AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಜಮೀನು ಉಳುಮೆಗೆ ಉಚಿತ ಟ್ರಾಕ್ಟರ್; ಓಲಾ, ಉಬರ್ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬುಕಿಂಗ್

ರೈತರು ಕೆಂಪಣ್ಣ ಟ್ರಸ್ಟ್​ನ ಮೊಬೈಲ್ ಆ್ಯಪ್​ನಲ್ಲಿ ಓಲಾ, ಉಬರ್, ಕ್ಯಾಬ್ ಬುಕ್ ಮಾಡುವ ರೀತಿಯಲ್ಲಿ, ತಮ್ಮ ಜಮೀನಿನಲ್ಲಿ ನಿಂತು ಜಮೀನು ಉಳುಮೆಗೆ ಬುಕ್ ಮಾಡಿದರೆ ಸಾಕು, ಟ್ರಸ್ಟ್​ನ ಸಿಬ್ಬಂದಿ ಹಾಗೂ ಟ್ರಾಕ್ಟರ್ ಆಗಮಿಸಿ ತಲಾ ರೈತರ ಎರಡು ಎಕರೆ ಜಮೀನನ್ನು ಉಚಿತವಾಗಿ ಉಳುಮೆ ಮಾಡಿ ಹೋಗುತ್ತಾರೆ.

ರೈತರ ಜಮೀನು ಉಳುಮೆಗೆ ಉಚಿತ ಟ್ರಾಕ್ಟರ್; ಓಲಾ, ಉಬರ್ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬುಕಿಂಗ್
ರೈತರ ಜಮೀನು ಉಳುಮೆಗೆ ಉಚಿತ ಟ್ರಾಕ್ಟರ್
TV9 Web
| Edited By: |

Updated on:Jul 05, 2021 | 12:34 PM

Share

ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟದ ಕಾಲದಲ್ಲಿ ಉಳ್ಳವರು ಒಂದಿಲ್ಲಾ ಒಂದು ರೀತಿಯಲ್ಲಿ ಜನರ ನೆರವಿಗೆ ನಿಂತ ಅನೇಕ ಸನ್ನವೇಶಗಳ ಬಗ್ಗೆ ನಾವು ಓದಿದ್ದೇವೆ. ಈಗ ಲಾಕ್​ಡೌನ್​ ಮುಕ್ತಾಯವಾಗಿದೆ. ವ್ಯಾಪಾರ, ವಹಿವಾಟು ಮತ್ತೆ ನಡೆಯುತ್ತಿದೆ. ರೈತರು ಕೂಡ ಉಳಿಮೆಗೆ ಮುಂದಾಗಿದ್ದಾರೆ. ಹೀಗೆ ಉತ್ತಮ ಮಳೆಯನ್ನು ನಂಬಿದ ರೈತರು ಜಮೀನು ಹದ ಮಾಡಿ ಬೆಳೆ ಬೆಳೆಯಲು ಶುರು ಮಾಡಿದ್ದಾರೆ. ಆದರೆ ಕೆಲವು ರೈತರಲ್ಲಿ ಎತ್ತುಗಳು ಇಲ್ಲ, ಇತ್ತ ಟ್ರಾಕ್ಟರ್​ಗಳು ಕೈಗೆ ಸಿಗುತ್ತಿಲ್ಲ. ಹೀಗಾಗಿ ಇರುವ ಜಮೀನು ಬಿಟ್ಟು ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇದನ್ನು ಅರಿತ ವ್ಯಕ್ತಿಯೊಬ್ಬರು ರೈತರ ನೆರವಿಗೆ ದಾವಿಸಿದ್ದು, ತಲಾ ಎರಡು ಎಕರೆ ಜಮೀನನ್ನು ಉಚಿತವಾಗಿ ಟ್ರಾಕ್ಟರ್​ಗಳ ಮೂಲಕ, ಉಳುಮೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಈ ಬಾರಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗಿಂತ ಉತ್ತಮವಾಗಿ ಮಳೆಯಾಗಿದೆ. ಹೀಗಾಗಿ ರೈತರು ಉಳುಮೆಗೆ ಮುಂದಾಗಿದ್ದಾರೆ. ಆದರೆ ಸಣ್ಣ ರೈತರು ಅಂದರೆ ಎರಡು ಎಕರೆ ಜಮೀನು ಹೊಂದಿರುವವರ ಜಮೀನು ಉಳುಮೆಗೆ ಯಾರು ಬರುತ್ತಿಲ್ಲ. ಇಂತಹ ರೈತರ ಸಮಸ್ಯೆ ಅರಿತ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ರೈತ ಹಾಗೂ ಸಮಾಜ ಸೇವಕರಾದ ಕೆಂಪಣ್ಣ, ಉಚಿತವಾಗಿ ರೈತರ ಜಮೀನು ಉಳುಮೆ ಮಾಡಿಕೊಡಲು ಮುಂದೆ ಬಂದಿದ್ದಾರೆ. ಗೌರಿಬಿದನೂರು ತಾಲೂಕಿನ ಸಣ್ಣ ರೈತರು ಎಷ್ಟು ಜನ ಬೇಕಾದರೂ ಕೆಂಪಣ್ಣ ಟ್ರಸ್ಟಿನ ಟ್ರಾಕ್ಟರ್​ಗಳನ್ನು ತಲಾ ಎರಡು ಎಕರೆಗೆ ಬಳಸಿಕೊಳ್ಳಬಹುದು.

