ಮಂಡ್ಯದಲ್ಲಿ ಹಾಲಿಗೆ ನೀರು ಬೆರೆಸಿ ವಂಚನೆ 100 ಕೋಟಿಯ ದೊಡ್ಡ ಹಗರಣ: ಮಾಜಿ ಸಚಿವ ಚಲುವರಾಯಸ್ವಾಮಿ

ಪ್ರಭಾವಿ ನಾಯಕರಿಂದಲೇ ಈ ತನಿಖೆ ನಿಂತಿದೆ. ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮಂಡ್ಯ ಭೇಟಿ ವೇಳೆ ತನಿಖೆ ಮಾಡುವಂತೆ ಹೇಳಿದ್ದರು.ಆದರೆ ಈಗ ಯಾಕೆ ಅವರು ಸುಮ್ಮನಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ತನಿಖೆ ನಿಲ್ಲಿಸುವಂತೆ ಮಾತನಾಡಿಲ್ಲ ಎಂದರೆ ಹೇಳಲಿ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಹಾಲಿಗೆ ನೀರು ಬೆರೆಸಿ ವಂಚನೆ 100 ಕೋಟಿಯ ದೊಡ್ಡ ಹಗರಣ: ಮಾಜಿ ಸಚಿವ ಚಲುವರಾಯಸ್ವಾಮಿ
ಹಾಲಿಗೆ ನೀರು ಬೆರೆಸಲು ಉಪಯೋಗಿಸುತ್ತಿದ್ದ ವಾಹನ
Follow us
TV9 Web
| Updated By: guruganesh bhat

Updated on: Jun 28, 2021 | 11:27 PM

ಮಂಡ್ಯ: ನೀರು ಮಿಶ್ರಿತ ಹಾಲು ಪೂರೈಕೆ ಹಗರಣದ ತನಿಖೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಡ್ಡಿಯಾಗಿದ್ದಾರೆ ಎಂಬ ಬಹಿರಂಗಗೊಂಡಿರುವ ಆಡಿಯೋದಲ್ಲಿರುವ ಧ್ವನಿ ತಮ್ಮದೇ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಮಂಡ್ಯ ತಾಲೂಕು ಬಸರಾಳು ಗ್ರಾಮದಲ್ಲಿ ಮಾತನಾಡಿದ ಅವರು, ಆ ಆಡಿಯೋ ನಂದೇ, ನಾನೇ ಮಾತನಾಡಿರುವುದು. ಇದು ನೂರು ಇನ್ನೂರು ಕೋಟಿಯ ದೊಡ್ಡ ಹಗರಣ. ಜವರೇಗೌಡರು ಕಾಲ್ ಮಾಡಿ ಎಚ್ಡಿಕೆ ತನಿಖೆಗೆ ಅಡ್ಡಿಯಾಗಿದ್ದಾರೆ ಎಂದಾಗ ನಿನಗೂ ಗೊತ್ತಾಯ್ತಾ? ಎಂದು ಕೇಳಿದ್ದೇನೆ ಅಷ್ಟೇ. ತನಿಖೆಗೆ ದೇವೇಗೌಡರ ಕುಟುಂಬವೇ ಅಡ್ಡಿ ಎಂದು ಹಲವರು ಮಾತನಾಡುತ್ತಿದ್ದಾರೆ. ಸಿಎಂ ಯಾವುದೇ ಹಗರಣವನ್ನು ಸಿಓಡಿ ನೀಡಲಾಗಿದೆ ಎಂದರೆ ತಕ್ಷಣವೇ ಆದೇಶವಾಗುತ್ತದೆ. ಮನ್‌ಮುಲ್ ಹಗರಣ ಸಿಓಡಿಗೆ ಕೊಡ್ತೀವಿ ಎಂದು ಸಿಎಂ ಯಡಿಯೂರಪ್ಪ ಹೇಳಿ ಹಲವು ದಿನ ಕಳೆದರೂ ಇನ್ನು ಆದೇಶ ಆಗಿಲ್ಲ. ಇದರ ಅರ್ಥ ಏನು..? ಯಾರು ಇದನ್ನ ತಡೆ ಹಿಡಿಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಇದು ನೂರು ಇನ್ನೂರು ಕೋಟಿಯ ದೊಡ್ಡ ಹಗರಣ. 1,200 ಬಿಎಂಸಿ ಕೇಂದ್ರಗಳಿಂದ ಬರುವ ಹಾಲಿಗೆ ನೀರು ಸೇರಿಸಿ ವಂಚನೆ ಮಾಡಲಾಗಿದೆ. ಕಳೆದ ಬಾರಿಯ ಆಡಳಿತ ಮಂಡಳಿ ಹಗರಣ ನಡೆಸಿದ್ದರೂ ತನಿಖೆ ಮಾಡಲಿ. ನಾನು ಈಗಿನ ಆಡಳಿತ ಮಂಡಳಿಯನ್ನು ದೂರುವುದಿಲ್ಲ. ಆದರೆ ಇದು ದೊಡ್ಡ ಹಗರಣ ಆಗಿರುವುದರಿಂದ ಇದು ಸಿಬಿಐ ತನಿಖೆ ಆಗಬೇಕು. ಸಂಸ್ಥೆಯನ್ನು ಸೂಪರ್ ಸೀಡ್ ಮಾಡುವ ಅವಶ್ಯಕತೆ ನನಗಿಲ್ಲ. ತಪ್ಪಿತಸ್ಥರಿಂದ ವಂಚನೆ ಹಣ ವಸೂಲಿ ಆಗಬೇಕು. ನಾನು ಯಾರ ಪರವೂ ಇಲ್ಲ, ಸೂಪರ್ ಸೀಡ್ ಅವಶ್ಯಕತೆ ಇದ್ದರೆ ಮಾಡಬಹುದು.

ಪ್ರಭಾವಿ ನಾಯಕರಿಂದಲೇ ಈ ತನಿಖೆ ನಿಂತಿದೆ. ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮಂಡ್ಯ ಭೇಟಿ ವೇಳೆ ತನಿಖೆ ಮಾಡುವಂತೆ ಹೇಳಿದ್ದರು.ಆದರೆ ಈಗ ಯಾಕೆ ಅವರು ಸುಮ್ಮನಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ತನಿಖೆ ನಿಲ್ಲಿಸುವಂತೆ ಮಾತನಾಡಿಲ್ಲ ಎಂದರೆ ಹೇಳಲಿ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ:ಪ್ರತಿದಿನ ಹೊಸ ತಿರುವು ಕಾಣುತ್ತಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಗರಣಕ್ಕೀಗ ರಾಜಕೀಯ ಲೇಪ, ತನಿಖೆಗೆ ದೊಡ್ಡ ಗೌಡರ ಕುಟುಂಬ ಅಡ್ಡಗಾಲು?

ಹಾಲು ಸಾಗಿಸುವ ಗುತ್ತಿಗೆ ಪಡೆದಿರುವವರಿಂದಲೇ ಹಾಲಿಗೆ ನೀರು ಮಿಕ್ಸ್! ಮಂಡ್ಯದಲ್ಲಿ ಬೆಳಕಿಗೆ ಬಂತು ಭಾರೀ ಗೋಲ್​ಮಾಲ್

(Mandya ManMul milk and water mixture gol maal is the 100 crore scam says Former Minister Cheluvarayaswamy)

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್