Rekha Kadiresh: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ.. ಮತ್ತೋರ್ವ ಆರೋಪಿ ಅರೆಸ್ಟ್
ಆರೋಪಿಗಳು 4 ತಿಂಗಳ ಹಿಂದೆ ಗಾರ್ಡನ್ ಶಿವ ಕೊಲೆಗೆ ಸಂಚು ಮಾಡಿದ್ರು. ಕೊಲೆಗೆ ಸಂಚು ಮಾಡಿದ್ದ ಸಭೆಯಲ್ಲಿ ಸೆಲ್ವರಾಜ್ ಅಲಿಯಾಸ್ ಪೂಬಾಳನ್ @ ಕ್ಯಾಪ್ಟನ್ ಭಾಗಿಯಾಗಿದ್ದ.
ಬೆಂಗಳೂರು: ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೆಲ್ವರಾಜ್ ಅಲಿಯಾಸ್ ಪೂಬಾಳನ್ @ ಕ್ಯಾಪ್ಟನ್ ಬಂಧಿತ ಆರೋಪಿ.
ಆರೋಪಿಗಳು 4 ತಿಂಗಳ ಹಿಂದೆ ಗಾರ್ಡನ್ ಶಿವ ಕೊಲೆಗೆ ಸಂಚು ಮಾಡಿದ್ರು. ಕೊಲೆಗೆ ಸಂಚು ಮಾಡಿದ್ದ ಸಭೆಯಲ್ಲಿ ಸೆಲ್ವರಾಜ್ ಅಲಿಯಾಸ್ ಪೂಬಾಳನ್ @ ಕ್ಯಾಪ್ಟನ್ ಭಾಗಿಯಾಗಿದ್ದ. ಮೀಟಿಂಗ್ ನಂತ್ರ ರೇಖಾ ಕೊಲೆ ಮಾಡುವುದೆಂದು ನಿರ್ಧಾರ ಮಾಡಲಾಗಿತ್ತು. ಕ್ಯಾಪ್ಟನ್, ರೇಖಾ ಕೊಲೆಗೆ ಪರೋಕ್ಷವಾಗಿ ಸಹಾಯ ಮಾಡಿದ್ದ. ಕೊಲೆ ಮಾಡಿದ ಬಳಿಕ ಆರೋಪಿಗಳಿಗೆ ಆಶ್ರಯ ನೀಡಿದ್ದ. ಅಲ್ಲದೆ ಈ ಹಿಂದೆ ಕ್ಯಾಪ್ಟನ್ ಅಲಿಯಾಸ್ ಪೂಬಾಳನ್ ಸ್ನೇಹಿತ ಪೀಟರ್ ಜೊತೆ ಸೇರಿ ಶ್ರೀರಾಂಪುರದಲ್ಲಿ ಕೊಲೆ ಮಾಡಿದ್ದ.
ಕದಿರೇಶ್ ಕೊಲೆ ಮಾಡಿದವರಿಗಾಗಿ ಹೊಂಚು ಪೀಟರ್ ಕದಿರೇಶ್ನ ಪಕ್ಕ ಶಿಷ್ಯನಾಗಿದ್ದ. ಹೀಗಾಗಿ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಮೂರು ಜನರನ್ನು ಕೊಲೆ ಮಾಡಲು ಪೀಟರ್ ತೀರ್ಮಾನಿಸಿದ್ದ. ಕದಿರೇಶ್ ಹತ್ಯೆಗೆ ಕಾರಣವಾಗಿದ್ದು ಗಾರ್ಡನ್ ಶಿವ, ನವೀನ್ ಮತ್ತು ವಿನಯ್ ಎಂಬ ಮೂವರು. ಜೋಪಡಿ ರಾಜೇಂದ್ರನ ಹತ್ಯೆಗೆ ಪ್ರತಿಕಾರವಾಗಿ ಗಾರ್ಡನ್ ಶಿವನ ಅಕ್ಕನ ಮಕ್ಕಳಾದ ನವೀನ್ ಮತ್ತು ವಿನಯ್ ಸೇರಿ ಕದಿರೇಶ್ನ ಕೊಂದಿದ್ರು. ಹೀಗಾಗಿ ಕದಿರೇಶ್ ಹತ್ಯೆಗೆ ಕಾರಣರಾದವರನ್ನ ಮುಗಿಸಲು ಪೀಟರ್ ಹಲ್ಲು ಮಸೆಯುತ್ತಿದ್ದ. ಗಾರ್ಡನ್ ಶಿವ, ವಿನಯ್, ನವೀನ್ ಕೊಲೆ ಮಾಡಬೇಕು ಎಂದು ಪೀಟರ್ & ಟೀಂ ತಯಾರಿ ಮಾಡಿಕೊಳ್ಳುತ್ತಿತ್ತು.
