ವಿವೇಕ ಬಿರಾದಾರ

Updated on: Jul 23, 2023 | 2:05 PM

ಮಳೆ ನೀರು ತುಂಬಿದ್ದ ಗುಂಡಿಯಲ್ಲಿ‌ ಬಿದ್ದು ಬಾಲಕರಿಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ‌ನಗರದ ದುಬೈ ಕಾಲೋನಿಯಲ್ಲಿ ನಡೆದಿದೆ.

ಮಳೆ ನೀರು ತುಂಬಿದ್ದ ಗುಂಡಿಗೆ ಬಿದ್ದು ಕಲಬುರಗಿಯಲ್ಲಿ ಇಬ್ಬರು ಬಾಲಕರ ಸಾವು
ನಿರ್ಮಾಣ ಹಂತದಲ್ಲಿರುವ ಓವರ್‌ಹೆಡ್ ನೀರಿನ ಟ್ಯಾಂಕ್
Follow us on

ಕಲಬುರಗಿ: ಮಳೆ (Rain) ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕರಿಬ್ಬರು (Children) ಸಾವನ್ನಪ್ಪಿರುವ ಘಟನೆ ‌ನಗರದ ದುಬೈ ಕಾಲೋನಿಯಲ್ಲಿ ನಡೆದಿದೆ. ಅಭಿ (11), ಅಜಯ್ (12) ಮೃತ ಬಾಲಕರು. ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ 15 ತಳಪಾಯ ತೋಡಲಾಗಿತ್ತು. ನಿರಂತರ ಮಳೆಯಿಂದ ತಳಪಾಯ ನೀರಿನಿಂದ ಸಂಪೂರ್ಣ ಭರ್ತಿಯಾಗಿತ್ತು. ಇದರಲ್ಲಿ ಬಿದ್ದು ಬಾಲಕರು ಮೃತಪಟ್ಟಿದ್ದಾರೆ.  ಅಭಿಷೇಕ್ ಮತ್ತು ಅಜೇಯ್ ಒಂದೇ ಬಡಾವಣೆಯ ನಿವಾಸಿಗಳಾಗಿದ್ದು, ಸ್ನೇಹಿತರಾಗಿದ್ದರು. ನಗರದ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಮಕ್ಕಳು, ನಿನ್ನೆ (ಶನಿವಾರ) ಮಧ್ಯಾಹ್ನವೇ ಮನೆಗೆ ಬಂದಿದ್ದರು. ಕಲಬುರಗಿ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಬಾರಿ ಮಳೆ ಸುರಿದಿದ್ದರಿಂದ ಜನರು ಮನೆಯಿಂದ ಹೊರಬರಲು ಕೂಡ ಆಗಿರಲಿಲ್ಲ. ಆದರೆ ನಿನ್ನೆ (ಜು.22) ವರುಣದೇವ ಬಿಡುವ ನೀಡಿದ್ದರಿಂದ ಮಕ್ಕಳು ಆಟವಾಡಲು ಮನೆಯಿಂದ ಹೊರಹೋಗಿದ್ದರಂತೆ.

ಇಬ್ಬರು ಬಾಲಕರ ಹೆತ್ತವರು ಕೂಲಿ ಕೆಲಸ ಮಾಡಿಕೊಂಡ ಜೀವನ ನಡೆಸುತ್ತಿದ್ದಾರೆ. ಸಂಜೆ ಮನೆಗೆ ಹೆತ್ತವರು ಬಂದರು ಕೂಡ ಮಕ್ಕಳು ಬಾರದೆ ಇದ್ದಾಗ, ಇಬ್ಬರು ಬಾಲಕರ ಹೆತ್ತವರು ಹುಡುಕಾಟ ಆರಂಭಿಸಿದ್ದಾರೆ. ಆದರೆ ನಿನ್ನೆ ಮಧ್ಯಾಹ್ನ ಮನೆಯಿಂದ ಹೋಗಿದ್ದ ಬಾಲಕರು ಇಂದು ಮುಂಜಾನೆ ನೀರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನಿರ್ಲಕ್ಷ್ಯಕ್ಕೆ ಬಲಿಯಾದರಾ ಮಕ್ಕಳು?

