ವರ್ತೂರು ಕೆರೆ ಸಮೀಪ ಭಾರೀ ಬೆಂಕಿ, ಅಪಾರ್ಟ್ಮೆಂಟ್ ಜನರಲ್ಲಿ ಆತಂಕ
ಬೆಂಗಳೂರು: ಇಂದು ಮಧ್ಯಾಹ್ನ ಸುಮಾರು 1ಗಂಟೆ ವೇಳೆಯಲ್ಲಿ ನಗರದ ವರ್ತೂರು ಕೆರೆಯ ಮುಖ್ಯರಸ್ತೆಯ ಖಾಲಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವರ್ತೂರು ಮುಖ್ಯರಸ್ತೆಯ ಮಾಕೇನಹಳ್ಳಿ ಬಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ಸ್ಥಳೀಯರು ಜಾನುವಾರುಗಳನ್ನ ಸಾಕುತ್ತಿದ್ದರು. ಇದೇ ಖಾಲಿ ಜಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹುಲ್ಲಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ. ಹಾಗಾಗಿ ಯಾವುದೇ ಹಾನಿಯಾಗಿಲ್ಲ. ಇಲ್ಲ ಅಂದಿದ್ರೆ ಕೆರೆಗೆ ಸಂಪೂರ್ಣವಾಗಿ ಬೆಂಕಿ ಬೀಳ್ತಾ ಇತ್ತು. ಸದ್ಯ […]
ಬೆಂಗಳೂರು: ಇಂದು ಮಧ್ಯಾಹ್ನ ಸುಮಾರು 1ಗಂಟೆ ವೇಳೆಯಲ್ಲಿ ನಗರದ ವರ್ತೂರು ಕೆರೆಯ ಮುಖ್ಯರಸ್ತೆಯ ಖಾಲಿ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವರ್ತೂರು ಮುಖ್ಯರಸ್ತೆಯ ಮಾಕೇನಹಳ್ಳಿ ಬಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ಸ್ಥಳೀಯರು ಜಾನುವಾರುಗಳನ್ನ ಸಾಕುತ್ತಿದ್ದರು. ಇದೇ ಖಾಲಿ ಜಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಹುಲ್ಲಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ. ಹಾಗಾಗಿ ಯಾವುದೇ ಹಾನಿಯಾಗಿಲ್ಲ. ಇಲ್ಲ ಅಂದಿದ್ರೆ ಕೆರೆಗೆ ಸಂಪೂರ್ಣವಾಗಿ ಬೆಂಕಿ ಬೀಳ್ತಾ ಇತ್ತು. ಸದ್ಯ ಅಪಾಯದಿಂದ ಪಾರಾಗಿದ್ದೇವೆ ಎಂದು ಟಿವಿ9ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಈಗಾಗಲೇ ಹಲವು ಬಾರಿ ವರ್ತೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೆರೆ ಸುತ್ತಮುತ್ತಲು ದಟ್ಟ ಹೊಗೆ ಆವರಿಸಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದರು. ವರ್ತೂರು ಕೆರೆಯ ಒಂದು ಕಿಲೋ ಮೀಟರ್ ದೂರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಸದ್ಯ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
Published On - 3:17 pm, Tue, 18 February 20