ನಾನು ಮಂಡ್ಯ ಕ್ಷೇತ್ರದ ಜನರಿಗೆ ಉತ್ತರದಾಯಿ, ಕುಮಾರಸ್ವಾಮಿಗಲ್ಲ: ಕುಮಾರಸ್ವಾಮಿ ಲೆವೆಲ್​ಗೆ ಇಳಿದು ಮಾತನಾಡೊಲ್ಲ- ಸುಮಲತಾ

HD Kumaraswamy: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ಹೇಳಿಕೆಯೂ ಸತ್ಯವಾಗಿದೆ. ನನ್ನಂತಹ ಸಂಸದೆಯನ್ನು ನೋಡಿಲ್ಲ, ನೋಡೋದು ಇಲ್ಲ. ನಾನು ಯಾವಾಗಲೂ ನೇರವಾಗಿಯೇ ಮಾತನಾಡುತ್ತೇನೆ. ನನ್ನ ನೇರ ನಡೆ, ನುಡಿ ಅವರಿಗೆ ಇಷ್ಟವಾಗದಿದ್ದರೆ ಏನ್ಮಾಡಲಿ? ಕೆಆರ್​ಎಸ್​ ಜಲಾಶಯ ಉಳಿಸುವುದೇ ನನ್ನ ಉದ್ದೇಶ ... ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ

ನಾನು ಮಂಡ್ಯ ಕ್ಷೇತ್ರದ ಜನರಿಗೆ ಉತ್ತರದಾಯಿ, ಕುಮಾರಸ್ವಾಮಿಗಲ್ಲ: ಕುಮಾರಸ್ವಾಮಿ ಲೆವೆಲ್​ಗೆ ಇಳಿದು ಮಾತನಾಡೊಲ್ಲ- ಸುಮಲತಾ
ಹೆಚ್​ಡಿ ಕುಮಾರಸ್ವಾಮಿಯವರ ಲೆವೆಲ್​ಗೆ ಇಳಿದು ಮಾತನಾಡುವುದಿಲ್ಲ; ಅವರ ಧಾಟಿಯಲ್ಲಿ ನಾನು ಮಾತನಾಡಲು ಹೋಗುವುದಿಲ್ಲ- ಸುಮಲತಾ ಪ್ರತಿಕ್ರಿಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 05, 2021 | 1:00 PM

ಕೆಆರ್‌ಎಸ್‌ ಡ್ಯಾಂನಲ್ಲಿ ಬಿರುಕು ಬಿಟ್ಟಿರುವ ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಮತ್ತು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಮಧ್ಯೆ ಜೋರಾದ ವಾಕ್ಸಮರವೇ ನಡೆದಿದೆ. ಮಂಡ್ಯದ ಸಂಸದೆ ಸುಮಲತಾ ಅಂಬರೀಷ್​ ಯಾವುದೋ ಅನುಕಂಪದಲ್ಲಿ ಆಯ್ಕೆಯಾಗಿದ್ದಾರೆ. ಕೆಆರ್​ಎಸ್ ಇವರೇ ರಕ್ಷಿಸುತ್ತಿದ್ದಾರೆ ಅನ್ನೋ ರೀತಿ ಹೇಳಿದ್ದಾರೆ. ಕೆಆರ್​ಎಸ್​ ಸೋರುತ್ತಿದ್ದರೆ ಅದರ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಸಂಸದೆ ಸುಮಲತಾ ಅವರ ಬಗ್ಗೆ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿರುವ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಟಿವಿ9 ಜೊತೆ ಮಾತನಾಡಿದ್ದು ಹೆಚ್​ಡಿ ಕುಮಾರಸ್ವಾಮಿಯವರ ಲೆವೆಲ್​ಗೆ ಇಳಿದು ನಾನು ಮಾತನಾಡುವುದಿಲ್ಲ; ಅವರ ಧಾಟಿಯಲ್ಲಿ ನಾನು ಮಾತನಾಡಲು ಹೋಗುವುದಿಲ್ಲ ಎಂದಿದ್ದಾರೆ.

ಕೆಆರ್‌ಎಸ್‌ ಡ್ಯಾಂನಲ್ಲಿ ಬಿರುಕು ಬಿಟ್ಟಿರುವ ಹೇಳಿಕೆ ವಿಚಾರದಲ್ಲಿ ನನಗಿರುವ ಮಾಹಿತಿಯನ್ನು ನಾನು ಹೇಳಿದ್ದೇನೆ. KRS​ ಡ್ಯಾಂ ಬಗ್ಗೆ ನನ್ನ ಹೇಳಿಕೆ ಕಾಳಜಿಯಿಂದ ಕೂಡಿದೆ. ಕೆಆರ್​ಎಸ್​ ಜಲಾಶಯ ನಮ್ಮ ಜೀವನಾಡಿಯಾಗಿರುತ್ತದೆ. ಕೆಆರ್​ಎಸ್​ ಜಲಾಶಯ ಉಳಿಸುವುದೇ ನನ್ನ ಉದ್ದೇಶವಾಗಿದೆ. KRS​​ ಜಲಾಶಯದ ರಕ್ಷಣೆ ಬಗ್ಗೆ ಸಂಸತ್​ನಲ್ಲಿ ಮಾತಾಡಿದ್ದೆ. ಜಲಶಕ್ತಿ ಇಲಾಖೆ ಸಚಿವರ ಜತೆ ಚರ್ಚೆ ವೇಳೆಯೂ ಪ್ರಸ್ತಾಪಿಸಿದ್ದೆ. ಜಲಾಶಯ ಸಂರಕ್ಷಣೆ ಸಂಬಂಧ ಸಂಸತ್​ನಲ್ಲಿ ಪ್ರಸ್ತಾಪಿಸಿದ್ದಾಗ KRS​​ ಜಲಾಶಯ ರಕ್ಷಣೆಗೆ ಕ್ರಮಕೈಗೊಳ್ಳುವುದಾಗಿ ಕೇಂದ್ರ ಜಲಶಕ್ತಿ ಇಲಾಖೆ ಸಚಿವರು ಭರವಸೆ ನೀಡಿದ್ದಾರೆ ಎಂದು ಸುಮಲತಾ ಮಾಹಿತಿ ನೀಡಿದ್ದಾರೆ.

