Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂಗೆ ಹಾನಿ: ಸಂಸದೆ ಸುಮಲತಾ ಅಂಬರೀಶ್

ಶ್ರೀರಂಗಪಟ್ಟಣ-ಪಾಂಡವಪುರ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ಸಂಸತ್​ನಲ್ಲಿ ಹಲವು ಬಾರಿ ಚರ್ಚಿಸಿದ್ದೇನೆ. ಈ ವಿಷಯವನ್ನು ಸಚಿವರ ಗಮನಕ್ಕೂ ತಂದಿದ್ದೇನೆ. ಅಕ್ರಮ ಚಟುವಟಿಕೆ ನಿಲ್ಲಿಸಿ ಡ್ಯಾಂ ರಕ್ಷಿಸಬೇಕು. ಅಕ್ರಮ ಚಟುವಟಿಕೆ ನಿಲ್ಲಿಸುವುದು ಜಿಲ್ಲಾಡಳಿತದ ಹೊಣೆಯಾಗಿದ್ದು, ನಾನೂ ಸಹ ಕೈಜೋಡಿಸುತ್ತೇನೆ: ಸಂಸದೆ ಸುಮಲತಾ ಅಂಬರೀಶ್

ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂಗೆ ಹಾನಿ: ಸಂಸದೆ ಸುಮಲತಾ ಅಂಬರೀಶ್
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on: Jul 03, 2021 | 6:59 PM

ಮಂಡ್ಯ: ಶ್ರೀರಂಗಪಟ್ಟಣ-ಪಾಂಡವಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂ ಅಸ್ತಿತ್ವಕ್ಕೆ ಅಡ್ಡಿಯಾಗಿದೆ ಎಂದು ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯೊಂದರಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಶ್ರೀರಂಗಪಟ್ಟಣ-ಪಾಂಡವಪುರ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ಸಂಸತ್​ನಲ್ಲಿ ಹಲವು ಬಾರಿ ಚರ್ಚಿಸಿದ್ದೇನೆ. ಈ ವಿಷಯವನ್ನು ಸಚಿವರ ಗಮನಕ್ಕೂ ತಂದಿದ್ದೇನೆ. ಅಕ್ರಮ ಚಟುವಟಿಕೆ ನಿಲ್ಲಿಸಿ ಡ್ಯಾಂ ರಕ್ಷಿಸಬೇಕು. ಅಕ್ರಮ ಚಟುವಟಿಕೆ ನಿಲ್ಲಿಸುವುದು ಜಿಲ್ಲಾಡಳಿತದ ಹೊಣೆಯಾಗಿದ್ದು, ನಾನೂ ಸಹ ಕೈಜೋಡಿಸುತ್ತೇನೆ. ಅಕ್ರಮ ಗಣಿಗಾರಿಕೆಯ ಹಿಂದೆ ಯಾರೇ ಪ್ರಭಾವಿ ಇದ್ದರೂ ತಡೆಗಟ್ಟಲು ನಾನು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದ್ದರು.

ತಜ್ಞರ ವರದಿಯನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರಕ್ಕೆ ಯಾವ ಸಮಸ್ಯೆಯಿದೆ? ರಾಜಕೀಯಕ್ಕೆ ಕೆಆರ್​ಎಸ್ ಡ್ಯಾಂ ವಿಚಾರ ಬಳಕೆ ಮೂರ್ಖತನ ಎಂದು ಮಂಡ್ಯದಲ್ಲಿ ಜೆಡಿಎಸ್​ ಪಕ್ಷದ ಶಾಸಕ ಎಂ.ಶ್ರೀನಿವಾಸ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಜನರಿಗೆ ಸತ್ಯ ಏನೆಂಬುದನ್ನು ಹೇಳಬೇಕು. ತಜ್ಞರ ವರದಿಯನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರಕ್ಕೆ ಯಾವ ಸಮಸ್ಯೆಯಿದೆ. ಡ್ಯಾಂಗೆ ಸಮಸ್ಯೆ ಇಲ್ಲವಾದರೆ ಜನ ನೆಮ್ಮದಿಯಿಂದ ಇರುತ್ತದೆ. ಇಲ್ಲವಾದರೆ ಜನರು ನಿತ್ಯ ಭಯದಲ್ಲೇ ಬದುಕಬೇಕಾಗುತ್ತದೆ. ಡ್ಯಾಂ ಯಾವತ್ತು ಒಡೆದು ಹೋಗುತ್ತದೆ ಎಂಬ ಭಯವಿದೆ. ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯ ಎಂದು ತಜ್ಞರ ವರದಿ ತಿಳಿಸಿದೆ. ಡ್ಯಾಂ ಸುರಕ್ಷತೆ ಬಗ್ಗೆ ಮೊದಲು ಕ್ರಮ ತೆಗೆದುಕೊಳ್ಳಬೇಕು. ನಾನು ಯಾರ ಪರವೂ ಇಲ್ಲ. ಸಂಸದೆ ಸುಮಲತಾ ಅಂಬರೀಶ್ ಹೇಳಿರೋದು ಸತ್ಯ ಇದ್ದರೆ ಬೆಂಬಲ ಕೊಡುತ್ತೇನೆ ಎಂದು ಶಾಸಕ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 

KRS Dam: ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದರೆ ಸಂತೋಷ, ಆದರೆ ಸತ್ಯಾಸತ್ಯತೆ ಅರಿಯಲು ಅವಕಾಶ ನೀಡಬೇಕು: ಸಂಸದೆ ಸುಮಲತಾ ಅಂಬರೀಶ್

ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು ತೋರಿಸಿದರೆ ಸಾಮೂಹಿಕ ರಾಜೀನಾಮೆ: ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು

(Mandya MP Sumalatha Ambarish says Damage to KRS dam by illegal mining in Shrirangapatna and Pandavapura)