ಕದಿರೇಶ್ನನ್ನು ಕೊಂದವರನ್ನು ಕೊಲೆ ಮಾಡಬೇಕು ಸಹಾಯ ಮಾಡು ಎಂದು ಮೊದಲು ಪೀಟರ್, ರೇಖಾಳನ್ನೆ ಕೇಳಿದ್ದ. ಅಣ್ಣ ಕದಿರೇಶ್ ಕೊಲೆಗೆ ಪ್ರತೀಕಾರವಾಗಿ ಕೊಲೆ ಮಾಡಬೇಕು ಸಹಾಯ ಮಾಡಿ ಎಂದು ರೇಖಾರನ್ನು ಬೇಡಿಕೊಂಡಿದ್ದ. ಅದ್ರೆ ಇದಕ್ಕೆ ರೇಖಾ ತಾನು ಯಾವುದೆ ಸಹಕಾರ ಕೊಡಲ್ಲಾ ಎಂದಿದ್ರು. ರೌಡಿಸಂ ಐಡಿಯಾ ಇಲ್ಲದ ರೇಖಾ, ಪೀಟರ್ ಮನವಿಯನ್ನ ತಿರಸ್ಕರಿಸಿದ್ದರು. ಈ ವಿಚಾರಕ್ಕೆ ರೇಖಾ ಮೇಲೆ ಪೀಟರ್ಗೆ ಕೋಪವಿತ್ತು. ಇದೆ ಸಮಯದಲ್ಲಿ ಅರೂಣ್ ಕಳೆದ ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಹೊರಬಂದಿದ್ದ.
ಜೈಲಿನಿಂದ ಹೊರ ಬಂದು ಕದಿರೇಶ್ ಕೊಲೆಗೆ ರೇಖಾ ಕಾರಣ ಎಂದಿದ್ದ. ಆಕೆ ಕದಿರೇಶ್ ಕೊಲೆ ಮಾಡಲು ನವೀನ್, ವಿನಯ್ಗೆ ಸಹಾಯ ಮಾಡಿದ್ದಾಳೆ ಎಂದಿದ್ದ. ಅರೂಣ್ ಮತ್ತು ಮಾಲಾ 4 ತಿಂಗಳ ಹಿಂದೆ ಪೀಟರ್ ಅಂಡ್ ಟೀಮ್ ಜೊತೆ ಮೀಟಿಂಗ್ ಮಾಡಿದ್ದರು. ಮೀಟಿಂಗ್ನಲ್ಲಿ ಪೀಟರ್, ಗಾರ್ಡನ್ ಶಿವನ ಬಗ್ಗೆ ಹೇಳಿದ್ದ. ಅದೇ ಮೀಟಿಂಗ್ನಲ್ಲಿ ಅರೂಣ್ ರೇಖಾ ಬಗ್ಗೆ ಕೂಡ ಸ್ಕೆಚ್ ಹಾಕಿದ್ದ. ಗಾರ್ಡನ್ ಶಿವ ಮತ್ತು ವಿನಯ್ ರನ್ನ ನಂತ್ರ ಮುಗಿಸೋಣ. ಮೊದಲು ರೇಖಾಳನ್ನ ಮುಗಿಸೋಣ ಎಂದು ಮಾತನಾಡಿ ಮೀಟಿಂಗ್ ಮುಗಿಸಿದ್ರು. ಹಲವು ದಿನಗಳ ಕಾಲ ರೇಖಾಳ ದಿನಚರಿ ಅವರು ಯಾವಾಗ ಒಂಟಿಯಾಗಿರುತ್ತಾರೆ ಎಂದು ಗಮನಿಸಿದ್ರು. ಊಟ ನೀಡಿ ವಾಪಸ್ಸು ಹೋಗುವ ಸಮಯದಲ್ಲಿ ಜನರು ಕಡಿಮೆ ಇರ್ತಾರೆ ಅವಾಗ ಕೊಲೆ ಮಾಡೋದು ಎಂದು ಪ್ಲಾನ್ ಫಿಕ್ಸ್ ಮಾಡಿದ್ರು. ಈ ರೀತಿ ಮೃತ ಕದಿರೇಶ್ ಪತ್ನಿ ರೇಖಾ ಕದಿರೇಶ್ರ ಕೊಲೆ ಮಾಡಲಾಗಿದೆ. ಈ ಕೊಲೆಯ ಬಳಿಕ ನಗರದಲ್ಲಿ ಮತ್ತೆ ಮೂರು ಕೊಲೆ ನಡೆಯುವ ಸಾಧ್ಯತೆ ಇತ್ತು. ಸದ್ಯ ಪೊಲೀಸರ ತನಿಖೆಯಿಂದ ಈ ಮೂವರ ಕೊಲೆ ಬಗ್ಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ: ರೌಡಿಶೀಟರ್ ಮನೆಗಳಿಗೆ ಹೋಗಿ ಎಚ್ಚರಿಕೆ ಕೊಟ್ಟ ಡಿಸಿಪಿ