ನಾನು ಮಂಡ್ಯ ಕ್ಷೇತ್ರದ ಜನರಿಗೆ ಉತ್ತರದಾಯಿ, ಕುಮಾರಸ್ವಾಮಿಗಲ್ಲ: ಇನ್ನು, KRS​​ ಬಗ್ಗೆ ಮಾತನಾಡಿದಾಗಲೆಲ್ಲ ಟಾರ್ಗೆಟ್ ಮಾಡುತ್ತಾರೆ. ನನ್ನ ಬಗ್ಗೆ ವೈಯಕ್ತಿಕವಾಗಿ ಮಾತಾಡುವುದೇ ಹೆಚ್​ಡಿ ಕುಮಾರಸ್ವಾಮಿ ಅವರ ಹವ್ಯಾಸ. ಇಂತಹ ಹೇಳಿಕೆಯಿಂದ ಯಾರಿಗೆ ತೊಂದ್ರೆ ಎಂದು ಅರಿಯಲಿ. ಸಂಸದೆಯಾಗಿ ಪ್ರಾಮಾಣಿಕವಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನಾನು ಯಾರೊಬ್ಬರನ್ನೂ ಮೆಚ್ಚಿಸಲು ಕೆಲಸ ಮಾಡುವುದಿಲ್ಲ. ಮಂಡ್ಯ ಕ್ಷೇತ್ರದ ಜನರು ನನ್ನ ಕೆಲಸ ಮೆಚ್ಚಿದರೆ ಸಾಕು. ಮಂಡ್ಯ ಕ್ಷೇತ್ರದ ಜನರಿಗೆ ನಾನು ಉತ್ತರದಾಯಿ, ಇವರಿಗಲ್ಲ. ಯಾರೋ ಹೇಳಿದ್ದಕ್ಕೆಲ್ಲ ನಾನು ಉತ್ತರ ನೀಡಲು ಹೋಗಲ್ಲ ಎಂದು ಟಿವಿ9 ಜೊತೆ ಮಾತನಾಡಿ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನಂತಹ ಸಂಸದೆಯನ್ನು ನೋಡಿಲ್ಲ, ನೋಡೋದು ಇಲ್ಲ ಎಂದ ಕುಮಾರಸ್ವಾಮಿ ಹೇಳಿಕೆ ಸತ್ಯವಾಗಿದೆ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ಹೇಳಿಕೆಯೂ ಸತ್ಯವಾಗಿದೆ. ನನ್ನಂತಹ ಸಂಸದೆಯನ್ನು ನೋಡಿಲ್ಲ, ನೋಡೋದು ಇಲ್ಲ. ನಾನು ಯಾವಾಗಲೂ ನೇರವಾಗಿಯೇ ಮಾತನಾಡುತ್ತೇನೆ. ನನ್ನ ನೇರ ನಡೆ, ನುಡಿ ಅವರಿಗೆ ಇಷ್ಟವಾಗದಿದ್ದರೆ ಏನ್ಮಾಡಲಿ? ಕೆಆರ್​ಎಸ್​ ಜಲಾಶಯ ಉಳಿಸುವುದೇ ನನ್ನ ಉದ್ದೇಶ. ಹೆಚ್​ಡಿಕೆ ಲೆವೆಲ್​ಗೆ ಇಳಿದು ನಾನು ಮಾತನಾಡುವುದಿಲ್ಲ. ಚುನಾವಣೆ ಸಂದರ್ಭದಲ್ಲೂ ನನ್ನ ಬಗ್ಗೆ ಮಾತನಾಡಿದ್ದರು. ಅವರ ಧಾಟಿಯಲ್ಲಿ ನಾನು ಮಾತನಾಡಲು ಹೋಗುವುದಿಲ್ಲ. ಅವರ ವ್ಯಕ್ತಿತ್ವ, ಸಂಸ್ಕಾರ ಏನು ಎಂದು ತೋರಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಮಂಡ್ಯದ ಜನ ಬುದ್ಧಿ ಕಲಿಸಿದ್ದಾರೆ. ಮಂಡ್ಯಕ್ಕೆ ಯಾರು ಸೂಕ್ತವೆಂದು ಜನರೇ ತೀರ್ಪು ನೀಡಿದ್ದರು ಎಂದು ಸುಮಲತಾ ಹೇಳಿದ್ದಾರೆ.

ಕೆಆರ್​ಎಸ್ ಸೋರುತ್ತಿದ್ದರೆ ಅದರ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ

(Mandya MP Sumalatha Ambareesh on HD Kumaraswamy about suspected KRS Dam breach)

Published On - 12:06 pm, Mon, 5 July 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?