ಕಲಬುರಗಿಗೆ 2ನೇ ರಿಂಗ್ ರೋಡ್​ ಬೇಕೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿ ಬೇಡಿಕೆ ಇಟ್ಟ ಉಮೇಶ್ ಜಾಧವ್

| Updated By: ಆಯೇಷಾ ಬಾನು

Updated on: Jul 27, 2023 | 8:01 AM

ಕಲಬುರಗಿಗೆ ಎರಡನೇ ರಿಂಗ್ ರಸ್ತೆ ಬೇಕೆಂದು ಕೇಂದ್ರ ಅನುಮೋದನೆ ನೀಡುವಂತೆ ಸಂಸದ ಉಮೇಶ್ ಜಾಧವ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಒತ್ತಾಯಿಸಿದರು.

ಕಲಬುರಗಿಗೆ 2ನೇ ರಿಂಗ್ ರೋಡ್​ ಬೇಕೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿ ಬೇಡಿಕೆ ಇಟ್ಟ ಉಮೇಶ್ ಜಾಧವ್
ಕರ್ನಾಟಕದ ವಿವಿಧ ಜಿಲ್ಲೆಗಳ ಹೆದ್ದಾರಿ ಹಾಗೂ ಬೈಪಾಸ್ ಕಾಮಗಾರಿ ಪರಿಶೀಲನೆ ಸಭೆ
Follow us on

ಕಲಬುರಗಿ, ಜುಲೈ 27: ನಗರಕ್ಕೆ ಎರಡನೇ ರಿಂಗ್ ರೋಡ್ (ಬೈಪಾಸ್) ಮಂಜೂರಾತಿಗೆ ಆಗ್ರಹಿಸಿ ಸಂಸದ ಉಮೇಶ ಜಾಧವ್(Umesh Jadhav) ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಅವರನ್ನು ಬುಧವಾರ ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ದೆಹಲಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಹೆದ್ದಾರಿ ಹಾಗೂ ಬೈಪಾಸ್ ಕಾಮಗಾರಿ ಪರಿಶೀಲನೆ ಸಭೆಯಲ್ಲಿ ಅನೇಕ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಉಮೇಶ್ ಜಾಧವ್ ಅವರು ಈ ಬೇಡಿಕೆ ಇಟ್ಟಿದ್ದಾರೆ.

ಎರಡನೇ ರಿಂಗ್ ರೋಡ್​ನ ಅಗತ್ಯವನ್ನು ವಿವರಿಸಿದ ಡಾ.ಜಾಧವ್, ಪ್ರಸ್ತುತ ರಿಂಗ್ ರಸ್ತೆಯ ಉಪಯುಕ್ತತೆಯನ್ನು ಮೀರಿ ನಗರವು ಬೆಳೆದಿರುವುದರಿಂದ ಇದು ಬಹುಕಾಲದ ಬೇಡಿಕೆಯಾಗಿದೆ. NH-150E, NH-50 ಮತ್ತು NH-150 ನಲ್ಲಿ ಭಾರೀ ಸಂಚಾರ ದಟ್ಟಣೆಯನ್ನು ತಪ್ಪಿಸಲು, ವಾಹನಗಳ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕಾಗಿ ಹೊಸ ಬೈಪಾಸ್ ಅಗತ್ಯವಿದೆ. ಕಳೆದ ಮೂರು ವರ್ಷಗಳಿಂದ ಈ ವಿಚಾರದ ಬಗ್ಗೆ ಮಾಹಿತಿ ಕಲೆ ಹಾಕಿರುವ ಡಾ.ಜಾಧವ್, ಈ ಹಿಂದೆ ಹಲವು ಬಾರಿ ಎರಡನೇ ವರ್ತುಲ ರಸ್ತೆ ಯೋಜನೆಯ ಪ್ರಸ್ತಾವನೆಯನ್ನು ಗಡ್ಕರಿ ಅವರ ಮುಂದಿಟ್ಟಿದ್ದರು. ಜೊತೆಗೆ ಸದನದ ಪ್ರಶ್ನೋತ್ತರ ವೇಳೆ ಮತ್ತು ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದನ್ನು ನೆನಪಿಸಿಕೊಂಡರು.

ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 2 ದಿನ ಧಾರಾಕಾರ ಮಳೆ, ರೆಡ್ ಅಲರ್ಟ್​ ಘೋಷಣೆ

ಹುಮ್ನಾಬಾದ್ – ಕಲಬುರಗಿ – ಬಿಜಾಪುರ್ ಮಧ್ಯೆ ವಾಹನಗಳ ಸಂಚಾರ ಅತಿ ದಟ್ಟಣೆಯಿಂದ ದಿನಾಲು ಈ ಮಾರ್ಗದಲ್ಲಿ ಅಪಘಾತಗಳು ಹೆಚ್ಚುಸುತ್ತಿರುವುದರಿಂದ ಇದನ್ನು 4 ಪಥಕ್ಕೆ ಮಾರ್ಪಡಿಸವ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗಿದೆ. ಬಾಪೂರ್ ಕ್ರಾಸನಿಂದ ಚಿಂಚೋಳಿ ಮಾರ್ಗವಾಗಿ ಮೆಹಬೂಬ್ ನಗರ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ NH 167N ಕೆಲಸ ಶೀಘ್ರ ಪ್ರಾರಂಭ ಮಾಡಲು ಕೇಂದ್ರ ಸಚಿವರ ಬಳಿ ಮನವಿ ಮಾಡಲಾಗಿದೆ. ಮತ್ತು ಬಹು ದಿನಗಳಿಂದ ನನಗುದ್ದಿಗೆ ಬಿದ್ದಿರುವ ವಾಡಿ ಜಂಕ್ಷನ್ ಹತ್ತಿರವಿರುವ ರೈಲ್ವೆ ಮೇಲ್ ಸೇತುವೆ ಕಾಮಗಾರಿಯು ಕೂಡ ಪ್ರಾರಂಭಿಸಲು ಕೋರಲಾಯಿತು. ನನ್ನ ಎಲ್ಲಾ ಮನವಿಗೆ ಸ್ಪಂದಿಸಿದ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಈ ಎಲ್ಲಾ ಕಾಮಗಾರಿಗಳು ಅತೀ ಶೀಘ್ರದಲ್ಲಿ ಪ್ರಾರಂಭಿಸಲು ಸೂಚನೆಯನ್ನು ನೀಡಿದ್ದಾರೆ ಎಂದು ಸಭೆಯಲ್ಲಿ ನಡೆದ ಚರ್ಚೆಗಳ ಬಗ್ಗೆ ಸಂಸದ ಉಮೇಶ ಜಾಧವ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ದೆಹಲಿಯ ನಿತಿನ್ ಗಡ್ಕರಿ ನಿವಾಸದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಹೆದ್ದಾರಿ ಹಾಗೂ ಬೈಪಾಸ್ ಕಾಮಗಾರಿ ಪರಿಶೀಲನೆ ಸಭೆಯಲ್ಲಿ ಕರ್ನಾಟಕ ರಾಜ್ಯದ ಲೋಕೋಪಯೋಗಿ ಸಚಿವರಾದ ಸತಿಶ್ ಜಾರಕಿಹೊಳಿ ಹಾಗೂ ಕರ್ನಾಟಕದ ಸಂಸದರೊಂದಿಗೆ ಜಿಲ್ಲೆಯ ಅನೇಕ ಕಾಮಗಾರಿಗಳ ಬಗ್ಗೆ ಚರ್ಚೆ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