ಮಾರ್ಚ್ 12 ರಿಂದ ಕಲಬುರಗಿ – ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ

ಬೆಂಗಳೂರು- ಕಲಬುರಗಿ ಮಧ್ಯೆ ಪ್ರತ್ಯೇಕ ರೈಲಿಗಾಗಿ ಬೇಡಿಕೆ ಹಾಗೂ ವಂದೇ ಭಾರತ್ ರೈಲು ಗಾಡಿಗಾಗಿ ಸಂಸತ್ತಿನಲ್ಲಿ ಹಲವು ಬಾರಿ ಗಮನ ಸೆಳೆಯಲಾಗಿತ್ತು. ಜನತೆಯ ಬೇಡಿಕೆಗೆ ಸ್ಪಂದಿಸಿ ಮೊನ್ನೆಯಷ್ಟೇ ಕಲಬುರಗಿ - ಬೆಂಗಳೂರು (ಬೈಯಪ್ಪನಹಳ್ಳಿ) ವಿಶೇಷ ರೈಲು ಘೋಷಣೆ ಮಾಡಲಾಗಿದ್ದು, ಮಾರ್ಚ್ 9, ಶನಿವಾರದಿಂದ ಸಂಚಾರ ಪ್ರಾರಂಭವಾಗಲಿದೆ. ಜೊತೆಗೆ ಮಾರ್ಚ್ 12 ರಿಂದ ಕಲಬುರಗಿ - ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚರಿಸಲಿದೆ.

ಮಾರ್ಚ್ 12 ರಿಂದ ಕಲಬುರಗಿ - ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ
ಮಾರ್ಚ್ 12 ರಿಂದ ಕಲಬುರಗಿ - ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 07, 2024 | 7:31 PM

ಕಲಬುರಗಿ, ಮಾ.07: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಲಬುರಗಿ(Kalaburagi) ಜನತೆಗೆ ನೂತನ ವಂದೇ ಭಾರತ್ ರೈಲು(Vande Bharat Train) ಘೋಷಣೆ ಮಾಡಿದ್ದು, ಮಾರ್ಚ್ 12 ರಿಂದ ಸಂಚಾರ ಪ್ರಾರಂಭವಾಗಲಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಿ. ಜಾಧವ್ ಮಾಹಿತಿ ನೀಡಿದ್ದಾರೆ. ಕೇಂದ್ರ ರೈಲ್ವೆ ಇಲಾಖೆಯಿಂದ ಇಂದು(ಮಾ.07) ಈ ಬಗ್ಗೆ ಮಾಹಿತಿ ಕೈ ಸೇರಿದ್ದು, ಮಾರ್ಚ್ 12ರಂದು ಪ್ರಧಾನ ಮಂತ್ರಿಗಳು ವಂದೇ ಭಾರತ್ ರೈಲುಗಾಡಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಬೆಂಗಳೂರು- ಕಲಬುರಗಿ ಮಧ್ಯೆ ಪ್ರತ್ಯೇಕ ರೈಲುಗಾಡಿ ಬೇಡಿಕೆ ಹಾಗೂ ವಂದೇ ಭಾರತ್ ರೈಲು ಗಾಡಿಗಾಗಿ ಸಂಸತ್ತಿನಲ್ಲಿ ಹಲವು ಬಾರಿ ಗಮನ ಸೆಳೆಯಲಾಗಿತ್ತು. ಜನತೆಯ ಬೇಡಿಕೆಗೆ ಸ್ಪಂದಿಸಿ ಮೊನ್ನೆಯಷ್ಟೇ ಕಲಬುರಗಿ – ಬೆಂಗಳೂರು (ಬೈಯಪ್ಪನಹಳ್ಳಿ) ವಿಶೇಷ ರೈಲು ಘೋಷಣೆ ಮಾಡಿ ನಾಡಿದ್ದು (ಮಾರ್ಚ್ 9 ರಂದು ಶನಿವಾರ) ಸಂಚಾರ ಪ್ರಾರಂಭವಾಗಲಿದೆ. ಹಲವು ಭಾರಿ ಮನವಿ ಸಲ್ಲಿಸಿ ಒತ್ತಾಯಿಸಿದ ಫಲವಾಗಿ ಪ್ರಧಾನ ಮಂತ್ರಿಯವರು ಕಲಬುರಗಿ ಜನತೆಗೆ ವಿಶೇಷವಾಗಿ ವಂದೇ ಭಾರತ್ ರೈಲು ಘೋಷಣೆ ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ.

ಇದನ್ನೂ ಓದಿ:Vande Bharat Train: 2 ವಂದೇ ಭಾರತ್ ರೈಲುಗಳ ಮೇಲೆ 3 ಕಡೆ ಕಲ್ಲು ತೂರಾಟ​

ಇದು ನನ್ನ ಜೀವನದ ಧನ್ಯತೆಯ ಕ್ಷಣ- ಉಮೇಶ್ ಜಿ. ಜಾಧವ್

ಇದು ನನ್ನ ಜೀವನದ ಧನ್ಯತೆಯ ಕ್ಷಣವಾಗಿದೆ. ಕೇಳಿದ್ದು ಒಂದು ರೈಲು ಪ್ರಧಾನಿಯವರು ಕೊಟ್ಟದ್ದು ಎರಡು ರೈಲು. ಇದು ಕಲಬುರಗಿ ಜನತೆಯ ಮೇಲೆ ಪ್ರಧಾನಿಯವರಿಗೆ ಇರುವ ಪ್ರೀತಿಗೆ ಸಾಕ್ಷಿಯಾಗಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಜನತೆಗೆ ನೀಡಿದ ವಾಗ್ದಾನವನ್ನು ಈಡೇರಿಸಿದ್ದು ಈ ಭಾಗದ ಅಭಿವೃದ್ಧಿಯಲ್ಲಿಯೇ  ಮೈಲಿಗಲ್ಲಾಗಲಿದೆ ಎಂದು ಜಾಧವ್ ಹೇಳಿದರು. ಇಂತಹ ಮಹಾನ್ ಕೊಡುಗೆಯನ್ನು ನೀಡಿದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಕಲಬುರಗಿ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಆಸೆ ಕೈಗೂಡಿದೆ. ಜನರು ಪ್ರಧಾನಿ ಅವರ ಕೆಲಸವನ್ನು ಮೆಚ್ಚಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