ತಾಳಿ ಮಾರಿ ಪತಿಗೆ ಚಿಕಿತ್ಸೆ, ಕುಟುಂಬ ನಡೆಸೋಕೆ ಪರದಾಡ್ತಿದ್ದಾಳೆ ಈ ಮಹಾತಾಯಿ

ಕಲಬುರಗಿ: ಹೆಮ್ಮಾರಿ ಕೊರೊನಾ ಅನೇಕರ ಬದುಕಿನ ಮೇಲೆ ಬರೆ ಎಳೆದಿದೆ. ಕ್ರೂರಿ ಅಟ್ಟಹಾಸದಿಂದ ಅನೇಕರ ಜೀವನ ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅದರಲ್ಲೂ ಆಕೆ ತನ್ನ ತಾಳಿಯನ್ನು ಮಾರಿ, ಪತಿಗೆ ಚಿಕಿತ್ಸೆ ಕೊಡಿಸುತ್ತಿರೋದು ಕಲ್ಲು ಹೃದಯವನ್ನ ಕರಿಗಿಸುವಂತಿದೆ. ಕೊರೊನಾ ಕೊಡ್ತಾ ಇರೋ ಪೆಟ್ಟಿಗೆ ಕರುನಾಡಿಗೆ ಕರುನಾಡೇ ಕಂಗಾಲಾಗಿ ಹೋಗಿದೆ. ಒಂದ್ಕಡೆ ಕೊರೊನಾದ ಭಯ ಹೆಚ್ಚಾಗಿದ್ದರೆ, ಮತ್ತೊಂದಡೆ ಕೆಲಸವಿಲ್ಲದೆ ಅನೇಕ ಕುಟುಂಬಗಳು ಅಕ್ಷರಶ ನಲುಗಿ ಹೋಗಿವೆ. ದುಡಿದ್ರೆ ಮಾತ್ರ ಹೊಟ್ಟೆ ತುಂಬೋದು. ಆದ್ರೆ ಇದೀಗ ಮಾಡಲು ಕೆಲಸವಿಲ್ಲಾ. […]

ತಾಳಿ ಮಾರಿ ಪತಿಗೆ ಚಿಕಿತ್ಸೆ, ಕುಟುಂಬ ನಡೆಸೋಕೆ ಪರದಾಡ್ತಿದ್ದಾಳೆ ಈ ಮಹಾತಾಯಿ
sadhu srinath

|

May 03, 2020 | 1:36 PM

ಕಲಬುರಗಿ: ಹೆಮ್ಮಾರಿ ಕೊರೊನಾ ಅನೇಕರ ಬದುಕಿನ ಮೇಲೆ ಬರೆ ಎಳೆದಿದೆ. ಕ್ರೂರಿ ಅಟ್ಟಹಾಸದಿಂದ ಅನೇಕರ ಜೀವನ ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಅದರಲ್ಲೂ ಆಕೆ ತನ್ನ ತಾಳಿಯನ್ನು ಮಾರಿ, ಪತಿಗೆ ಚಿಕಿತ್ಸೆ ಕೊಡಿಸುತ್ತಿರೋದು ಕಲ್ಲು ಹೃದಯವನ್ನ ಕರಿಗಿಸುವಂತಿದೆ.

