Karnataka Dams water level: ರಾಜ್ಯದ 12 ಪ್ರಮುಖ ಜಲಾಶಯ ನೀರಿನ ಮಟ್ಟ; ಕೃಷಿ ನೀರಾವರಿ, ಕುಡಿಯುವ ನೀರಿಗೆ ಬಾಧಕವಿಲ್ಲ

|

Updated on: Jul 05, 2021 | 12:46 PM

Karnataka Reservoirs water level: ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕೆಆರ್​ಎಸ್​, ಕಬಿನಿ, ಹೇಮಾವತಿ, ಹಾರಂಗಿ, ಸೂಪಾ, ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ವಿವರ ಇಲ್ಲಿದೆ.

Karnataka Dams water level: ರಾಜ್ಯದ 12 ಪ್ರಮುಖ ಜಲಾಶಯ ನೀರಿನ ಮಟ್ಟ; ಕೃಷಿ ನೀರಾವರಿ, ಕುಡಿಯುವ ನೀರಿಗೆ ಬಾಧಕವಿಲ್ಲ
Karnataka Dams water level: ಮತ್ತೆ ಮುಂಗಾರು ಜೋರು: ಕೃಷಿ ನೀರಾವರಿ, ಕುಡಿಯುವ ನೀರಿಗೆ ಬಾಧಕವಿಲ್ಲ; ರಾಜ್ಯದ 12 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
Follow us on

ಬೆಂಗಳೂರು: ಈ ಬಾರಿ ಮುಂಗಾರು ಜೋರಾಗಿದ್ದು, ಕರ್ನಾಟಕದಲ್ಲಿ ಬಹುತೇಕ ಜಲಾಶಯಗಳು ಕಂಠಮಟ್ಟಕ್ಕೆ ತುಂಬಿವೆ. ಜೂನ್​ ತಿಂಗಳ ಮುಂಗಾರು ಮಳೆಗೆ ಜಲಾಶಯಗಳಿಗೆ ಭಾರೀ ನೀರು ಹರಿದುಬಂದಿದೆ. ಇನ್ನು ವಾಡಿಕೆಯಂತೆ ಆಗಸ್ಟ್-ಸೆಪ್ಟೆಂಬರ್​ ಮಳೆ ನೀರಿಗೆ ಕೆಆರ್​ಎಸ್ ಅಣೆಕಟ್ಟೆ ಸಹ ತುಂಬುವ ಅಂದಾಜಿದೆ. ಪ್ರಸ್ತುತ ಕೆಆರ್​ಎಸ್ ಪಾತ್ರ ಇನ್ನೂ ಪೂರ್ಣಮಟ್ಟದಲ್ಲಿ ತುಂಬಿಲ್ಲ. 96 ಅಡಿ ನೀರು ತುಂಬಿದೆ. ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಾದ್ಯಂತ ಇನ್ನೂ ಉತ್ತಮ ಮಳೆಯಾಗಲಿದ್ದು, ಕೆಆರ್​ಎಸ್ ಬಿಟ್ಟು ಉಳಿದೆಲ್ಲ ಜಲಾಶಯಗಳು ತುಂಬಿಹರಿಯಲಿವೆ. ಇದರಿಂದ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿಗೆ ಈ ಬಾರಿ ಯಾವುದೇ ಬಾಧಕವಿಲ್ಲ ಎಂಬಂತಾಗಿದೆ.

ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕೆಆರ್​ಎಸ್​, ಕಬಿನಿ, ಹೇಮಾವತಿ, ಹಾರಂಗಿ, ಸೂಪಾ, ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ವಿವರ ಇಲ್ಲಿದೆ.

