ಸೋಮವಾರದಿಂದ ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನ ಆರಂಭ, ರಾಜ್ಯಪಾಲರ ಸ್ವಾಗತಕ್ಕೆ ಸಿದ್ಧತೆ

| Updated By: ಸಾಧು ಶ್ರೀನಾಥ್​

Updated on: Feb 12, 2022 | 1:39 PM

ಅಧಿವೇಶನದಲ್ಲಿ ಎರಡು ವಿಧೇಯಕಗಳು ಮಂಡನೆಯಾಗಲಿವೆ. ಜೊತೆಗೆ ಇನ್ನೂ ಕೆಲ ವಿಧೇಯಕಗಳ ಮಂಡನೆಗೆ ಸರ್ಕಾರದ ವತಿಯಿಂದ ಸಿದ್ಧತೆ ನಡೆದಿದೆ. ಸುಮಾರು 2,000 ಕ್ಕೂ ಹೆಚ್ಚು ಪ್ರಶ್ನೆಗಳು ಸರ್ಕಾರದಿಂದ ಉತ್ತರ ಬಯಸಿ ಬಂದಿವೆ. ಅಧಿವೇಶನ ವೀಕ್ಷಿಸಲು ಈ ಬಾರಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ.

ಸೋಮವಾರದಿಂದ ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನ ಆರಂಭ, ರಾಜ್ಯಪಾಲರ ಸ್ವಾಗತಕ್ಕೆ ಸಿದ್ಧತೆ
ಸೋಮವಾರದಿಂದ ಕರ್ನಾಟಕ ವಿಧಾನಮಂಡಲ ಜಂಟಿ ಅಧಿವೇಶನ ಆರಂಭ, ರಾಜ್ಯಪಾಲರ ಸ್ವಾಗತಕ್ಕೆ ಸಿದ್ಧತೆ
Follow us on

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ (karnataka legislature joint session) ಸೋಮವಾರದಿಂದ ಫೆಬ್ರವರಿ 14ರಿಂದ ಆರಂಭವಾಗಲಿದೆ. ರಾಜ್ಯಪಾಲರ ಸ್ವಾಗತಕ್ಕೆ ಪೊಲೀಸ್ ಬ್ಯಾಂಡ್, ಅಶ್ವ ದಳದಿಂದ ತಾಲೀಮು ಸಹ ನಡೆದಿದೆ. ಕರ್ನಾಟಕದ 19ನೇ ರಾಜ್ಯಪಾಲದರಾದ ಥಾವರ್ ಚಂದ್ ಗೆಹ್ಲೋಟ್ (Thaawar Chand Gehlot) ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರುಗಳು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ಆಹ್ವಾನಿಸಿದರು.

ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಈವರೆಗೆ 2 ವಿಧೇಯಕಗಳು ನನ್ನ ಕಚೇರಿಗೆ ಬಂದಿವೆ. ಕರ್ನಾಟಕ ಕ್ರಿಮಿನಲ್ ತಿದ್ದುಪಡಿ ವಿಧೇಯಕ ಮತ್ತು ಕರ್ನಾಟಕ ಸ್ಟ್ಯಾಂಪ್ ವಿಧೇಯಕ ನನ್ನ ಕಚೇರಿಗೆ ಬಂದಿದೆ. ಇಲ್ಲಿಯವರೆಗೆ 2 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳು ಬಂದಿವೆ. ಕೊವಿಡ್ ನಿಯಮದಂತೆ ಜಂಟಿ ಅಧಿವೇಶನ ನಡೆಯಲಿದೆ ಎಂದು ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

15ನೇ ಅಸೆಂಬ್ಲಿ ಚಾಲ್ತಿಯಲ್ಲಿದ್ದು, 12ನೇ ಅಧಿವೇಶನ ಇದಾಗಿದೆ. ಸೋಮವಾರದಿಂದ 10 ದಿನಗಳ ಕಾಲ (ಫೆಬ್ರವರಿ 25ವರೆಗೂ) ನಡೆಯಲಿರುವ ಜಂಟಿ ಅಧಿವೇಶನದ ಅಂಗವಾಗಿ ವಿಧಾನಸೌಧದಲ್ಲಿ ಸಿದ್ಧತಾ ಕಾರ್ಯ ನಡೆದಿದೆ. ವಿಧಾನಸೌಧದ ಮೊಗಸಾಲೆಯನ್ನು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ. ಕೊವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಆದ್ಯತೆ ನೀಡಲಾಗಿದೆ.

ಅಧಿವೇಶನದಲ್ಲಿ ಎರಡು ವಿಧೇಯಕಗಳು ಮಂಡನೆಯಾಗಲಿವೆ. ಜೊತೆಗೆ ಇನ್ನೂ ಕೆಲ ವಿಧೇಯಕಗಳ ಮಂಡನೆಗೆ ಸರ್ಕಾರದ ವತಿಯಿಂದ ಸಿದ್ಧತೆ ನಡೆದಿದೆ. ಸುಮಾರು 2,000 ಕ್ಕೂ ಹೆಚ್ಚು ಪ್ರಶ್ನೆಗಳು ಸರ್ಕಾರದಿಂದ ಉತ್ತರ ಬಯಸಿ ಬಂದಿವೆ. ಅಧಿವೇಶನ ವೀಕ್ಷಿಸಲು ಈ ಬಾರಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ.

12ನೇ ಅಧಿವೇಶನ ಮುಗಿದ ಬಳಿಕ ಬಜೆಟ್​ ಅಧಿವೇಶನ ಮಾರ್ಚ್ ಮೊದಲ ವಾರದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್​ ಅನ್ನು ಮಾರ್ಚ್​ ಮೊದಲ ವಾರದಲ್ಲಿ ಮಂಡಿಸಲಿದ್ದಾರೆ. 2023 ಸಾರ್ವತ್ರಿಕ ಚುನಾವಣೆಗೂ ಮುನ್ನ ಆಡಳಿತಾರೂಢ ಬಿಜೆಪಿ ಸರಕಾರದ ಕೊನೆಯ ಬಜೆಟ್​ ಇದಾಗಲಿದೆ.

Also Read:

ಸಿಡಿ ಪ್ರಕರಣ ಕೈಜಾರುವ ಆತಂಕ -ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಾಧಿತ ಯುವತಿ, ಶಾಸಕ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ

Also Read:
Hijab row: ಬೆಂಗಳೂರು ನಗರಕ್ಕೂ ಲಗ್ಗೆಯಿಟ್ಟ ಹಿಜಾಬ್​ ಫೈಟ್? ವಿದ್ಯಾಸಾಗರ್ ಶಾಲೆಯಲ್ಲಿ ಸಂಘರ್ಷ, ಶಿಕ್ಷಕಿ ಕೆಲಸದಿಂದ ವಜಾ

Published On - 1:28 pm, Sat, 12 February 22