ಇನ್ನು ಇಬ್ಬರ ಬಾಲಕರ ಸಾವಿಗೆ ಕಂಪನಿಯ ನಿರ್ಲಕ್ಷ್ಯವೇ ಕಾರಣ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಕಲಬುರಗಿ ನಗರದಲ್ಲಿ ನೀರಿನ ಸರಬರಾಜು ಗುತ್ತಿಗೆಯನ್ನು ಎಲ್ ಆಂಡ್ ಟಿ ಕಂಪನಿಗೆ ನೀಡಲಾಗಿದೆ. ನೀರು ಸರಬರಾಜು ಗುತ್ತಿಗೆ ಪಡೆದ ಕಂಪನಿ, ದುಬೈ ಕಾಲೋನಿಯಲ್ಲಿ ಓವರ್ ಹೆಡ್ ವಾಟರ್ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ಕಳೆದ ಒಂದು ವರ್ಷದಿಂದ ಮಾಡುತ್ತಿದ್ದು, ಅದಕ್ಕಾಗಿ ಗುಂಡಿಯನ್ನು ನಿರ್ಮಾಣ ಮಾಡಿದೆ. ಇದೇ ಗುಂಡಿಯಲ್ಲಿ ಮಳೆಯ ನೀರು ಸಂಗ್ರಹವಾಗಿದೆ. ಆದರೆ ಗುಂಡಿಯ ಸುತ್ತಮುತ್ತ ಯಾವುದೇ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿಲ್ಲ. ಬೇಲಿಯನ್ನು ಕೂಡ ಹಾಕಿಲ್ಲ. ಇದರಿಂದ ನೀರಲ್ಲಿ ಆಟವಾಡಲು ಹೋಗಿದ್ದ ಮಕ್ಕಳು ಅದರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಅಂತಿದ್ದಾರೆ ಮೃತ ಮಕ್ಕಳ ಹೆತ್ತವರು ಮತ್ತು ಸ್ಥಳೀಯರು.

ಕಲಬುರಗಿ ನಗರ ಮತ್ತು ಜಿಲ್ಲೆಯಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಕ್ಕಳು ಬಲಿಯಾಗುತ್ತಿವೆ. ತಪ್ಪಿತಸ್ಥರ ವಿರುದ್ಧ ಕಠೀಣ ಕ್ರಮ ಕೈಗೊಳ್ಳಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಅಂತ ದುಬೈ ಕಾಲೋನಿ ನಿವಾಸಿ ಸುನಿಲ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಪ್ರವಹಿಸಿ ಕರ್ತವ್ಯನಿರತ ಚೆಸ್ಕಾಂ ಸಿಬ್ಬಂದಿ ಸಾವು

ಇನ್ನು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ,ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ. ಕಂಪನಿಗೆ ಈ ಬಗ್ಗೆ ನೋಟಿಸ್ ನೀಡುತ್ತೇವೆ  ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್ ಭರವಸೆ ನೀಡಿದ್ದಾರೆ.

ಬಾವಿಗೆ ಹಾರಿ ತಾಯಿ, ಮಗಳು ಸಾವು ಪ್ರಕರಣ: 3 ದಿನ ಬಳಿಕ ಬಾಲಕಿ ಶವ ಪತ್ತೆ

ಚಿಕ್ಕಬಳ್ಳಾಫುರ: ತಾಲ್ಲೂಕಿನ ಜಡೇನಹಳ್ಳಿ ಬಳಿಯ ತೋಟದ ಬಾವಿಯಲ್ಲಿ ಬಿದ್ದು ತಾಯಿ, ಮಗು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನ ಕಳೆದ ನಂತರ ಮೃತ ಬಾಲಕಿ ಶ್ರೀನಿಧಿ ಶವ ಪತ್ತೆಯಾಗಿದೆ. ಬಾಲಕಿ ಶ್ರೀನಿಧಿ ಶವಕ್ಕಾಗಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ 60 ಅಡಿ ಆಳದ ಬಾವಿಯ ನೀರನ್ನು ಎರಡು ಪಂಪಸೆಟ್​ಗಳ ಮೂಲಕ ಹೊರಗೆ ಹಾಕಿದ್ದಾರೆ.

ಕೌಟುಂಬಿಕ ಕಲಹ ಹಿನ್ನಲೆ ತಾಯಿ ತನ್ನ ಇಬ್ಬರು ಮಕ್ಕಳ ಸಮೇತ ಬಾವಿಗೆ ಹಾರಿದ್ದಳು. ಒಂದು ಮಗು ಗಂಗೋತ್ರಿ ಈಜಿಕೊಂಡು ಮೇಲೆ ಬಂದಿತ್ತು. ತಾಯಿ ನಾಗಮ್ಮ, ಬಾಲಕಿ ಶ್ರೀನಿಧಿ ಮೃತ ದುರ್ದೈವಿಗಳು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:22 am, Sun, 23 July 23