ಓವರ್​ಟೇಕ್ ಮಾಡುವ ವೇಳೆ ಲಾರಿಗೆ ಡಿಕ್ಕಿ:​ ಚಕ್ರದಡಿ ಸಿಲುಕಿದ ಬೈಕ್​ ಸವಾರ ಸ್ಥಳದಲ್ಲೇ ಸಾವು, ಯಾವೂರಲ್ಲಿ?

| Updated By: KUSHAL V

Updated on: Dec 21, 2020 | 6:42 PM

ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬೈಕ್​ ಸವಾರನೊಬ್ಬ ಲಾರಿಗೆ ಡಿಕ್ಕಿ ಹೊಡೆದು ಸಾವಿಗೀಡಾದ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ಸಮೀಪದ ಭದ್ರಗೊಳದ ಬಳಿ ನಡೆದಿದೆ. ಮೈಸೂರು ಗೋಣಿಕೊಪ್ಪಲು ರಸ್ತೆಯ ಬಳಿ ಓವರ್​ಟೇಕ್​ ಮಾಡುವಾಗ ಅಪಘಾತ ಸಂಭವಿಸಿದ್ದು ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಓವರ್​ಟೇಕ್ ಮಾಡುವ ವೇಳೆ ಲಾರಿಗೆ ಡಿಕ್ಕಿ:​ ಚಕ್ರದಡಿ ಸಿಲುಕಿದ ಬೈಕ್​ ಸವಾರ ಸ್ಥಳದಲ್ಲೇ ಸಾವು, ಯಾವೂರಲ್ಲಿ?
ಲಾರಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟ ಬೈಕ್​ ಸವಾರ
Follow us on

ಕೊಡಗು: ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬೈಕ್​ ಸವಾರನೊಬ್ಬ ಲಾರಿಗೆ ಡಿಕ್ಕಿ ಹೊಡೆದು ಸಾವಿಗೀಡಾದ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ತಿತಿಮತಿ ಸಮೀಪದ ಭದ್ರಗೊಳದ ಬಳಿ ನಡೆದಿದೆ. ಮೈಸೂರು ಗೋಣಿಕೊಪ್ಪಲು ರಸ್ತೆಯ ಬಳಿ ಓವರ್​ಟೇಕ್​ ಮಾಡುವಾಗ ಅಪಘಾತ ಸಂಭವಿಸಿದ್ದು ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಮೃತ ಬೈಕ್​ ಸವಾರ ಕೇರಳದ ಕಣ್ಣೂರು ನಿವಾಸಿ ಸಿದ್ಧಾರ್ಥ್ ಎಂದು ತಿಳಿದುಬಂದಿದೆ. ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಿದ್ಧಾರ್ಥ್ ಗೋಣಿಕೊಪ್ಪಲು​ ಬಳಿ ಹೋಗುವಾಗ ಎದುರಿಗಿದ್ದ ವಾಹನವನ್ನು ಓವರ್​ಟೇಕ್​ ಮಾಡಲು ಯತ್ನಿಸಿದ. ಈ ವೇಳೆ, ನಿಯಂತ್ರಣ ತಪ್ಪಿ ಪಕ್ಕದ ಬದಿಯಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ರಸ್ತೆಗೆ ಬಿದ್ದ ಸವಾರ ಲಾರಿಯ ಮುಂಭಾಗದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.

ಬೈಕ್​ನಲ್ಲಿ ತೆರಳುತ್ತಿರುವಾಗ ‭ಖಾಸಗಿ ಬಸ್​ಗೆ ಡಿಕ್ಕಿ: ಬಸ್​ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು