ದೆಹಲಿ: ಕೋಲಿ, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಲೋಕಸಭೆಯಲ್ಲಿ ಸಂಸದ ಡಾ.ಉಮೇಶ್ ಜಾಧವ್ ಮನವಿ ಮಾಡಿದ್ದಾರೆ. ಕಲಬುರ್ಗಿ ಕ್ಷೇತ್ರದ ಸಂಸದರಾಗಿರುವ ಅವರು ಇಂದಿನ ಲೋಕಸಭಾ ಕಲಾಪದಲ್ಲಿ ಕೋಲಿ, ಕುರುಬ ಸಮುದಾಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಈಗಾಗಲೇ ಕೋಲಿ ಸಮುದಾಯದ ಕುಲಶಾಸ್ತ್ರ ಅಧ್ಯಯನ ಆಗಿದೆ. ಕೋಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸನ್ನೂ ಮಾಡಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈಗಾಗಲೇ ಕೋಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಬೇಡಿಕೆ ಇದ್ದು, ಕಲ್ಬುರ್ಗಿ ಕ್ಷೇತ್ರದ ಸಂಸದ ಡಾ. ಉಮೇಶ್ ಜಾಧವ್ ಲೋಕಸಭೆಯಲ್ಲಿ ಆಗ್ರಹಿಸಿರುವುದು ಮಹತ್ವ ಪಡೆದಿದೆ.
ರಾಜ್ಯದಲ್ಲಿನ ಕೋಲಿ- ಕುರುಬ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು 2014ರಲ್ಲಿ ಸಮಾಜದ ಪ್ರಮುಖರು ಆಗ್ರಹಿಸಿದ್ದರು. ಅವರ ಆಗ್ರಹಕ್ಕೆ ಮಣಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಿ- ಕುರುಬ ಸಮಯದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.ಅಲ್ಲದೇ ಈ ಶಿಫಾರಸು ಸಂಪೂರ್ಣ ಕುಲಶಾಸ್ತ್ರೀಯ ಅಧ್ಯಯನವನ್ನು ಸಹ ಒಳಗೊಂಡಿತ್ತು. ಮುಂಬರುವ ಮಾರ್ಚ್ 27ರಂದು ಈ ಎರಡು ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಕೋರಿ ಕಲಬುರ್ಗಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಕುರುಬ ಮೀಸಲಾತಿಗೂ ಆಗ್ರಹ
ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆಂದು ದೇವರಾಜ ಅರಸು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಮುಂದಿನ ದಿನಗಳಲ್ಲಿಯಾದರೂ ಸಮುದಾಯದ ಸಚಿವರು ಈ ಬಗ್ಗೆ ಗಮನಹರಿಸಿ, ಸಚಿವ ಸಂಪುಟದಲ್ಲಿ ಒತ್ತಾಯ ಮಾಡಬೇಕು. ಈಗಾಗಲೇ ಸುಮಾರು 340 ಕಿ.ಮೀ ಪಾದಯಾತ್ರೆ ಮಾಡಲಾಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಇತ್ತೀಚಿಗೆ ಆಗ್ರಹಿಸಿದ್ದರು.
ಬೆಂಗಳೂರಿನ ಬಿಐಇಸಿ ಮೈದಾನದಲ್ಲಿ ನಡೆದ ಕುರುಬರ ಬೃಹತ್ ಸಮಾವೇಶದಲ್ಲಿ ಮಾತನಾಡಿದ್ದ ಅವರು, ಎಸ್ಟಿ ಮೀಸಲಾತಿಗೆ ಒತ್ತಾಯಿಸಿ ರಾಜ್ಯದ ಮೂಲೆಮೂಲೆಗಳಿಂದ ಸಮುದಾಯದ ಜನರು ಬಂದಿದ್ದಾರೆ. ಕಾಡು ಕುರುಬ, ಜೇನು ಕುರುಬರು ಈಗಾಗಲೇ ಎಸ್ಟಿ ಪ್ರವರ್ಗದಲ್ಲಿದ್ದಾರೆ. ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆಂದು ದೇವರಾಜ ಅರಸು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಮುಂದಿನ ದಿನಗಳಲ್ಲಿಯಾದರೂ ಸಮುದಾಯದ ಸಚಿವರು ಈ ಬಗ್ಗೆ ಗಮನಹರಿಸಿ, ಸಚಿವ ಸಂಪುಟದಲ್ಲಿ ಒತ್ತಾಯ ಮಾಡಬೇಕು. ಈಗಾಗಲೇ ಸುಮಾರು 340 ಕಿ.ಮೀ ಪಾದಯಾತ್ರೆ ಮಾಡಲಾಗಿದೆ ಎಂದಿದ್ದರು.
ಇದೀಗ ಕೋಲಿ ಮತ್ತು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಕೂಗು ಡಾ.ಉಮೇಶ ಜಾಧವ್ ಮೂಲಕ ಲೋಕಸಭೆಯಲ್ಲಿ ಪ್ರತಿಧ್ವನಿಸಿದೆ.
ಇದನ್ನೂ ಓದಿ: ಬ್ರಾಹ್ಮಣರಿಂದ ಹಿಡಿದು ಕುರುಬರವರೆಗೆ ಮೀಸಲಾತಿ ಕೇಳ್ತಾರೆ, ದೊಡ್ಡ ಮೀನು ಸಣ್ಣ ಮೀನನ್ನು ನುಂಗಬಾರದು: ಸಿದ್ದರಾಮಯ್ಯ
Published On - 7:51 pm, Fri, 19 March 21