ಕೊರೊನಾ ಲಸಿಕೆ ಬರ ಮಾಡಿಕೊಳ್ಳಲು ರಾಜ್ಯದಲ್ಲಿ ಸಕಲ ಸಿದ್ಧತೆ: ಯಾವ ಜಿಲ್ಲೆಗೆ, ಎಷ್ಟು ಲಸಿಕೆ?

|

Updated on: Jan 12, 2021 | 1:40 PM

ಸೆರಮ್ ಇನ್ಸ್‌ಟಿಟ್ಯೂಟ್​ನಿಂದ ಕೊವಿಶೀಲ್ಡ್ ಲಸಿಕೆ ಪೂರೈಕೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕೊರೊನಾ ಲಸಿಕೆ ಬರ ಮಾಡಿಕೊಳ್ಳಲು ರಾಜ್ಯದಲ್ಲಿ ಸಕಲ ಸಿದ್ಧತೆ: ಯಾವ ಜಿಲ್ಲೆಗೆ, ಎಷ್ಟು ಲಸಿಕೆ?
ಲಸಿಕೆ ಸಂರಕ್ಷಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು
Follow us on

ಬೆಂಗಳೂರು: ಸೆರಮ್ ಇನ್ಸ್‌ಟಿಟ್ಯೂಟ್​ನಿಂದ ಕೊವಿಶೀಲ್ಡ್ ಲಸಿಕೆ ಪೂರೈಕೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಸಿಕೆ ಪಡೆಯುವುದಕ್ಕೆ ರಾಜ್ಯದಲ್ಲಿ ಈಗಾಗ್ಲೇ ಅನೇಕ ಜನರು ನೋಂದಣಿ ಮಾಡಿಕೊಂಡಿದ್ದು ಅವರ ಪಟ್ಟಿ ಹೀಗಿದೆ.

1. ದಾವಣಗೆರೆ ಜಿಲ್ಲೆಯಲ್ಲಿ 18,447 ಜನರಿಂದ ನೋಂದಣಿ
2. ಚಾಮರಾಜನಗರ ಜಿಲ್ಲೆಯಲ್ಲಿ 6,250 ಜನರಿಂದ ನೋಂದಣಿ
3. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ಸಾವಿರ ಜನರಿಂದ ನೋಂದಣಿ
4. ಕಲಬುರಗಿ ಜಿಲ್ಲೆಯಲ್ಲಿ 17,400 ಜನರಿಂದ ನೋಂದಣಿ
5. ಗದಗ ಜಿಲ್ಲೆಯಲ್ಲಿ 8,877 ಜನರಿಗೆ ಲಸಿಕೆ ನೀಡಲು ಸಿದ್ಧತೆ
6. ಕೊಪ್ಪಳ ಜಿಲ್ಲೆಯಲ್ಲಿ 10,335 ಜನರಿಗೆ ಲಸಿಕೆ ನೀಡಲು ಸಿದ್ಧತೆ
7. ಚಿತ್ರದುರ್ಗ ಜಿಲ್ಲೆಯಲ್ಲಿ 15,580 ಜನರಿಗೆ ವ್ಯಾಕ್ಸಿನೇಷನ್
8. ಬಾಗಲಕೋಟೆ ಜಿಲ್ಲೆಯಲ್ಲಿ 16 ಸಾವಿರ ಜನರಿಗೆ ವ್ಯಾಕ್ಸಿನ್
9. ಬೀದರ್ ಜಿಲ್ಲೆಯಲ್ಲಿ 9,200 ಜನರಿಗೆ ಲಸಿಕೆ ನೀಡಲು ಸಿದ್ಧತೆ
10. ವಿಜಯಪುರ ಜಿಲ್ಲೆಯಲ್ಲಿ 15,307 ಜನರಿಗೆ ವ್ಯಾಕ್ಸಿನ್
11. ಮಂಡ್ಯ ಜಿಲ್ಲೆಯಲ್ಲಿ 13,531 ಜನರಿಂದ ನೋಂದಣಿ

ರಾಜ್ಯದ ಅತಿದೊಡ್ಡ ಲಸಿಕೆ ಸ್ಟೋರೇಜ್ ಕೇಂದ್ರ ಬೆಂಗಳೂರು
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಜ್ಯದ ಅತಿದೊಡ್ಡ ಲಸಿಕೆ ಸ್ಟೋರೇಜ್ ಕೇಂದ್ರವಿದೆ. ಇಂದು ಮಧ್ಯಾಹ್ನದ ಒಳಗೆ ಬೆಂಗಳೂರಿನ ಲಸಿಕೆ ಸ್ಟೋರೇಜ್ ಕೇಂದ್ರಕ್ಕೆ ಬರಲಿದೆ. ಹೀಗಾಗಿ ವ್ಯಾಕ್ಸಿನ್ ಶೇಖರಣೆ ಮಾಡಲು ಬೆಂಗಳೂರಿನ ಲಸಿಕಾ ಸ್ಟೋರೇಜ್ ನಲ್ಲಿ ಸಕಲ ‌ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್ ಸಾಮರ್ಥ್ಯ ಮತ್ತು ವೈಶಿಷ್ಟ್ಯತೆ