ಕೊರೊನಾ ಕೊಡ್ತಾ ಇರೋ ಪೆಟ್ಟಿಗೆ ಕರುನಾಡಿಗೆ ಕರುನಾಡೇ ಕಂಗಾಲಾಗಿ ಹೋಗಿದೆ. ಒಂದ್ಕಡೆ ಕೊರೊನಾದ ಭಯ ಹೆಚ್ಚಾಗಿದ್ದರೆ, ಮತ್ತೊಂದಡೆ ಕೆಲಸವಿಲ್ಲದೆ ಅನೇಕ ಕುಟುಂಬಗಳು ಅಕ್ಷರಶ ನಲುಗಿ ಹೋಗಿವೆ. ದುಡಿದ್ರೆ ಮಾತ್ರ ಹೊಟ್ಟೆ ತುಂಬೋದು. ಆದ್ರೆ ಇದೀಗ ಮಾಡಲು ಕೆಲಸವಿಲ್ಲಾ. ಹಾಗಂತ ಹೊಟ್ಟೆ ಕೇಳ್ಬೇಕು ಅಲ್ವಾ? ಹೊಟ್ಟೆಗೆ ಏನಾದ್ರು ಬೇಕೆ ಬೇಕು. ಹೀಗಾಗಿ ಉಸಿರು ನಿಲ್ಲುವ ತನಕ ಹೊಟ್ಟೆಗಾಗಿ ಹೊರಾಡಲೇ ಬೇಕಾಗಿದೆ. ಅದರಂತೆ ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆಯಲ್ಲಿರುವ ನಾಗರಾಜ್ ಗುತ್ತೇದಾರ್ ಕುಟುಂಬ ಹೆಮ್ಮಾರಿ ಹೊಡತೆದಿಂದಾಗಿ ಕಂಗೆಟ್ಟು ಹೋಗಿದೆ, ಮುಂದೇನು ಅನ್ನೋ ಸಂಕಷ್ಟಕ್ಕೆ ಸಿಲುಕಿದೆ.

ಹಾಸಿಗೆ ಹಿಡಿದಿರುವ ನಾಗರಾಜ್ ಗುತ್ತೇದಾರ್ ಈ ಮೊದಲು ವೈನ್ ಶಾಪ್ ನಲ್ಲಿ ಕೆಲಸ ಮಾಡ್ತಾಯಿದ್ರು. ಕೆಲವು ತಿಂಗಳ ಹಿಂದೆ ನಾಗರಾಜ್​ಗೆ ಹೃದಯಾಘಾತವಾಗಿದೆ. ಹೃದಯಾಘಾತದ ಜೊತೆಗೆ ಬಿಪಿ. ಶುಗರ್ ಕೂಡಾ ಇದೆ. ಹೀಗಾಗಿ ಬಿಪಿ ಮಾತ್ರೆ ಜೊತೆಗೆ ಶುಗರ್‌ಗೆ ಇನ್ಸುಲಿನ್ ಬೇಕು. ಹೃದಯಾಘಾತವಾಗಿದ್ದರಿಂದ ಅದಕ್ಕೂ ಮಾತ್ರೆಗಳು ಬೇಕು.

ಆದ್ರೆ ಇದೀಗ ಮಾತ್ರೆಯನ್ನು ಕೂಡಾ ಖರೀದಿ ಮಾಡಲು ಆಗದ ಸ್ಥಿತಿಗೆ ನಾಗರಾಜ್‌ ಮತ್ತು ಈತನ ಕುಟುಂಬಸ್ಥರು ಬಂದಿದ್ದಾರೆ.  ನಾಗರಾಜ್‌ಗೆ ಮೂವರು ಮಕ್ಕಳಿದ್ದಾರೆ. ಇವರೆಲ್ಲರು ಕೂಡಾ ಇನ್ನು ಓದುತ್ತಿದ್ದಾರೆ. ಹೀಗಾಗಿ ಗಂಡನ ಮೇಲೆ ಇದ್ದ ಜಾವಾಬ್ದಾರಿ ಈಗ ನಾಗರಾಜ್‌ ಹೆಂಡತಿ ಮೇಲೆ ಬಿದ್ದಿದೆ. ಗಂಡನಿಗೆ ಮಾತ್ರೆ, ಮಕ್ಕಳ ಓದು, ಜೊತೆಗೆ ಮನೆಯವರ ಹೊಟ್ಟೆ ತುಂಬಿಸಲು ಒದ್ದಾಡಬೇಕಾಗಿದೆ. ಆದ್ರೆ ಲಾಕ್‌ಡೌನ್‌ನಿಂದಾಗಿ ಈಗ ಎಲ್ಲೂ ಕೂಡ ಕೆಲಸ ಸಿಗ್ತಿಲ್ಲ. ಹಣ ಇಲ್ಲ.

