ಕರ್ನಾಟಕದ ಉಸೇನ್ ಬೋಲ್ಟ್​ಗಾಗಿ ಪೈಪೋಟಿ: ಮತ್ತೆ ಮೊದಲ ಸ್ಥಾನ ಅಲಂಕರಿಸಿದ ಶ್ರೀನಿವಾಸ್!

ಮಂಗಳೂರು: ಕಟ್ಟು ಮಸ್ತಾದ ದೇಹ.. ಮಿಂಚಿನಂಥಾ ವೇಗ.. ಶರವೇಗದ ಓಟ. ಇಂಥಾ ದಾಖಲೆಯ ರನ್ನಿಂಗ್​ನಿಂದಲೇ ಇಡೀ ದೇಶಾದ್ಯಂತ ಸದ್ದು ಮಾಡಿದ್ದು ಇದೇ ಶ್ರೀನಿವಾಸಗೌಡ. ಕರಾವಳಿಯ ಉಸೇನ್ ಬೋಲ್ಟ್ ಅಂತಲೇ ಫೇಮಸ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಕಂಬಳ ಓಟದಲ್ಲಿ ದಾಖಲೆ ಬರೆದಿದ್ದಾರೆ. ಆದ್ರೆ, ಆ ದಾಖಲೆಯನ್ನ ಕರಾವಳಿಯ ಮತ್ತೊಬ್ಬ ಓಟಗಾರ ನಿಶಾಂತ್ ಶೆಟ್ಟಿ ಮೀರಿಸಿದ್ರು ಅಂತಾ ಹೇಳಲಾಗಿತ್ತು. ಆದ್ರೀಗ ಮತ್ತೆ ಶ್ರೀನಿವಾಸಗೌಡ ಆ ದಾಖಲೆಯನ್ನೂ ಮುರಿದಿದ್ದು, ಮತ್ತೆ ಮೊದಲ […]

ಕರ್ನಾಟಕದ ಉಸೇನ್ ಬೋಲ್ಟ್​ಗಾಗಿ ಪೈಪೋಟಿ: ಮತ್ತೆ ಮೊದಲ ಸ್ಥಾನ ಅಲಂಕರಿಸಿದ ಶ್ರೀನಿವಾಸ್!

Updated on: Feb 19, 2020 | 7:47 AM

ಮಂಗಳೂರು: ಕಟ್ಟು ಮಸ್ತಾದ ದೇಹ.. ಮಿಂಚಿನಂಥಾ ವೇಗ.. ಶರವೇಗದ ಓಟ. ಇಂಥಾ ದಾಖಲೆಯ ರನ್ನಿಂಗ್​ನಿಂದಲೇ ಇಡೀ ದೇಶಾದ್ಯಂತ ಸದ್ದು ಮಾಡಿದ್ದು ಇದೇ ಶ್ರೀನಿವಾಸಗೌಡ. ಕರಾವಳಿಯ ಉಸೇನ್ ಬೋಲ್ಟ್ ಅಂತಲೇ ಫೇಮಸ್ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಕಂಬಳ ಓಟದಲ್ಲಿ ದಾಖಲೆ ಬರೆದಿದ್ದಾರೆ. ಆದ್ರೆ, ಆ ದಾಖಲೆಯನ್ನ ಕರಾವಳಿಯ ಮತ್ತೊಬ್ಬ ಓಟಗಾರ ನಿಶಾಂತ್ ಶೆಟ್ಟಿ ಮೀರಿಸಿದ್ರು ಅಂತಾ ಹೇಳಲಾಗಿತ್ತು. ಆದ್ರೀಗ ಮತ್ತೆ ಶ್ರೀನಿವಾಸಗೌಡ ಆ ದಾಖಲೆಯನ್ನೂ ಮುರಿದಿದ್ದು, ಮತ್ತೆ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಭಲೇ ಶ್ರೀನಿವಾಸ ಗೌಡ!
ಫೆಬ್ರವರಿ 2 ರಂದು ಐಕಳದಲ್ಲಿ ನಡೆದ ಕಾಂತಬಾರೆ, ಬೂದಬಾರೆ ಕಂಬಳದಲ್ಲಿ 143 ಮೀಟರ್ ಅಂತರವನ್ನು 12.62 ಸೆಕೆಂಡ್​ಗಳಲ್ಲಿ ಓಡಿದ್ರು. ನಿಶಾಂತ್ ಶೆಟ್ಟಿ 145 ಮೀಟರ್​ ಅನ್ನು 12.61 ಸೆಂಕೆಂಡ್​ಗೆ ಓಡಿ ಇವರ ರೆಕಾರ್ಡ್ ಮುರಿದಿದ್ದರು ಅಂತಾ ಹೇಳಲಾಗಿತ್ತು. ಆದ್ರೀಗ ಶ್ರೀನಿವಾಸ್ ಗೌಡ ಐಕಳದಲ್ಲಿ ಆವತ್ತೇ ನಡೆದ ಕಂಬಳದಲ್ಲಿ 143 ಮೀಟರ್ ದೂರವನ್ನು 12.46 ಸೆಕೆಂಡ್ ಅಂತರದಲ್ಲಿ ಓಡಿರೋದು ಗೊತ್ತಾಗಿದೆ.

ಅದನ್ನು 100 ಮೀಟರ್​ಗೆ ಅಳೆದರೆ 9.46 ಸೆಕೆಂಡ್​ನಲ್ಲಿ ಓಡಿದಂತಾಗಿದೆ. ಇನ್ನು ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು 9.58 ಸೆಕೆಂಡ್ ನಲ್ಲಿ ಕ್ರಮಿಸಿದ್ದ. ಸದ್ಯ ಶ್ರೀನಿವಾಸಗೌಡ, ಉಸೇನ್ ಬೋಲ್ಟ್ ಗಿಂತ 12 ಮಿಲಿ ಸೆಕೆಂಡ್ ವೇಗದಲ್ಲಿ ಮುಂದಿದ್ದಾರೆ.

ಇದಕ್ಕೂ ಮೊದಲು ಶ್ರೀನಿವಾಸಗೌಡ ದಾಖಲೆಯನ್ನ ನಿಶಾಂತ್ ಶೆಟ್ಟಿ ಮುರಿದಿದ್ರು. ಮನಸು ಮಾಡಿದ್ರೆ ಈಗಲೂ ಶ್ರೀನಿವಾಸ ಗೌಡರ ರೆಕಾರ್ಡ್​ ಮುರಿಯಬಲ್ಲರು ಅಂತಾ ಹೇಳಲಾಗ್ತಿದೆ. ಒಟ್ನಲ್ಲಿ, ಈಗಿನ ದಾಖಲೆ ಪ್ರಕಾರ ಮಿಜಾರು ಶ್ರೀನಿವಾಸಗೌಡ ಅವರೇ ನಂಬರ್ 1 ಸ್ಥಾನದಲ್ಲಿದ್ದಾರೆ. ಈ ದಾಖಲೆಯನ್ನು ಯಾರಾದ್ರೂ ಸರಿಗಟ್ತಾರಾ ಕಾದು ನೋಡ್ಬೇಕು.