ಸ್ವಂತ ಟ್ರಸ್ಟ್ ನಡಿ ಕೆಂಪಣ್ಣ ಎನ್ನುವವರು 60 ಟ್ರಾಕ್ಟರ್​ಗಳನ್ನು ಗುತ್ತಿಗೆ ಪಡೆದಿದ್ದು, ಪ್ರತಿಯೊಂದು ಗ್ರಾಮ ಪಂಚಾಯತಿಗೆ ಒಬ್ಬರಂತೆ ಟ್ರಸ್ಟ್​ನ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ರೈತರು ಕೆಂಪಣ್ಣ ಟ್ರಸ್ಟ್​ನ ಮೊಬೈಲ್ ಆ್ಯಪ್​ನಲ್ಲಿ ಓಲಾ, ಉಬರ್, ಕ್ಯಾಬ್ ಬುಕ್ ಮಾಡುವ ರೀತಿಯಲ್ಲಿ, ತಮ್ಮ ಜಮೀನಿನಲ್ಲಿ ನಿಂತು ಜಮೀನು ಉಳುಮೆಗೆ ಬುಕ್ ಮಾಡಿದರೆ ಸಾಕು, ಟ್ರಸ್ಟ್​ನ ಸಿಬ್ಬಂದಿ ಹಾಗೂ ಟ್ರಾಕ್ಟರ್ ಆಗಮಿಸಿ ತಲಾ ರೈತರ ಎರಡು ಎಕರೆ ಜಮೀನನ್ನು ಉಚಿತವಾಗಿ ಉಳುಮೆ ಮಾಡಿ ಹೋಗುತ್ತಾರೆ. ಈ ಸೇವೆಯಿಂದ ನಮಗೆ ತುಂಬಾ ಅನುಕೂಲವಾಗಿದೆ ಎಂದು ಕಾದಲವೇಣಿ ರೈತ ರಾಮು ಸಂತಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸಂಕಷ್ಟದ ಮಧ್ಯೆ, ರೈತರು ಇರೊ ಬರೊ ದನ, ಕರು, ಎತ್ತುಗಳನ್ನು ಮಾರಾಟ ಮಾಡಿದ್ದಾರೆ. ಇನ್ನೂ ಇರುವ ಜಮೀನನ್ನು ಸಕಾಲಕ್ಕೆ ಉಳುಮೆ ಮಾಡಲಾಗದೆ, ಕೈಕಟ್ಟಿ ಕುಳಿತಿದ್ದಾರೆ. ಹೀಗಿರುವಾಗ ರೈತರ ನೆರವಿಗೆ ಬಂದ ಕೆಂಪಣ್ಣನವರ ಸಹಾಯ ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ:

ಎತ್ತುಗಳಂತೆ ಉಳುಮೆ ಮಾಡುತ್ತಿದ್ದ ಬಾಲಕಿಯರಿಗೆ ಟ್ರ್ಯಾಕ್ಟರ್‌ ಗಿಫ್ಟ್‌ ಕೊಟ್ಟ ಸೋನು ಸೂದ್‌‌

ಹಾವೇರಿ: ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುವಿನ ಕಾಟ; ಬೆಳೆ ರಕ್ಷಣೆ ಕ್ರಮಗಳ ಬಗ್ಗೆ ಕೃಷಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ

Published On - 12:31 pm, Mon, 5 July 21

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