ಭಾರತೀಯ ಸಂಸ್ಕೃತಿಯಲ್ಲಿ ಮಾಂಗಲ್ಯಕ್ಕೆ ಹೆಚ್ಚಿನ ಪ್ರಮುಖ್ಯಕೆತೆಯಿದೆ. ಆದ್ರೆ ನಾಗರಾಜನ ಪತ್ನಿ ಶರಣಮ್ಮ, ತನ್ನ ಕೊರಳಲಿದ್ದ ಬಂಗಾರದ ಮಾಂಗಲ್ಯವನ್ನ ಮಾರಿ ಪತಿಗೆ ಇಲ್ಲಿವರಗೆ ಚಿಕಿತ್ಸೆ ಕೊಡಿಸಿದ್ದಾಳೆ. ಕೊರಳಲ್ಲಿ ಕರಿಮಣೆಯನ್ನು ಹಾಕಿಕೊಂಡು, ತನ್ನ ಪತಿಯೇ ತನ್ನ ಜೊತೆ ಇದ್ದಾನೆ. ಇನ್ನು ಬಂಗಾರವೇಕೆ ಅಂತ ಸಮಾಧಾನ ಮಾಡಿಕೊಂಡಿದ್ದಾಳೆ.

ಆದ್ರೆ ಇದೀಗ ದಿನಸಿ ವಸ್ತುಗಳು ಕೂಡಾ ಸಿಗದೇ ಕುಟುಂಬ ಕಂಗಾಲಾಗಿದೆ. ಈ ಹಿಂದೆ ಕುಟುಂಬ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಿತ್ತಂತೆ. ಆದ್ರೆ ಅಧಿಕಾರಿಗಳು ಎಪಿಎಲ್ ಕಾರ್ಡ್ ನೀಡಿದ್ದಾರೆ. ನಮಗೆ ಹಣ ಕೊಟ್ಟು ಪಡಿತರ ತಗೆದುಕೊಳ್ಳುವ ಶಕ್ತಿ ಕೂಡಾ ಇಲ್ಲಾ. ಹೀಗಾಗಿ ನಮಗೆ ಬಿಪಿಎಲ್ ಕಾರ್ಡ್ ಇದ್ದಿದ್ದರೆ, ಉಚಿತವಾಗಿ ಆಹಾರ ಧಾನ್ಯಗಳು ಸಿಗ್ತಾಯಿದ್ದವು. ಇದೀಗ ಅದು ಕೂಡಾ ಇಲ್ಲಾ. ಹೀಗಾಗಿ ನಮಗೆ ಕಣ್ಣೀರೆ ಹೊಟ್ಟೆ ತುಂಬಿಸುತ್ತಿದೆ ಅಂತ ನಾಗರಾಜ್ ಪತ್ನಿ ಶರಣಮ್ಮ ನೋವಿನಿಂದ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಕೊರೊನಾಹೊಡೆತಕ್ಕೆ ಸಿಲುಕಿದ ಕುಟುಂಬಕ್ಕೆ ಇದೀಗ ದಿಕ್ಕಿಲ್ಲದಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸಹಾಯವಿಲ್ಲದಂತಾಗಿದೆ. ಹೀಗಾಗಿ ಯಾರಾದ್ರು ನಮಗೆ ಸಹಾಯ ಮಾಡಿದ್ರೆ, ಬದುಕುತ್ತೇವೆ ಅಂತ ಕುಟುಂಬ ಹೇಳ್ತಾಯಿದೆ. ಹೀಗಾಗಿ ನೋಂದ ಈ ಕುಟುಂಬಕ್ಕೆ ಧಾನಿಗಳು ಸಹಾಯ ಮಾಡಿದ್ರೆ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬಂದಿಷ್ಟು ಸಹಾಯವಾಗುತ್ತೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada