ಕೆಆರ್​ಎಸ್ ಸೋರುತ್ತಿದ್ದರೆ ಅದರ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಮಂಡ್ಯದಲ್ಲಿ ಇಂತಹ ಸಂಸದರು ಬಂದಿಲ್ಲ, ಬರೋದಿಲ್ಲ. KRS ಇವರೇ ರಕ್ಷಿಸುತ್ತಿದ್ದಾರೆ ಅನ್ನೋ ರೀತಿ ಹೇಳಿದ್ದಾರೆ. KRS ಸೋರುತ್ತಿದ್ದರೆ KRS ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು.

ಕೆಆರ್​ಎಸ್ ಸೋರುತ್ತಿದ್ದರೆ ಅದರ ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
Follow us
TV9 Web
| Updated By: ಆಯೇಷಾ ಬಾನು

Updated on:Jul 05, 2021 | 1:01 PM

ಮಂಡ್ಯ: KRS ಸೋರುತ್ತಿದ್ದರೆ ನೀರು ಸೋರದಂತೆ ಸುಮಲತಾ ಅವರನ್ನ ಮಲಗಿಸಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಸಂಸದೆ ಸುಮಲತಾ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಮಂಡ್ಯದಲ್ಲಿ ಇಂತಹ ಸಂಸದರು ಬಂದಿಲ್ಲ, ಬರೋದಿಲ್ಲ. KRS ಇವರೇ ರಕ್ಷಿಸುತ್ತಿದ್ದಾರೆ ಅನ್ನೋ ರೀತಿ ಹೇಳಿದ್ದಾರೆ. KRS ಸೋರುತ್ತಿದ್ದರೆ KRS ನೀರು ಸೋರದಂತೆ ಸುಮಲತಾರನ್ನ ಮಲಗಿಸಬೇಕು. KRS ಡ್ಯಾಂ ಬಿರುಕುಬಿಟ್ಟಿದೆ ಎಂದು ಸುಮಲತಾ ಹೇಳಿದ್ದರು ಎಂದು ಸುಮಲತಾ ಹೇಳಿಕೆ ಖಂಡಿಸಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಯಾವುದೋ ಅನುಕಂಪದಲ್ಲಿ ಆಯ್ಕೆಯಾಗಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿ. ಸಂಸದರಾಗಿ ಮಂಡ್ಯ ಕ್ಷೇತ್ರದ ಜನರ ಸೇವೆ ಮಾಡಲಿ ಎಂದರು.

ಮಂಡ್ಯ ಮೈ ಶುಗರ್ ಖಾಸಗೀಕರಣಕ್ಕೆ ಸಂಸದರ ಒತ್ತಡ ಇದೆಯಾ ಅಂತ ಅವರನ್ನೇ ಕೇಳಬೇಕು. ಅಂಥಹ ಸಂಸದೆ ಮಂಡ್ಯಕ್ಕೆ ಸಿಕ್ಕಿಲ್ಲ, ಸಿಗಲ್ಲ. ಮೊನ್ನೆ ಯಾವುದೋ ಸಭೆಯಲ್ಲಿ KRS ಇವರೇ ರಕ್ಷಣೆ ಮಾಡ್ತಿರುವ ಹಾಗೆ ಹೇಳಿಕೆ ಕೊಟ್ಟಿದ್ದಾರೆ. KRS ಬಾಗಿಲಿಗೆ ನೀರು ಹೋಗದಂತೆ ಅವರನ್ನೇ ಮಲಗಿಸಿಬಿಟ್ರೆ ಬಿಗಿಯಾಗುತ್ತದೆ. ಸಂಸದರು ಕೆಲಸ ಯಾವ ರೀತಿ ಮಾಡಬೇಕು ಅಂತ ಮಾಹಿತಿ ಪಡೆಯಲ್ಲ. ಕಾಟಾಚಾರಕ್ಕೆ ಯಾರ ಮೇಲಿನ ದ್ವೇಷಕ್ಕೋ ಹೇಳಿಕೆ ಕೊಡೋದು ಸರಿಯಲ್ಲ. ಇದು ಬಹಳ ದಿನ ನಡೆಯಲ್ಲ. ಅನುಕಂಪದ ಮೇಲೆ ಗೆದ್ದ ಮೇಲೆ ಜನರ ಕೆಲಸ ಮಾಡಬೇಕು. ಅನುಕಂಪದ ಅವಕಾಶ ಸದ್ಬಳಕೆ ಮಾಡಿಕೊಳ್ಳದಿದ್ರೆ ಮುಂದೆ ಜನರೇ ಪಾಠ ಕಲಿಸ್ತಾರೆ ಎಂದರು.

ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂಗೆ ಹಾನಿ ಶ್ರೀರಂಗಪಟ್ಟಣ-ಪಾಂಡವಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂ ಅಸ್ತಿತ್ವಕ್ಕೆ ಅಡ್ಡಿಯಾಗಿದೆ ಎಂದು ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯೊಂದರಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದರು. ಶ್ರೀರಂಗಪಟ್ಟಣ-ಪಾಂಡವಪುರ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ಸಂಸತ್​ನಲ್ಲಿ ಹಲವು ಬಾರಿ ಚರ್ಚಿಸಿದ್ದೇನೆ. ಈ ವಿಷಯವನ್ನು ಸಚಿವರ ಗಮನಕ್ಕೂ ತಂದಿದ್ದೇನೆ. ಅಕ್ರಮ ಚಟುವಟಿಕೆ ನಿಲ್ಲಿಸಿ ಡ್ಯಾಂ ರಕ್ಷಿಸಬೇಕು. ಅಕ್ರಮ ಚಟುವಟಿಕೆ ನಿಲ್ಲಿಸುವುದು ಜಿಲ್ಲಾಡಳಿತದ ಹೊಣೆಯಾಗಿದ್ದು, ನಾನೂ ಸಹ ಕೈಜೋಡಿಸುತ್ತೇನೆ. ಅಕ್ರಮ ಗಣಿಗಾರಿಕೆಯ ಹಿಂದೆ ಯಾರೇ ಪ್ರಭಾವಿ ಇದ್ದರೂ ತಡೆಗಟ್ಟಲು ನಾನು ಸಿದ್ಧ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂಗೆ ಹಾನಿ: ಸಂಸದೆ ಸುಮಲತಾ ಅಂಬರೀಶ್

Published On - 12:00 pm, Mon, 5 July 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