KRS Dam: ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದರೆ ಸಂತೋಷ, ಆದರೆ ಸತ್ಯಾಸತ್ಯತೆ ಅರಿಯಲು ಅವಕಾಶ ನೀಡಬೇಕು: ಸಂಸದೆ ಸುಮಲತಾ ಅಂಬರೀಶ್

KRS Dam: ಮನ್ಮುಲ್‌ಗೆ ಭೇಟಿ ಬಳಿಕ ಹಾಲಿಗೆ ನೀರು ಮಿಶ್ರಣ ಮಾಡಿದ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ ಅಂಬರೀಶ್ ಬಹಳ ಹಿಂದಿನಿಂದಲೂ ಈ ಹಗರಣ ನಡೆದಿದೆ. ಆದರೆ ಏಕೆ ಹಗರಣ ಕಂಡುಹಿಡಿಯಲು ಆಗಲಿಲ್ಲವೆಂಬುದೇ ಪ್ರಶ್ನೆಯಾಗಿದೆ. ಈಗ ಹೇಗೋ ಈ ವಿಷಯ ಹೊರಗೆ ಬಂದಿದೆ ಎಂದು ತಿಳಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದಿದ್ದಾರೆ.

KRS Dam: ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದರೆ ಸಂತೋಷ, ಆದರೆ ಸತ್ಯಾಸತ್ಯತೆ ಅರಿಯಲು ಅವಕಾಶ ನೀಡಬೇಕು: ಸಂಸದೆ ಸುಮಲತಾ ಅಂಬರೀಶ್
ಸುಮಲತಾ ಅಂಬರೀಷ್
Follow us
TV9 Web
| Updated By: guruganesh bhat

Updated on: Jul 02, 2021 | 6:42 PM

ಮಂಡ್ಯ: ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದರೆ ಸಂತೋಷ. ಆದರೆ ಸತ್ಯಾಸತ್ಯತೆ ಅರಿಯಲು ಅವಕಾಶ ಮಾಡಿಕೊಡಬೇಕು ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಈ ಮುನ್ನ ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದಿದ್ದ ಸಂಸದೆ ಸುಮಲತಾ ಅಂಬರೀಶ್ ಈಗ ಬಿರುಕು ಬಿಟ್ಟಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಜತೆಗೆ ಮನ್ಮುಲ್‌ಗೆ ಭೇಟಿ ಬಳಿಕ ಹಾಲಿಗೆ ನೀರು ಮಿಶ್ರಣ ಮಾಡಿದ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ ಅಂಬರೀಶ್ ಬಹಳ ಹಿಂದಿನಿಂದಲೂ ಈ ಹಗರಣ ನಡೆದಿದೆ. ಆದರೆ ಏಕೆ ಹಗರಣ ಕಂಡುಹಿಡಿಯಲು ಆಗಲಿಲ್ಲವೆಂಬುದೇ ಪ್ರಶ್ನೆಯಾಗಿದೆ. ಈಗ ಹೇಗೋ ಈ ವಿಷಯ ಹೊರಗೆ ಬಂದಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಕೆಆರ್​ಎಸ್ ಡ್ಯಾಂನಲ್ಲಿ  ಬಿರುಕು ಇದೆಯೋ ಇಲ್ಲವೋ ಎಂಬುದೇ ಪ್ರಶ್ನೆಯಾಗಿದೆ. ಆದರೆ ಹಿಂದೆ ಏನೆಲ್ಲಾ ಆಗಿದೆ ಎಂಬ ದಾಖಲೆ ಇದೆ. ನೂರು ವರ್ಷದ ಹಿಂದಿನ ಡ್ಯಾಂ ಬಲಪಡಿಸಲು ನೋಡಬೇಕು. ಡ್ಯಾಂ ಹತ್ತಿರ ಬಂದು ಅಕ್ರಮ ಗಣಿಗಾರಿಕೆ ಮಾಡಿದರೆ ಹೇಗೆ? ಕೆಆರ್​ಎಸ್ ಡ್ಯಾಂ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತಿದ್ದೇನೆ. ಹಲವು ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಪಡೆಯುತ್ತಿದ್ದೇನೆ. ರಾಜಕಾರಣದ ಮಾತುಗಳಿಗೆ ಉತ್ತರ ಹೇಳಿ ಕೂತರೆ ಅದು ರಾಜಕಾರಣ ಆಗುತ್ತೆ. ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರೆ ಕೆಲಸ ನಡೆಯುತ್ತಿಲ್ಲ ಎಂದಲ್ಲ. ಡ್ಯಾಂ ಬಿರುಕು ಬಿಟ್ಟಿದೆ ಎಂಬ ನನ್ನ ಹೇಳಿಕೆ ಬಳಿಕ ಹಲವರು ಅವರವರ ಲಾಭ ನಷ್ಟಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಕೆಆರ್​ಎಸ್ ಉಳಿಸುವುದು ನನ್ನ ಉದ್ದೇಶ. ಇನ್ನುಮುಂದೆ ಸೇವ್ ​KRS ಡ್ಯಾಂ ಎಂಬ ಹ್ಯಾಶ್‌ಟ್ಯಾಗ್ ಬಳಸುತ್ತೇನೆ. ಡ್ಯಾಂಗೆ ಹೆಚ್ಚು ಕಡಿಮೆ ಆದರೆ ಏನೆಲ್ಲಾ ಅನಾಹುತ ಆಗಲಿದೆ‌ ಎಂಬ ಅರಿವು ನಮಗಿರಬೇಕು. ಎಲ್ಲರೂ ಒಟ್ಟಾಗಿ ಈ ಬಗ್ಗೆ ಹೋರಾಟ ಮಾಡಬೇಕಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