* 11 ಲಕ್ಷದ 24 ಸಾವಿರ ಲಸಿಕೆ ಸಂಗ್ರಹ ಮಾಡಬಹುದು
* ವಾಕ್ ಇನ್ ಫ್ರೀಜರ್ ಮತ್ತು ವಾಕ್ ಇನ್ ಕೂಲರ್ ಒಳಗೊಂಡಿದೆ
* ಒಂದು ಇನ್ ಕೂಲರ್ ನಲ್ಲಿ ,೪೦ ಲಕ್ಷ ಡೋಸ್ ಸಂಗ್ರಹ ಮಾಡಬಹುದು
* ಬೆಂಗಳೂರಿನ ವ್ಯಾಕ್ಸಿನ್ ಸ್ಟೋರೇಜ್ ಸೆಂಟರ್ ನಿಂದ‌ 22 ಜಿಲ್ಲೆಗಳಿಗೆ ಲಸಿಕೆ‌ ಸಾಗಾಟ ಆಗಲಿದೆ
* ಕಾರ್ಪೋರೇಷನ್ ವ್ಯಾಕ್ಸಿನ್ ಸ್ಟೋರ್ ಗೆ ಇದರಿಂದ ಲಸಿಕೆ ಸರಬರಾಜು ಆಗಲಿದೆ (ಬಿಬಿಎಂಪಿ)

ಆಪರೇಷನ್ ವ್ಯಾಕ್ಸಿನೇಷನ್​ಗೆ ದಾವಣಗೆರೆ ಜಿಲ್ಲಾಡಳಿತ ಸಜ್ಜು

ದಾವಣಗೆರೆ ಜಿಲ್ಲೆಯಾದ್ಯಂತ 33 ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್‌ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 18,447 ಮಂದಿಗೆ ಲಸಿಕೆ ನೀಡಲಾಗುತ್ತಿದ್ದು ವ್ಯಾಕ್ಸಿನೇಷನ್​ ನೀಡಲು 175 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಂದು ಲಸಿಕಾ ಕೇಂದ್ರಕ್ಕೆ ತರಬೇತಿ ಪಡೆದ ಇಬ್ಬರು ಸಿಬ್ಬಂದಿ ಇರ್ತಾರೆ. ವ್ಯಾಕ್ಸಿನ್​ಗೆ 104 ILR ಕೋಲ್ಡ್ ಸ್ಟೋರೇಜ್​ಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ರು.

ಚಾಮರಾಜನಗರದಲ್ಲಿ 6,250 ಕಾರ್ಯಕರ್ತರಿಗೆ ಲಸಿಕೆ

ಚಾಮರಾಜನಗರ ಪಟ್ಟಣದ ಜಿಲ್ಲಾ ಆಸ್ಪತ್ರೆ, ಜೆ.ಎಸ್.ಎಸ್. ಖಾಸಗಿ ಆಸ್ಪತ್ರೆ, ಗುಂಡ್ಲುಪೇಟೆಯ ತಾಲೂಕು ಆಸ್ಪತ್ರೆ, ಹನೂರು ತಾಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರೂ ಸೇರಿದಂತೆ ಆರೋಗ್ಯ ಕಾರ್ಯಕರ್ತರು ಹಾಗೂ ಸಿಬ್ಬಂದಿಗೆ ವ್ಯಾಕ್ಸಿನ್ ಹಾಕಲು ತೀರ್ಮಾನ ಮಾಡಲಾಗಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 6,250 ಆರೋಗ್ಯ ಕಾರ್ಯಕರ್ತರನ್ನು ಕೋವಿಡ್ ಲಸಿಕೆ ನೀಡಲು ನೊಂದಾಯಿಸಿಕೊಳ್ಳಲಾಗಿದೆ. ಕೋವಿಡ್ ಲಸಿಕೆ ನೀಡುವ ಸಂಬಂಧ ಎಲ್ಲಾ ಆಸ್ಪತ್ರೆ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪೋಲಿಯೋ ಲಸಿಕೆ ಶೇಖರಣೆ ವಿಧಾನ ಅನುಕರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆಗೆ ವಿತರಣೆಗೆ ತಯಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ವೈದ್ಯಕೀಯೇತರ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತೆ. 10 ಸಾವಿರ ಸರ್ಕಾರಿ ಮತ್ತು 30 ಸಾವಿರ ಖಾಸಗಿ ಸಿಬ್ಬಂದಿ ಸೇರಿ ಒಟ್ಟು 40 ಸಾವಿರ ಮಂದಿ ಮೊದಲ ಹಂತದಲ್ಲಿ ಕೊರೊನ ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಪೋಲಿಯೋ ಲಸಿಕೆಯನ್ನು ಶೇಖರಣೆ ಮಾಡುವ ರೀತಿ ಐ.ಎಲ್.ಆರ್ ಡೀಪ್ ಫ್ರೀಜರ್ ಬಳಸಿ ಕೊರೊನಾ ಲಸಿಕೆಯನ್ನು ಸಂರಕ್ಷಿಸಲಾಗುತ್ತೆ.