1) ಕೆಆರ್​ಎಸ್​ ಜಲಾಶಯ | KRS Dam
ಇಂದಿನ ನೀರಿನ ಮಟ್ಟ: 96 ಅಡಿ
ಗರಿಷ್ಠ ಸಾಮರ್ಥ್ಯ: 124.80 ಅಡಿ

2) ಕಬಿನಿ ಜಲಾಶಯ | Kabini Dam
ಇಂದಿನ ನೀರಿನ ಮಟ್ಟ: 2276 ಅಡಿ
ಗರಿಷ್ಠ ಸಾಮರ್ಥ್ಯ: 2284 ಅಡಿ

3) ಹೇಮಾವತಿ ಜಲಾಶಯ | Hemavathi Dam
ಇಂದಿನ ನೀರಿನ ಮಟ್ಟ: 2896 ಅಡಿ
ಗರಿಷ್ಠ ಸಾಮರ್ಥ್ಯ: 2922 ಅಡಿ

4) ಹಾರಂಗಿ ಜಲಾಶಯ | Harangi Dam
ಇಂದಿನ ನೀರಿನ ಮಟ್ಟ: 2841 ಅಡಿ
ಗರಿಷ್ಠ ಸಾಮರ್ಥ್ಯ: 2859 ಅಡಿ

5) ತುಂಗಾಭದ್ರಾ ಜಲಾಶಯ | Tungabhadra Dam
ಇಂದಿನ ನೀರಿನ ಮಟ್ಟ: 1633 ಅಡಿ
ಗರಿಷ್ಠ ಸಾಮರ್ಥ್ಯ: 1609 ಅಡಿ

6) ಭದ್ರಾ ಜಲಾಶಯ | Bhadra Dam
ಇಂದಿನ ನೀರಿನ ಮಟ್ಟ: 155 ಅಡಿ
ಗರಿಷ್ಠ ಸಾಮರ್ಥ್ಯ: 186 ಅಡಿ

7) ಲಿಂಗನಮಕ್ಕಿ ಜಲಾಶಯ | Linganamakki Dam
ಇಂದಿನ ನೀರಿನ ಮಟ್ಟ: 1785 ಅಡಿ
ಗರಿಷ್ಠ ಸಾಮರ್ಥ್ಯ: 1819 ಅಡಿ

8) ಮಲಪ್ರಭಾ ಜಲಾಶಯ | Malaprabha Dam
ಇಂದಿನ ನೀರಿನ ಮಟ್ಟ: 2062 ಅಡಿ
ಗರಿಷ್ಠ ಸಾಮರ್ಥ್ಯ: 2079 ಅಡಿ

9) ಘಟಪ್ರಭಾ ಜಲಾಶಯ | Ghataprabha Dam
ಇಂದಿನ ನೀರಿನ ಮಟ್ಟ: 2135 ಅಡಿ
ಗರಿಷ್ಠ ಸಾಮರ್ಥ್ಯ: 2175 ಅಡಿ

10) ಸೂಪಾ ಜಲಾಶಯ | Supa Dam
ಇಂದಿನ ನೀರಿನ ಮಟ್ಟ: 539 ಮೀಟರ್
ಗರಿಷ್ಠ ಸಾಮರ್ಥ್ಯ: 564 ಮೀಟರ್

11) ನಾರಾಯಣಪುರ ಜಲಾಶಯ | Narayanapura Dam
ಇಂದಿನ ನೀರಿನ ಮಟ್ಟ: 490.03 ಮೀಟರ್
ಗರಿಷ್ಠ ಸಾಮರ್ಥ್ಯ: 492.25 ಮೀಟರ್

12) ಆಲಮಟ್ಟಿ ಜಲಾಶಯ | Almatti Dam
ಇಂದಿನ ನೀರಿನ ಮಟ್ಟ: 517.45 ಮೀಟರ್
ಗರಿಷ್ಠ ಸಾಮರ್ಥ್ಯ: 519.69 ಮೀಟರ್

Karnataka weather update: ಬಿರುಬಿಸಿಲಿನ ನಂತರ ರಾಜಧಾನಿ ಬೆಂಗಳೂರು ಕೂಲ್​ ಕೂಲ್, ರಾಜ್ಯದಲ್ಲಿ ಮುಂಗಾರು ಮಳೆ ಹೇಗೆ? ​

(karnataka 12 reservoirs and dams water level as on 5th july 2021 due to monsoon rainfall effect)

Published On - 11:24 am, Mon, 5 July 21