ಯಡಿಯೂರಪ್ಪ ‘ಕುತ್ತಾ’ ಎಂದ ಸಿದ್ದರಾಮಯ್ಯ; ನಾನು ಸಿಎಂ ಆಗಿದ್ರೆ ಸಚಿವೆ ನಿರ್ಮಲಾ ಮನೆ ಮುಂದೆ ಪ್ರತಿಭಟನೆ ಮಾಡ್ತಿದ್ದೆ ಎಂದರು
Siddaramaiah: ನೀವು ನನ್ನನ್ನ ಗೆಲ್ಲಿಸುತ್ತೇನೆ ಅಂದ್ರೆ ಬಸವನಗುಡಿಗೆ ಬರುತ್ತೇನೆ. ಆ ರವಿಸುಬ್ರಹ್ಮಣ್ಯ, ಸೂರ್ಯನ್ನೇ ಗೆಲ್ಲಿಸ್ತೀನಿ ಅಂದ್ರೆ ಏನ್ಮಾಡ್ಲಿ? ಎಂದು ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಬಿಜೆಪಿಗೆ ವೋಟ್ ಹಾಕಲೇ ಬೇಡಿ; ಯಾತಕ್ಕೆ ಬಿಜೆಪಿಗೆ ವೋಟ್ ಹಾಕ್ತಿರಾ? ಅವರಿಗೆ ಏನ್ ಬಂದಿದೆ ಬಿಜೆಪಿಯವರಿಗೆ? ಎಂದು ಆಡಳಿತಾರೂಢ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ರಾಜ್ಯಕ್ಕೆ ದ್ರೋಹ ಮಾಡಿದ್ದಾರೆ. ನಾನು ಸಿಎಂ ಆಗಿದ್ರೆ ನಿರ್ಮಲಾ ಸೀತಾರಾಮನ್ ಮನೆ ಮುಂದೆ ಪ್ರತಿಭಟನೆ ಮಾಡ್ತಾಯಿದ್ದೆ ಎಂದಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಪ್ರತಿಯೊಬ್ಬರಿಗೂ 10 ಸಾವಿರ ರೂಪಾಯಿ ಕೊಡಿ ಎಂದು ಒತ್ತಾಯ ಮಾಡಿದ್ದಿವಿ. ನಾವು ಇದ್ದಿದ್ದರೆ ಹತ್ತು ಸಾವಿರ ಕೊಡ್ತಿದ್ವಿ. ಹತ್ತು ಕೆಜಿ ಅಕ್ಕಿ ಕೊಡ್ತಿದ್ದೆ. ಈಗ ಇವರು ಎರಡು ಕೆಜಿ ಅಕ್ಕಿ ಕೊಡ್ತಿದ್ದಾರೆ. ಹತ್ತು ಕೆಜಿ ಕೊಟ್ಟಿದ್ರೆ ಇವರ ಗಂಟೇನು ಹೋಗ್ತಿತ್ತಾ..? ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದಿದ್ದಾರೆ.
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು ಅವನು ಸೂರ್ಯ ಅಲ್ಲ ಕತ್ತಲು, ರವಿ ಸುಬ್ರಮಣ್ಯ ಏನು ಮಾಡ್ತಿದ್ದಾರೆ ಎಂದು ನೀವು ಕೇಳಬೇಕು ಎಂದು ಕಾರ್ಯಕರ್ತರಿಗೆ ಸಿದ್ದರಾಮಯ್ಯ ಹೇಳಿದರು.
ಈ ದೇಶದ ರಾಜಕೀಯ ಸೂರ್ಯ ಅಂದ್ರೆ ಡಾ.ಅಂಬೇಡ್ಕರ್. ಇವನು ಸುಮ್ನೆ ಸೂರ್ಯ ಅಂತ ಹೆಸರಿಟ್ಟುಕೊಂಡಿದ್ದಾನೆ. ನೀವು ನನ್ನನ್ನ ಗೆಲ್ಲಿಸುತ್ತೇನೆ ಅಂದ್ರೆ ಬಸವನಗುಡಿಗೆ ಬರುತ್ತೇನೆ. ಆ ರವಿಸುಬ್ರಹ್ಮಣ್ಯ, ಸೂರ್ಯನ್ನೇ ಗೆಲ್ಲಿಸ್ತೀನಿ ಅಂದ್ರೆ ಏನ್ಮಾಡ್ಲಿ? ಡಾ.ಅಂಬೇಡ್ಕರ್ ಬರೆದ ಸಂವಿಧಾನ ಸುಟ್ಟುಹಾಕುವವರು, ಸಮಾಜ ಒಡೆಯುವವರು ಇವರು. ಜಾತಿ ನಡುವೆ ಜಗಳ ತಂದಿಡುತ್ತಾರೆ, ಚೆನ್ನಾಗಿದ್ರೆ ಸಹಿಸುವುದಿಲ್ಲ. ಬಿಜೆಪಿಯನ್ನು ಬೇರು ಸಹಿತ ಕಿತ್ತುಹಾಕುವುದು ಒಳ್ಳೆಯದು ಎಂದು ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ಅವರನ್ನ ‘ಕುತ್ತಾ’ ಎಂದು ಸಂಬೋಧಿಸಿದ ಸಿದ್ದರಾಮಯ್ಯ:
ಸಿಎಂ ಯಡಿಯೂರಪ್ಪ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಕೇಂದ್ರದ ಬಳಿ ಮಾತನಾಡುವುದೇ ಇಲ್ಲ. ಹಮಾರಾ ಕುತ್ತಾ ಹಮಾರಾ ಗಲ್ಲಿ ಮೇ ಶೇರ್ ಅಂತಾರಲ್ಲ ಹಾಗೇ ಎಂದು ಯಡಿಯೂರಪ್ಪ ಅವರನ್ನ ‘ಕುತ್ತಾ ಎಂದು ಸಿದ್ದರಾಮಯ್ಯ ಸಂಬೋಧಿಸಿದರು.
ಕೆಆರ್ಎಸ್ ಸೋರುತ್ತಿದ್ದರೆ ಅದರ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ
(siddaramaiah criticizes bs yediyurappa refer him to dog)
Published On - 12:41 pm, Mon, 5 July 21