ಕಲಬುರಗಿಯಲ್ಲಿ ಭರ್ಜರಿ ಸಿದ್ಧತೆ

ಕಲಬುರಗಿ ಜಿಲ್ಲೆಯಲ್ಲಿ 17,400 ಜನರಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ಹಾಕಲು‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಲಬುರಗಿ ನಗರದಲ್ಲಿ ವಿಭಾಗ ಮಟ್ಟದ ಸ್ಟೋರೇಜ್ ಘಟಕವಿದೆ. ಈ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಸ್ಟೋರೇಜ್ ಘಟಕದಿಂದ ಆಸ್ಪತ್ರೆಗೆ ವ್ಯಾಕ್ಸಿನ್ ತೆಗೆದುಕೊಂಡು ಹೋಗಲು ಐ.ಎಲ್.ಆರ್ ಪ್ರಿಡ್ಜ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ದಿನಕ್ಕೆ 100ಜನ್ರಿಗೆ ಲಸಿಕೆ ಹಾಕಲು ಆರೋಗ್ಯ ಇಲಾಖೆ ರೆಡಿ

ಗದಗ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಹಾಕಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ 48 ಲಸಿಕಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಲಸಿಕೆ ಸಂಗ್ರಹಕ್ಕೆ 48 ILR ಇವೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ 100ಜನ್ರಿಗೆ ಲಸಿಕೆ ಹಾಕಲು ಆರೋಗ್ಯ ಇಲಾಖೆ ರೆಡಿಯಾಗಿದೆ. 8,877 ಸರ್ಕಾರಿ, ಖಾಸಗಿ ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿ ಲಿಸ್ಟ್ ರೆಡಿ ಮಾಡಿಕೊಳ್ಳಲಾಗಿದೆ. ಈಗಾಗಲೇ 29,400 ಲಸಿಕೆ ಹಾಕುವ ಸಿರಿಂಜ್​ಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ ಎಂದು RCHO B. M. ಗೊಜನೂರ ಮಾಹಿತಿ ನೀಡಿದ್ದಾರೆ.

ಲಸಿಕೆ ಸ್ಟೋರೇಜ್ ಕೊರತೆ ಇಲ್ಲ

ಕೊಪ್ಪಳದಲ್ಲಿ ಒಂದು ವಾರದಲ್ಲಿ 10,335 ಜನ ಕೊರೊನಾ ವಾರಿಯರ್ಸ್​ಗೆ ವ್ಯಾಕ್ಸಿನ್ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. 25 ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಪ್ರತಿ ಲಸಿಕಾ ಕೇಂದ್ರದಲ್ಲಿ 100 ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತೆ. ಅವಶ್ಯಕತೆ ಅನುಗುಣವಾಗಿ ಲಸಿಕಾ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ. ಹಾಗೂ ಜಿಲ್ಲಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಟೋರೇಜ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಸುರಲ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ರೀಜನಲ್ ವ್ಯಾಕ್ಸಿನ್ ಡಿಸ್ಟ್ರಿಬ್ಯೂಟರ್ ಸೆಂಟರ್ (ಪ್ರಾಂತೀಯ ಲಸಿಕೆ ವಿತರಣಾ ಕೇಂದ್ರ) ಇದೆ. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗೆ ಲಸಿಕೆ ಸರಬರಾಜು ಮಾಡುವ ಕೇಂದ್ರ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 15,580 ಜನ ಕೋವಿಡ್ ಹೆಲ್ತ್ ವಾರಿಯರ್ಸ್​ಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ತಿಳಿಸಿದ್ದಾರೆ.

ಕೊವಿಶೀಲ್ಡ್ ಲಸಿಕೆ ಪೂರೈಕೆ ಆರಂಭ.. 8 ವಿಮಾನಗಳಲ್ಲಿ ದೇಶದ 13 ಸ್ಥಳಗಳಿಗೆ ಲಸಿಕೆ ಸಾಗಾಟ

Published On - 11:25 am, Tue, 12 January 21