ಮನ್ಮುಲ್‌ಗೆ ಭೇಟಿ ಬಳಿಕ ಹಾಲಿಗೆ ನೀರು ಮಿಶ್ರಣ ಮಾಡಿದ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ ಅಂಬರೀಶ್ ಬಹಳ ಹಿಂದಿನಿಂದಲೂ ಈ ಹಗರಣ ನಡೆದಿದೆ. ಆದರೆ ಏಕೆ ಹಗರಣ ಕಂಡುಹಿಡಿಯಲು ಆಗಲಿಲ್ಲವೆಂಬುದೇ ಪ್ರಶ್ನೆಯಾಗಿದೆ. ಈಗ ಹೇಗೋ ಈ ವಿಷಯ ಹೊರಗೆ ಬಂದಿದೆ ಎಂದು ತಿಳಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಸಿಬಿಐ ತನಿಖೆ ಆದಲ್ಲಿ ಸ್ಥಳೀಯವಾದ ಒತ್ತಡ ಇರುವುದಿಲ್ಲ. ಸಿಬಿಐನವರು ಸ್ವತಂತ್ರವಾಗಿ ತನಿಖೆ ಮಾಡಬಹುದು. ಜುಲೈ 5ರಂದು ಸಿಎಂ ಜೊತೆ ಸಭೆ ಇದೆ, ಈ ಬಗ್ಗೆ ಪ್ರಸ್ತಾಪಿಸುತ್ತೇನೆ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾದರೂ ನಾನು ಏನನ್ನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 

ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು ತೋರಿಸಿದರೆ ಸಾಮೂಹಿಕ ರಾಜೀನಾಮೆ: ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು

ಮಂಡ್ಯದಲ್ಲಿ ಹಾಲಿಗೆ ನೀರು ಬೆರೆಸಿ ವಂಚನೆ 100 ಕೋಟಿಯ ದೊಡ್ಡ ಹಗರಣ: ಮಾಜಿ ಸಚಿವ ಚಲುವರಾಯಸ್ವಾಮಿ

(MP Sumalatha Ambarish says If KRS Dam is not breaking its very Good news)