ಶಶಿಕಲಾ ಸ್ವಾಗತಕ್ಕೆ ಅಳವಡಿಸಲಾಗಿದ್ದ ತಮಿಳು ಭಾಷೆಯ ಬ್ಯಾನರ್, ಫ್ಲೆಕ್ಸ್​ಗಳಿಗೆ ಬೆಂಕಿ ಹಚ್ಚಿದ ಕರವೇ ಕಾರ್ಯಕರ್ತರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 3:10 PM

ತಮಿಳು ಭಾಷೆಯಲ್ಲಿದ್ದ ಬ್ಯಾನರ್ ಮತ್ತು ಫ್ಲೆಕ್ಸ್​ಗಳನ್ನು ಹರಿದು ಹಾಕಿ ತಮ್ಮ ಆಕ್ರೋಶ ಹೊರಹಾಕಿದರು. ಇದಲ್ಲದೆ, ಕೆಲವು ಬ್ಯಾನರ್ ಹಾಗೂ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದರು.

ಶಶಿಕಲಾ ಸ್ವಾಗತಕ್ಕೆ ಅಳವಡಿಸಲಾಗಿದ್ದ ತಮಿಳು ಭಾಷೆಯ ಬ್ಯಾನರ್, ಫ್ಲೆಕ್ಸ್​ಗಳಿಗೆ ಬೆಂಕಿ ಹಚ್ಚಿದ ಕರವೇ ಕಾರ್ಯಕರ್ತರು
ತಮಿಳು ಭಾಷೆಯ ಬ್ಯಾನರ್, ಫ್ಲೆಕ್ಸ್​ಗಳಿಗೆ ಬೆಂಕಿ ಹಚ್ಚಿದ ಕರವೇ ಕಾರ್ಯಕರ್ತರು
Follow us on

ದೇವನಹಳ್ಳಿ: ಜೈಲಿನಿಂದ ಬಿಡುಗಡೆಯಾದ ವಿ.ಕೆ.ಶಶಿಕಲಾ ನಟರಾಜನ್ ತಮಿಳುನಾಡಿನ ರಾಜಕೀಯ ಕಣಕ್ಕೆ ನಾಳೆ ಗ್ರಾಂಡ್​ ಎಂಟ್ರಿಕೊಡಲಿದ್ದಾರೆ. ಈ ನಿಟ್ಟಿನಲ್ಲಿ, ಶಶಿಕಲಾ ನಾಳೆ ಚೆನ್ನೈಗೆ ತೆರಳಲಿದ್ದು ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯ ರೆಸಾರ್ಟ್‌ನಲ್ಲಿ ತಂಗಿದ್ದಾರೆ.

ಇತ್ತ, ಚಿನ್ನಮ್ಮರ ಆಗಮನಕ್ಕೆ ಕಾತುರದಿಂದ ಕಾಯುತ್ತಿದ್ದ ಅವರ ಬೆಂಬಲಿಗರು ತಮ್ಮ ನೆಚ್ಚಿನ ನಾಯಕಿಗೆ ಸ್ವಾಗತ ಕೋರಲು ರೆಸಾರ್ಟ್ ಮುಂದೆ ತಮಿಳಿನಲ್ಲಿ ಬ್ಯಾನರ್ ಮತ್ತು ಫ್ಲೆಕ್ಸ್​ಗಳನ್ನು ಅಳವಡಿಸಿದ್ದರು. ಜೊತೆಗೆ, ನಾಳೆ ಹೋಗುವ ರಸ್ತೆಯುದ್ದಕ್ಕೂ ಸಹ ಬ್ಯಾನರ್‌ ಅಳವಡಿಕೆ ಮಾಡಿದ್ದರು. ಶಶಿಕಲಾ, ದಿ.ಜಯಲಲಿತಾ ಹಾಗೂ MGR ಫೋಟೋಗಳಿರುವ ಬ್ಯಾನರ್​ಗಳನ್ನು ಅಳವಡಿಸಿದ್ದರು.

ಇದನ್ನು ಕಂಡು ಸಿಟ್ಟಿಗೆದ್ದ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜೊತೆಗೆ, ತಮಿಳು ಭಾಷೆಯಲ್ಲಿದ್ದ ಬ್ಯಾನರ್ ಮತ್ತು ಫ್ಲೆಕ್ಸ್​ಗಳನ್ನು ಹರಿದು ಹಾಕಿ ತಮ್ಮ ಆಕ್ರೋಶ ಹೊರಹಾಕಿದರು. ಇದಲ್ಲದೆ, ಕೆಲವು ಬ್ಯಾನರ್ ಹಾಗೂ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದರು.

ಅಂದ ಹಾಗೆ, ಶಶಿಕಲಾ ನಟರಾಜನ್ ನಾಳೆ ಚೆನ್ನೈಗೆ ತೆರಳಲಿದ್ದು ಈ ಹಿನ್ನೆಲೆಯಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಲು ತಮಿಳುನಾಡಿನಿಂದ ಬೆಂಬಲಿಗರು ರೆಸಾರ್ಟ್‌ನತ್ತ ಆಗಮಿಸುತ್ತಿದ್ದಾರೆ. ಕಾರು, ಟ್ಯಾಕ್ಸಿ, ಟಿಟಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಗುಂಪುಗುಂಪಾಗಿ ರೆಸಾರ್ಟ್ ಬಳಿ ಕಾರ್ಯಕರ್ತರು ಜಮಾವಣೆಗೊಳ್ಳುತ್ತಿದ್ದಾರೆ. ಕಾರ್ಯಕರ್ತರು ಇಡೀ ರಾತ್ರಿ ರೆಸಾರ್ಟ್‌ ಮುಂದೆ ಇರಲಿದ್ದಾರೆ. ನಾಳೆ ಬೆಳಗ್ಗೆ ನಡೆಯಲಿರುವ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನಕ್ಕೆ ಶಶಿಕಲಾ ಸಜ್ಜಾಗುತ್ತಿದ್ದಾರೆ.

ನಾಳೆ ತಮಿಳುನಾಡಿಗೆ ಎಂಟ್ರಿ ಬೆನ್ನಲ್ಲೇ‌ ಶಶಿಕಲಾಗೆ ಬಿಗ್ ಶಾಕ್: ನಾಯಕಿ ಆಪ್ತೆ ಇಳವರಸಿ, ಸುಧಾಕರನ್ ಆಸ್ತಿ ಮುಟ್ಟುಗೋಲು

Published On - 11:01 pm, Sun, 7 February 21