ಆಸ್ಪತ್ರೆಯಿಂದ ವಾಪಸಾಗುತ್ತಿದ್ದಾಗ ಟಂಟಂ ಪಲ್ಟಿ, ಗರ್ಭಿಣಿ ಸಾವು

ಕಲಬುರಗಿ: ಗರ್ಭಿಣಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಟಂಟಂ ವಾಹನ ಪಲ್ಟಿಯಾಗಿ ಗರ್ಭಿಣಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಔರಾದ್ ಗ್ರಾಮದ ಬಳಿ ಜರುಗಿದೆ. ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿದ್ದು, ಅವಘಡದಲ್ಲಿ ಪ್ರಿಯಾಂಕಾ (25) ಮೃತಪಟ್ಟಿದ್ದಾರೆ. ಮಾಸಿಕ ಚಿಕಿತ್ಸೆಗಾಗಿ ಭೂಸಣಗಿ ಗ್ರಾಮದಿಂದ ಔರಾದ್​ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಮಹಿಳೆಯರು ಬಂದಿದ್ದರು. ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿದೆ. ಶಾಸಕರ ಪತ್ನಿ ನೆರವು ತಕ್ಷಣ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ […]

ಆಸ್ಪತ್ರೆಯಿಂದ ವಾಪಸಾಗುತ್ತಿದ್ದಾಗ ಟಂಟಂ ಪಲ್ಟಿ, ಗರ್ಭಿಣಿ ಸಾವು
Follow us
ಸಾಧು ಶ್ರೀನಾಥ್​
|

Updated on:Feb 18, 2020 | 4:54 PM

ಕಲಬುರಗಿ: ಗರ್ಭಿಣಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಟಂಟಂ ವಾಹನ ಪಲ್ಟಿಯಾಗಿ ಗರ್ಭಿಣಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಔರಾದ್ ಗ್ರಾಮದ ಬಳಿ ಜರುಗಿದೆ. ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿದ್ದು, ಅವಘಡದಲ್ಲಿ ಪ್ರಿಯಾಂಕಾ (25) ಮೃತಪಟ್ಟಿದ್ದಾರೆ.

ಮಾಸಿಕ ಚಿಕಿತ್ಸೆಗಾಗಿ ಭೂಸಣಗಿ ಗ್ರಾಮದಿಂದ ಔರಾದ್​ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಮಹಿಳೆಯರು ಬಂದಿದ್ದರು. ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ಮರಳಿ ತಮ್ಮೂರಿಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾಗಿದೆ.

ಶಾಸಕರ ಪತ್ನಿ ನೆರವು ತಕ್ಷಣ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ಅವರು ತಮ್ಮ ಕಾರ್​ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಪ್ರಿಯಾಂಕಾ ಸಾವಿಗೀಡಾಗಿದ್ದಾರೆ. ಅಪಘಾತ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 4:29 pm, Tue, 18 February 20