Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೆ ಸಿಗಬೇಕಿದ್ದ 5 ಸಾವಿರ ಕೋಟಿಗೆ ನಾನು ಅಡ್ಡಿ ಆಗಲಿಲ್ಲ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ದೇಶದಲ್ಲಿ ಪೆಟ್ರೋಲ್​, ಡೀಸೆಲ್ ಬೆಲೆ ಹೆಚ್ಚಾಗಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆ ಕಾರಣವಾಗಿದೆ. ತೆರಿಗೆ ಇಳಿಕೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟಿದ್ದು, ರಾಜ್ಯಗಳಿಗೆ ಸುಂಕ ಹೆಚ್ಚಿಸುವ ಅಥವಾ ಇಳಿಸುವ ಅವಕಾಶವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕಕ್ಕೆ ಸಿಗಬೇಕಿದ್ದ 5 ಸಾವಿರ ಕೋಟಿಗೆ ನಾನು ಅಡ್ಡಿ ಆಗಲಿಲ್ಲ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ
ನಿರ್ಮಲಾ ಸೀತಾರಾಮನ್ ಅವರನ್ನು ಬಸವರಾಜ್ ಬೊಮ್ಮಾಯಿ ಭೇಟಿಯಾದರು
Follow us
TV9 Web
| Updated By: guruganesh bhat

Updated on: Jul 02, 2021 | 7:27 PM

ಬೆಂಗಳೂರು: ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದಿಂದ ಬರಬೇಕಾಗಿದ್ದ 5,000 ಕೋಟಿಗೆ ನಾನು ಅಡ್ಡಿ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿರುವುದು ಸರಿಯಲ್ಲ ಎಂದು ಬೆಂಗಳೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ತೊಂದರೆ ಮಾಡಬೇಕೆಂದು ನಮ್ಮ ಉದ್ದೇಶವಿರಲಿಲ್ಲ. ಸರ್ಕಾರ ಆದಾಯ ಕೊರತೆ ಪ್ರಮಾಣ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ತೋರಿಸಿದ್ದರಿಂದ ಹಣಕಾಸು ಬಿಡುಗಡೆ ತಡೆಹಿಡಿಯಲಾಗಿತ್ತು. ಕರ್ನಾಟಕ, ತೆಲಂಗಾಣ, ಮಿಜೋರಾಂಗೆ ಹಣ ಬಿಡುಗಡೆ ತಡೆಯಲಾಗಿತ್ತು. ಹೆಚ್ಚುವರಿ ಆದಾಯ ಕೊರತೆ ತೋರಿಸುವುದು ಶೋಭೆ ತರುವುದಿಲ್ಲ ಎಂದು ಅವರು ತಿಳಿಸಿದರು. ನಂತರ ಸುದ್ದಿಗಾರರು ಕೇಳಿದ ಹಾಗಾದರೆ ರಾಜ್ಯ ಹೆಚ್ಚುವರಿ ಆದಾಯ ತೋರಿಸಿ ತಪ್ಪೆಸಗಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಿಂದಲ್ಲದಿದ್ದರೂ ಹಣಕಾಸು ಆಯೋಗದಿಂದ ತಪ್ಪು ಆಗಿರಬಹುದು ಎಂದು ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಹಣಕಾಸು ಅಕ್ರಮಗಳ ಬಗ್ಗೆಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಲ್ಪ ಮಾತನಾಡಲಿ‌. ವಿಪಕ್ಷ ನಾಯಕ ಸಿದ್ದರಾಮಯ್ಯರವರು ತಪ್ಪು ಮಾಹಿತಿ ಕೊಡಬಾರದು ಎಮದು ಅವರು ಆಗ್ರಹಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ದರ ಹೆಚ್ಚಳ ಅನಿವಾರ್ಯವಾಗಿದೆ. ಅಡುಗೆ ಎಣ್ಣೆ ದರ ಏರಿಕೆಗೆ ಕಾರಣವಿದೆ. ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ದೇಶದಲ್ಲಿ ಪೆಟ್ರೋಲ್​, ಡೀಸೆಲ್ ಬೆಲೆ ಹೆಚ್ಚಾಗಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆ ಕಾರಣವಾಗಿದೆ. ತೆರಿಗೆ ಇಳಿಕೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟಿದ್ದು, ರಾಜ್ಯಗಳಿಗೆ ಸುಂಕ ಹೆಚ್ಚಿಸುವ ಅಥವಾ ಇಳಿಸುವ ಅವಕಾಶವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊವಿಡ್ ಪರಿಹಾರ ಪಡೆಯಲು ಮನೆ ಕೆಲಸದವರಿಂದ ಕಮಿಷನ್:​ ಹೈಕೋರ್ಟ್ ಆಕ್ಷೇಪ

National Doctors Day 2021: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊವಿಡ್​ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಎದುರಿಸಿದ ಕೆಲವು ಸಮಸ್ಯೆಗಳು

(Union Finance Minister Nirmala Sitharaman clarifies she is not a reason to stop Karnatakas 5 thousand crore in 15th Finance Commission)