Bengaluru News: ಮಹಿಳೆಯಿಂದ ಪ್ರಿಯಕರನಿಗೆ ಚಾಕು ಇರಿತ; ಅಸ್ಸಾಂಗೆ ಪರಾರಿಯಾಗಲು ಯತ್ನ

ಮಹಿಳೆಯೋರ್ವಳು ಪ್ರಿಯಕರನಿಗೆ ಚಾಕು ಇರಿದ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ. ಜೋಗಿಶ್ ಎಂಬುವವನು ಚಾಕು ಇರಿತಕ್ಕೊಳಗಾದ ವ್ಯಕ್ತಿ. ಇನ್ನು ಚಾಕು ಇರಿಯಲು ಕಾರಣ ಇಲ್ಲಿದೆ ನೋಡಿ.

Bengaluru News: ಮಹಿಳೆಯಿಂದ ಪ್ರಿಯಕರನಿಗೆ ಚಾಕು ಇರಿತ; ಅಸ್ಸಾಂಗೆ ಪರಾರಿಯಾಗಲು ಯತ್ನ
ಆರೋಪಿ ಮಹಿಳೆ
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 23, 2023 | 8:19 AM

ಬೆಂಗಳೂರು: ಮಹಿಳೆಯೋರ್ವಳು ಪ್ರಿಯಕರನಿಗೆ ಚಾಕು ಇರಿದ ಘಟನೆ ಬೆಂಗಳೂರಿನ(Bengaluru) ವಿವೇಕನಗರದಲ್ಲಿ ನಡೆದಿದೆ. ಜೋಗಿಶ್ ಚಾಕು ಇರಿತಕ್ಕೊಳಗಾದ ವ್ಯಕ್ತಿ. ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ಜೋಗಿಶ್, ಡೇ ಕೇರ್​ನಲ್ಲಿ ಕೆಲಸ ಮಾಡುತಿದ್ದ ಜುಂಟಿದಾಸ್ ಎಂಬ ಮಹಿಳೆ ಜೊತೆ ಎರಡು ವರ್ಷದಿಂದ ಪ್ರೀತಿಯಲ್ಲಿದ್ದನು. ಜುಂಟಿ ದಾಸ್ ಕೂಡ ಈ ಹಿಂದೆ ಬೇರೊಂದು ಮದುವೆಯಾಗಿ, ಗಂಡನಿಗೆ ವಿಚ್ಛೇಧನ ನೀಡಿ, ತನ್ನ 18 ವರ್ಷದ ಮಗಳೊಂದಿಗೆ ಜಿಗಿಣಿಯಲ್ಲಿ ವಾಸ ಮಾಡುತ್ತಿದ್ದಳು. ಈ ಮಧ್ಯೆ ಜೋಗಿಶ್​ ಜೊತೆ ಪ್ರೀತಿಯಲ್ಲಿದ್ದಾಗ ಹಲವು ಕಡೆ ಸುತ್ತಾಡಿದ್ದ ಇವರಿಬ್ಬರು, ಮಹಿಳೆಯಿಂದ ಒಂದಿಷ್ಟು ಹಣ ಸಹ ಪಡೆದಿದ್ದ ಜೋಗೀಶ್.

ಇತ್ತೀಚಿಗೆ ಹೊಸ ಯುವತಿ ಜೊತೆ ಓಡಾಟ ಶುರು ಮಾಡಿದ್ದ ಜೋಗಿಶ್​

ಇಷ್ಟೇ ಆಗಿದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತಿತ್ತು. ಆದರೆ, ಜೋಗಿಶ್​ ಇತ್ತೀಚಿಗೆ ಹೊಸ ಯುವತಿ ಜೊತೆ ಓಡಾಟ ಶುರು ಮಾಡಿದ್ದ. ಈ ವಿಚಾರ ತಿಳಿದ ಆರೋಪಿ ಮಹಿಳೆ ವಿವೇಕನಗರದ ಜೋಗಿಶ್ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಈ ವೇಳೆ ಜಗಳ ಅತಿರೇಕಕ್ಕೆ ಹೋಗಿ ಮಹಿಳೆ ಚಾಕುವಿನಿಂದ ಆತನ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾಳೆ. ಹೌದು ಅಸ್ಸಾಂಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದ ಆರೋಪಿ ಮಹಿಳೆ, ವಿಲ್ಸನ್ ಗಾರ್ಡ್​ನಲ್ಲಿರುವ ಆಕೆಯ ಸಂಬಂಧಿಕರ ಮನೆಯಲ್ಲಿದ್ದಳು. ಈ ವೇಳೆ ಪೊಲೀಸರು ಆಕೆಯನ್ನ ಬಂಧಿಸಿದ್ದಾರೆ. ಸದ್ಯ ಗಾಯಾಳು ಜೋಗೀಶ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಚಾಕು ಇರಿದ ಅಪ್ರಾಪ್ತ ಬಾಲಕಿ

ಯಾರ್ಪಿಡೋ ಬೈಕ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ; ಬೈಕ್ ಸವಾರ ಬಂಧನ

ಬೆಂಗಳೂರು: ಯಾರ್ಪಿಡೋ ಬೈಕ್ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಹಾವೇರಿ ಮೂಲದ ಗುರುವೆಂಕಟಪ್ಪನನ್ನ ಬಂಧಿಸಲಾಗಿದೆ. ಇತ ಸಂಪಂಗಿರಾಮನಗರದಲ್ಲಿ ಸ್ನೇಹಿತನೊಂದಿಗೆ ವಾಸವಿದ್ದ. ಶುಕ್ರವಾರ ರೂಂನಲ್ಲಿದ್ದಾಗ ಗೆಳೆಯನ ಬೈಕ್​ನಲ್ಲಿ ಹೊರ ಬಂದಿದ್ದ. ಈ ವೇಳೆ ಅದೇ ಬೈಕ್​ನಲ್ಲಿ ರ್ಯಾಪಿಡೊ ಮುಖಾಂತರ ಯುವತಿ ಪಿಕ್ ಮಾಡಿದ್ದಾನೆ. ಮಾರ್ಗ ಮಧ್ಯೆ ಯುವತಿ ಜೊತೆ ಆತ ಅಸಭ್ಯ ವರ್ತನೆ ಆರೋಪ ಮಾಡಿದ್ದಳು. ಈ ಹಿನ್ನಲೆ ನಿಗದಿತ ಸ್ಥಳದಲ್ಲಿ ಆಕೆಯನ್ನ ತಲುಪಿಸದೇ ಅರ್ಧದಲ್ಲೇ ಬಿಟ್ಟು ಹೋದ ಆರೋಪ ಮಾಡಿದ್ದ ಯುವತಿ. ಈ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಳು. ಈ ಕುರತು ಪ್ರಕರಣ ದಾಖಲಿಸಿಕೊಂಡು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:06 am, Sun, 23 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